ಚುನಾವಣಾ ಆಯೋಗ ರಾಜ್ಯದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಎಸ್ಐಆರ್ ಬಳಿಕ ರಾಜ್ಯದ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 4.55 ಕೋಟಿ ಅರ್ಹ ಮತದಾರರು ಇದ್ದಾರೆ. ಆ ಮೂಲಕ ರಾಜ್ಯದಲ್ಲಿ ಎಸ್ಐಅರ್ ಬಳಿಕ 1,07,96,339 ಮತದಾರರನ್ನು ಅಂತಿಮ ಪಟ್ಟಿಯಿಂದ ಕೈ ಬಿಡಲಾಗಿದೆ.
ಒಟ್ಟು 4.55 ಕೋಟಿ ಮತದಾರರ ಪೈಕಿ 2,25,50,493 ಪುರುಷ ಮತದಾರರು ಇದ್ದರೆ, 2,29,12,355 ಮಹಿಳಾ ಮತದಾರರು ಇದ್ದಾರೆ. ಇದರೊಂದಿಗೆ ಪುರುಷರಿಗಿಂತ ಮಹಿಳಾ ವೋಟರ್ಸ್ ಹೆಚ್ಚಿದ್ದಾರೆ. 44,322 ಸೇವಾ ಮತದಾರರು, 3252 ಭಾರತದ ಪೌರತ್ವ ಹೊಂದಿರುವ ಹೊರದೇಶದಲ್ಲಿರುವ ಮತದಾರರು, 5,65,340 ವಿಶೇಷಚೇತನ ಮತದಾರರು, 18-19 ವರ್ಷದೊಳಗಿನ ಮತದಾರರು 6,83,364 ಇದ್ದಾರೆ. ಇನ್ನು 85 ವರ್ಷದ ಮೇಲ್ಪಟ್ಟ ಮತದಾರರ ಸಂಖ್ಯೆ 3,92,134.
ಜಿಲ್ಲಾವಾರು ಮತದಾರರ ಅಂಕಿ ಸಂಖ್ಯೆ ನೋಡುವುದಾರೆ, ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾರರು ಇದ್ದರೆ, ಕೊಡಗು ಜಿಲ್ಲೆಯಲ್ಲಿ ಅತಿ ಕಡಿಮೆ ಮತದಾರರು ಇದ್ದಾರೆ.
- ಬೆಳಗಾವಿ: 36,35,860 ಮತದಾರರು
- ಬೆಂಗಳೂರು ನಗರ: 24,01,939
- ಮೈಸೂರು: 22,80,067
- ತುಮಕೂರು: 20,94,762
- ಕಲಬುರಗಿ: 18,94,144
- ವಿಜಯಪುರ: 17,08,099
- ದಕ್ಷಿಣ ಕನ್ನಡ 16,78,448
- ಮಂಡ್ಯ: 14,27,462
- ರಾಯಚೂರು: 14,24,909
- ಬಾಗಲಕೋಟೆ: 14,13,341
- ಹಾಸನ: 13,93,908
- ಧಾರವಾಡ:13,78,016
- ಶಿವಮೊಗ್ಗ: 13,54,046
- ಬೆಂಗಳೂರು ಉತ್ತರ: 13,25,284
- ದಾವಣಗೆರೆ: 13,20,819
- ಚಿತ್ರದುರ್ಗ: 12,46,746
- ಬೀದರ್: 12,46,746
- ಹಾವೇರಿ: 12,33,294
- ಉತ್ತರ ಕನ್ನಡ: 11,39,623
- ಕೋಲಾರ: 11,39,393
- ಬೆಂಗಳೂರು ದಕ್ಷಿಣ 11,13,554
- ಬೆಂಗಳೂರು ಸೆಂಟ್ರಲ್: 10,67,374
- ಕೊಪ್ಪಳ: 10,59,164
- ಬಳ್ಳಾರಿ: 10,20,264
- ಉಡುಪಿ: 10,14,143
- ವಿಜಯನಗರ: 10,08,367
- ಚಿಕ್ಕಬಳ್ಳಾಪುರ: 9,53,372
- ಯಾದಗಿರಿ: 8,87,174
- ಚಿಕ್ಕಮಗಳೂರು: 8,74,462
- ರಾಮನಗರ: 8,39,039
- ಬೆಂಗಳೂರು ಗ್ರಾಮಾಂತರ: 8,04,534
- ಚಾಮರಾಜನಗರ: 8,00,858
- ಗದಗ: 7,94,567
- ಕೊಡಗು 4,11,632


