August 16, 2026
suddi-2 (2)

 

 

ಬಡವರ ಪಾಲಿನ ಆಶಾಕಿರಣ ವೃದ್ಧಾಪ್ಯ. ವಿಧವಾ ಪಿಂಚಣಿ ಸೇರಿದಂತೆ ಬಹುತೇಕ ಯೋಜನೆಗಳನ್ನು ಕಾಂಗ್ರೆಸ್ ಸರಕಾರ ನಿಲ್ಲಿಸುವ ಮೂಲಕ ಜನತೆಗೆ ದ್ರೋಹ ಎಸಗಿದೆ ಎಂದು ವಿಧಾನ ಪರಿಷತ್ ಮಾಜಿ ಉಪಸಭಾಪತಿ ಎಂ.ಕೆ.ಪ್ರಾಣೇಶ್ ದೂರಿದರು.

ಅವರು ಶುಕ್ರವಾರ ಮೂಡಿಗೆರೆ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ಮತ್ತು ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡಿದರು. ರಾಜ್ಯ ಸರಕಾರ ಅಭಿವೃದ್ಧಿ ಕಾರ್ಯ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಸಂಕಷ್ಟದಿಂದ ಬದುಕು ಸಾಗಿಸುತ್ತಿರುವ ವಯಸ್ಕರು, ವಿಧವೆಯರು ಸೇರಿದಂತೆ ಈ ಹಿಂದೆ ಬಿಜೆಪಿ ಸರಕಾರ ಕಡುಬಡವರಿಗೆ ನೀಡುತ್ತಿದ್ದÉಲ್ಲಾ ಯೋಜನೆಗಳನ್ನು ನಿಲ್ಲಿಸಿದೆ. ಗೃಹಲಕ್ಷ್ಮಿ ಯೋಜನೆ ಹಣ ನೀಡುತ್ತಿಲ್ಲ. ಗೃಹ ಜ್ಯೋತಿ ಪರಿಷ್ಕರಣೆ ಹೆಸರಲ್ಲಿ ಅದನ್ನು ನಿಲ್ಲಿಸುವ ಹೊನ್ನಾರ ನಡೆಯುತ್ತಿದೆ. ಮಳೆಯಿಲ್ಲದೇ ರಾಜ್ಯ ಬರಗಾಲ ಪ್ರಾರಂಭಗೊಂಡಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಪರಿಹಾರ ನೀಡುವ ಗೋಜೆಗೆ ಹೋಗಿಲ್ಲವೆಂದು ದೂರಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ ಮಾತನಾಡಿ, ಕಾಂಗ್ರೆಸ್ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಈ ಹಿಂದೆ ಬಿಜೆಪಿ ಮಾಡಿದ್ದ ಅಭಿವೃದ್ಧಿ ಕೆಲಸಗಳನ್ನು ಶೇ.10ರಷ್ಟು ಮಾಡಿಲ್ಲ. ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಆ.24ರಂದು ಮೂಡಿಗೆರೆಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಮುಖಂಡರಾದ ಎಂ.ಆರ್.ಜಗದೀಶ್. ರಘು ಜನ್ನಾಪುರ. ಕಲ್ಲೇಶ್ ಮಾಕೋನಹಳ್ಳಿ. ಮನೋಜ್ ಹಳೆಕೋಟೆ. ಕೆಂಜಿಗೆ ಕೇಶವ್, ಪಂಚಾಕ್ಷರಿ ಹಾಲೂರು. ಭರತ್ ಬಾಳೂರು, ಪ್ರಶಾಂತ್ ಬಿಳಗುಳ. ನಯನತಳವಾರ. ಧನಿಕ ಕೊಡದಿಣ್ಣೆ. ರಘುಪಟ್ಟದೂರು. ಸಚಿನ್ ಬಾನಹಳ್ಳಿ ಸಂದೀಪ್ ಕೆಲ್ಲೂರು ಮತ್ತಿತರರಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ