suddi-2 (5)

 

 

ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳ ಸಾಧನೆಗೆ ನೀಡುವ ಗೌರವದ ಜೊತೆ ಗೆ ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚು ಪ್ರೋತ್ಸಾಹಿಸಲು ದೊರಕುವ ಅತಿದೊಡ್ಡ ವೇದಿಕೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಯಶಸ್ವಿ ವ್ಯಕ್ತಿಗಳಾಗಬೇಕು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ಚಿಕ್ಕಮಗಳೂರು    ನಗರದ ರೋಟರಿ ಸಭಾಂಗಣದಲ್ಲಿ ಮಲಬಾರ್ ಗೋಲ್ಡ್ ಜ್ಯೂವೆಲ್ಲರ್ಸ್ ವತಿಯಿಂದ ಮಂಗಳವಾರ ಸಂಜೆ ಆಯೋಜಿಸಿದ್ಧ ಪಿಯುಸಿ ಹಾಗೂ ಡಿಗ್ರಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ನಾಗರೀಕರು ವೈಯಕ್ತಿಕ ಜೀವನಕ್ಕೆ ಸೀಮಿತಗೊಳಿಸದೇ, ದುಡಿಮೆಯ ಒಂದಿಷ್ಟು ಪಾಲನ್ನು ಸಮಾಜದ ಒಳಿತಿಗಾಗಿ ವ್ಯಯಿಸುವ ಕಾಯಕದಲ್ಲಿ ತೊಡಗಬೇಕು. ಆ ರೀತಿಯಲ್ಲಿ ಮಲಬಾರ್ ಜ್ಯೂವೆರ್ಸ್ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ಸಿಎಸ್‍ಆರ್ ನಿಧಿಯಡಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿರು ವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.

ಜಿಲ್ಲೆಯ ಸುಮಾರು 62 ವಿದ್ಯಾರ್ಥಿಗಳಿಗೆ ಮಲಬಾರ್ ಸಂಸ್ಥೆ ಲಾಭಾಂಶದ ಶೇ.5 ರಷ್ಟು ಮೊತ್ತವನ್ನು  ವಿದ್ಯಾರ್ಥಿ ವೇತನವಾಗಿ ನೀಡುತ್ತಿದೆ. ಈ ಪುರಸ್ಕಾರ ಪಡೆದಂಥ ವಿದ್ಯಾರ್ಥಿಗಳು ಸೂಕ್ತ ರೀತಿಯಲ್ಲಿ ಬಳಸಿ ಕೊಂಡು ಕಲಿತಿರುವ ಶಾಲೆ, ಶಿಕ್ಷಕರು ಹಾಗೂ ಪಾಲಕರ ಕೀರ್ತಿ ಹೆಚ್ಚಿಸುವ ರೀತಿಯಲ್ಲಿ ಬೆಳೆಯಬೇಕು ಎಂ ದು ಕಿವಿಮಾತು ಹೇಳಿದರು.

ಪ್ರತಿಭೆ ಅಳೆಯುವುದು ಕೇವಲ ಅಂಕ ಗಳಿಕೆಯಿಂದಲ್ಲ. ಜ್ಞಾನ, ಶಿಸ್ತು, ನಾಯಕತ್ವ ಗುಣ, ಪಠ್ಯೇತರ ಚ ಟುವಟಿಕೆಗಳಾದ ನಾಟಕ, ಕ್ರೀಡೆ, ಕಲೆಗಳಲ್ಲಿ ಭಾಗವಹಿಸಿದಾಗ ಸಮಾಜ ಗುರುತಿಸಿ ಪೆÇ್ರೀತ್ಸಾಹಿಸುತ್ತದೆ. ಕಲಿಕೆ ಗೆ ಕಠಿಣ ಪರಿಶ್ರಮವೇ ಮೂಲ ಮಂತ್ರ. ಹಸಿದವನಿಗೆ ಗೊತ್ತು ಅನ್ನದ ಬೆಲೆಯಂತೆ, ಜ್ಞಾನದ ಹಸಿದವರಿಗೆ ಶಿಕ್ಷಣದ ಬೆಲೆ ತಿಳಿದಿರುತ್ತದೆ ಎಂದರು.

ಪುರಸ್ಕಾರ ಸ್ವೀಕರಿಸಿದ ವಿದ್ಯಾರ್ಥಿಗಳು ವಿನಮ್ರತೆ ಹೊಂದಿರಬೇಕು. ಈ ವಿದ್ಯಾರ್ಥಿ ವೇತನ ಮೊದಲ ಹೆಜ್ಜೆಯಂತೆ ಉಪಯೋಗಿಸಿಕೊಂಡು ಶಿಕ್ಷಣದ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆಯಬೇಕು. ಇದೇ ಪ್ರಥಮ ಅಥವಾ ಅಂತಿಮ ಅಂದುಕೊಳ್ಳದೇ ಮುನ್ನೆಡೆಯಬೇಕು. ಸಮಾಜದಲ್ಲಿ ಪ್ರತಿಭೆ ಯಾವುದೇ ವ್ಯಕ್ತಿಯ ಸ್ವತ್ತಲ್ಲ. ಬಡವರ ಮಕ್ಕಳು ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಬಹುದು ಎಂದು ತಿಳಿಸಿದರು.

ಮಲಬಾರ್ ಗೋಲ್ಡ್ ಜ್ಯೂವೆರ್ಸ್ ಮುಖ್ಯಸ್ಥ ಹಫೀಜ್ ರೆಹಮಾನ್ ಮಾತನಾಡಿ 1993ರಲ್ಲಿ ಪ್ರಾರಂಭ ಗೊಂಡ ಮಲಬಾರ್ ಸಂಸ್ಥೆ ವಿಶ್ವದ ಐದನೇ ಅತಿದೊಡ್ಡ ಆಭರಣದ ಬ್ರಾಂಡ್‍ಆಗಿ ಹೊರಹೊಮ್ಮಿದೆ. ಜಗತ್ತಿ ನ 14 ದೇಶಗಳಲ್ಲಿ 425 ಮಳಿಗೆಗಳು ಹೊಂದಿದ್ದು ಭಾರತದಲ್ಲೇ 278 ಆಭರಣ ಮಳಿಗೆ ಸ್ಥಾಪಿತಗೊಂಡಿದ್ದು ವರ್ಷಕ್ಕೆ 69 ಸಾವಿರ ಕೋಟಿ ರೂ. ವಹಿವಾಟು ನಡೆಸುತ್ತಿದೆ ಎಂದರು.

ಮಲಬಾರ್ ಸಂಸ್ಥೆ ತನ್ನ ಸಿಎಸ್‍ಆರ್ ನಿಧಿಯಡಿ 1500 ಸ್ಥಳಗಳಲ್ಲಿ ಯೋಜನೆಗಳಿಗಾಗಿ ನಿವ್ವಳ ವ್ಯಾ ಪಾರ ಲಾಭದ ಶೇ.5 ರಷ್ಟು ಹಂಚಿಕೆ ಮಾಡಿದೆ. 33ನೇ ವರ್ಷದ ಆಚರಣೆಯ ಅಂಗವಾಗಿ ದೇಶಾದ್ಯಂತ 33 ಸಾವಿರ ವಿದ್ಯಾರ್ಥಿನಿಯರಿಗೆ 30 ಕೋಟಿ ಬಜೆಟ್, ರಾಜ್ಯದಲ್ಲೇ ಸುಮಾರು 7614 ವಿದ್ಯಾರ್ಥಿಗಳು, ಜಿಲ್ಲೆಯಲ್ಲಿ 62 ವಿದ್ಯಾರ್ಥಿನಿಯರಿಗೆ 4.98 ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದರು.

ಸಾಹಿತಿ ನಾಗಶ್ರೀ ತ್ಯಾಗರಾಜ್ ಮಾತನಾಡಿ ವಿದ್ಯಾರ್ಥಿನಿಯರು ಓದಿನ ಹಂತದಲ್ಲಿ ದೃತಿಗೆಡಬಾರದು. ಕುಟುಂಬದ ಸಂಕಷ್ಟಕ್ಕೆ ಶಿಕ್ಷಣವೇ ಮೊದಲ ಮದ್ದು. ಕೆಲ ವರ್ಷಗಳ ನಿರಂತರ ವಿದ್ಯಾರ್ಜನೆಯಲ್ಲಿ ತೊಡಗಿಸಿ ಕೊಂಡಲ್ಲಿ ಯಶಸ್ಸಿನ ಮೆಟ್ಟಿಲು ಏರಬಹುದು. ಎಲ್ಲರಲ್ಲೂ ಒಂದಿಲ್ಲೊಂದು ಸಮಸ್ಯೆ ಸಹಜ. ಇದನ್ನು ಮೀರಿ ನಿಭಾಯಿಸಿದರೆ ಭವಿಷ್ಯದ ಜೀವನ ಸುಂದರವಾಗುತ್ತದೆ ಎಂದು ಸ್ಪೂರ್ತಿ ನೀಡಿದರು.

ಈ ಸಂದರ್ಭದಲ್ಲಿ ಮಲಬಾರ್ ಸಂಸ್ಥೆ ಚಿಕ್ಕಮಗಳೂರು ಶಾಖೆ ಮುಖ್ಯಸ್ಥ ಶ್ರೀನಾಥ್, ಸಾಹಿತಿ ಸತ್ಯನಾ ರಾಯಣ್, ಜಿಲ್ಲಾ ಒಕ್ಕಲಿಗರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ರೀನಾ ಸುಜೇಂದ್ರ, ಪಿಡಿಓ ಶಾಲಿನಿ, ಮಲ ಬಾರ್ ಸಂಸ್ಥೆ ಸಿಬ್ಬಂದಿಗಳಾದ ಅಬ್ದುಲ್ ಕದೀರ್, ರಕ್ಷಿತ್, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶು ಪಾಲ ವಿರೂಪಾಕ್ಷ ಹಾಗೂ ವಿವಿಧ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ