ಮೂಡಿಗೆರೆ ತಾಲೂಕು ಭೌಗೋಳಿಕವಾಗಿ ಅತ್ಯಂತ ಆಹ್ಲಾದಕರ ವಾತಾವರಣ ಹೊಂದಿದ್ದು, ಇಲ್ಲಿಗೆ ಬರುವವರು ಮತ್ತೆ ಮತ್ತೆ ತಿರುಗಿ ನೀಡುವಂತೆ ಮಾಡು ಪ್ರಕೃತಿ ಸೌಂದರ್ಯ, ಗುಡಿ ಗೋಪುರಗಳು, ಬೆಟ್ಟ ಗುಡ್ಡಗಳು, ನದಿ ಮೂಲಗಳನ್ನು ಹೊಂದಿದೆ ಸಾಹಿತಿ, ಸಮ್ಮೇಳನಾಧ್ಯಕ್ಷ ಮೇಕನಗದ್ದೆ ಲಕ್ಷ್ಮಣ್ಗೌಡ ಹೇಳಿದರು.
ಅವರು ಶುಕ್ರವಾರ ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಮಡ್ಡಿಕೆರೆ ಗೋಪಾಲ್ ಮಹಾ ವೇದಿಕೆಯಲ್ಲಿ ಏರ್ಪಡಿಸಿದ್ದ 7ನೇ ತಾಲೂಕು ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕಿನ ಮೊಟ್ಟ ಮೊದಲ ಸಾಹಿತಿ ಸಂಶೋಧಕ ದಿವಂಗತ ಮಾಕೋನಹಳ್ಳಿ ದೊಡ್ಡಪ್ಪಗೌಡರಿಂದ ಆರಂಭಿಸಿ ಇಂದಿನವರೆಗೂ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ನೂರಾರು ಜನರು ಕನ್ನಡಾಂಬೆಯ ತೇರನ್ನು ನಿರಂತರವಾಗಿ ಎಳೆಯಲು ಕಂಕಣ ಬದ್ದರಾಗಿರುವವರ ಪಡೆ ಇಲ್ಲಿದೆ. ಕನ್ನಡ ಸಾಹಿತ್ಯ ಲೋಕದ ದ್ರುವತಾರೆ ಪೂರ್ಣ ಚಂದ್ರ ತೇಜಸ್ವಿ ಅವರು ಇಲ್ಲಿ ನೆಲೆಸಿದ್ದು ನಮ್ಮ ಸೌಬಾಗ್ಯವೆಂದು ಹೇಳಿದರು.

ಇಲ್ಲಿರುವ ಜನಪದ ಸಾಹಿತ್ಯ ಹಾಡು,. ಕಥೆ, ಸುಗ್ಗಿ ಲಾವಣಿ, ಕೋಲಾಟ, ಸಸಿ ಕೀಳುವಾಗ ಗದ್ದೆ ನಾಟಿಮಾಡುವಾಗ ಹುಲ್ಲು ಕಟ್ಟುವಾಗ, ಹೇಳುತ್ತಿದ್ದ ಹಾಡುಗಳು ಅನೇಕವಿದ್ದವು. ಇದರೊಂದಿಗೆ ಆಯಾ ಗ್ರಾಮದಲ್ಲಿ ಇರುವ ಐತಿಹ್ಯಗಳು ಸ್ಥಳನಾಮಗಳು ಇವೆಲ್ಲಾ ನಮ್ಮ ಪರಂಪರೆಯನ್ನು ತೆರೆದಿಡುತ್ತವೆ. ನಮ್ಮ ಸಾಂಸ್ಕøತಿಕ ವಿಶ್ವ ವಿದ್ಯಾಲಯಗಳಂತಿರುವ ಹಳ್ಳಿಗಳಲ್ಲಿನ ಹಿರಿಯ ತಲೆಮಾರಿನವರು ಕಣ್ಮರೆಯಾಗುವ ಮುನ್ನ ಅವರಲ್ಲಿರುವ ಲಿಖಿತ ಜ್ಞಾನ ಭಂಡಾರವನ್ನು ಸಂಗ್ರಹಿಸಿ ದಾಖಲಿಸುವ ಮೂಲಕ ಮುಂದಿನ ಪೀಳಿಗೆಗೆ ಅವುಗಳನ್ನು ಕಾಪಿಡುವ ಕಾರ್ಯ ತುರ್ತಾಗಿ ಆಗಬೇಕಿದೆ. ಅಲ್ಲದೇ ಪ್ರತಿ ಹಳ್ಳಿಗಳಲ್ಲಿ ತನ್ನದೇ ಆದ ಸಾಂಸ್ಕøತಿಕ, ಪಾರಂಪರಿಕ, ಐತಿಹಾಸಿಕ ಹಿನ್ನಲೆ ಇರುವುದು ಕಂಡು ಬರುತ್ತಿದೆ. ತಾಲೂಕಿನ ಬೀಜವಳ್ಳಿಯಲ್ಲಿ ಹೊಯ್ಸಳ ಸಾಮ್ರಾಜ್ಯ ರಾಜ ವಿಷ್ಣುವರ್ಧನ ಅವರ ಸಮಾಧಿ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪುರಾತತ್ವ ಇಲಾಖೆ ಗಮನಹರಿಸಬೆಕೆಂದು ಹೇಳಿದರು.
ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ರಾಜ್ಯ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್ ; ಕನ್ನಡ ಭಾಷೆಯ ಉಳಿವು ಕೇವಲ ಸರಕಾರದ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ಕನ್ನಡಿಗನೂ ತನ್ನ ದೈನಂದಿನ ಬದುಕಿನಲ್ಲಿ ಕನ್ನಡವನ್ನು ಗೌರವದಿಂದ ಬಳಸುವ ಮನೋಭಾವ ಬೆಳೆಸಿಕೊಂಡರೆ ಮಾತ್ರ ಕನ್ನಡ ಭಾಷೆ ಉಳಿಸಿಕೊಳ್ಳಲು ಸಾಧ್ಯವಿದೆ, ಮಾತೃಭಾಷೆಯಲ್ಲಿಯೇ ಶಿಕ್ಷಣ ಪಡೆದು, ತಮ್ಮದೇ ಭಾಷೆಯಲ್ಲಿ ಸಾಧನೆಯ ಶಿಖರಕ್ಕೇರಿರುವ ಅನೇಕ ಮಹನೀಯರು ನಮ್ಮ ಮುಂದಿದ್ದಾರೆ. ಬಹುತೇಕ ದೇಶಗಳು ತಮ್ಮ ಸ್ಥಳೀಯ ಮಾತೃಭಾಷೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಆಂಗ್ಲ ಭಾಷೆಯನ್ನು ವ್ಯಾವಹಾರಿಕ ಉದ್ದೇಶಕ್ಕೆ ಬಳಸುತ್ತಿವೆ. ಇದನ್ನು ಕನ್ನಡಿಗರು ಮಾಡಬೇಕೆಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಸಾಕಷ್ಟು ಶಿಲಾಶಾಸನಗಳಿದ್ದು, ಅವುಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ, ಹಿಂದಿನ ರಾಜರ ಆಳ್ವಿಕೆ ಹಾಗೂ ಅಂದಿನ ಕವಿಗಳ ಕುರಿತಾದ ಮಹತ್ವದ ಐತಿಹಾಸಿಕ ಉಲ್ಲೇಖಗಳಿವೆ. ಕನ್ನಡದ ಇತಿಹಾಸ, ಹಿರಿಮೆ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ, ಭಾಷೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದಲೇ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿದೆ ಎಂದ ಅವರು, ಸುಮಾರು 1.40 ಕೋಟಿ ಜನಸಂಖ್ಯೆ ಹೊಂದಿರುವ ಬೆಂಗಳೂರು ಮಹಾನಗರದಲ್ಲಿ ಕನ್ನಡ ಭಾಷೆ 5ನೇ ಸ್ಥಾನಕ್ಕೆ ಕುಸಿದಿರುವುದು ದೊಡ್ಡ ದುರಂತ. ಸರಕಾರಿ ಶಾಲೆಗಳಲ್ಲಿ ಸಿಗುವ ಉತ್ತಮ ಅನುಭವಿ ಶಿಕ್ಷಕರು ಖಾಸಗಿ ಶಾಲೆಗಳಲ್ಲಿ ಸಿಗುವುದಿಲ್ಲ. ಹೀಗಾಗಿ ಸರಕಾರಿ ಶಾಲೆಗಳನ್ನು ಮುಚ್ಚುವ ಅಥವಾ ಕಡೆಗಣಿಸುವ ಬದಲು, ಅಗತ್ಯ ಮೂಲಸೌಕರ್ಯ ಕಲ್ಪಿಸಿ ಅವುಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕೆಂದು
