November 1, 2026
;
jds 1

 

 

ರಾಜ್ಯದಲ್ಲಿ 120 ಸ್ಥಾನ ಗೆಲ್ಲಿಸಿಕೊಟ್ಟರೆ ಪಂಚರತ್ನ ಯೋಜನೆ ಜಾರಿ ಮಾಡುವ ಮೂಲಕ ರಾಜ್ಯದ ಜನತೆ ನೆಮ್ಮದಿಯಿಂದ ಬದುಕುವಂತ ವಾತಾವರಣ ಸೃಷ್ಟಿ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಅವರು ಬುಧವಾರ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಏರ್ಪಡಿಸಿದ್ದ ಪಂಚರತ್ನ ರಥಯಾತ್ರೆ ಯೋಜನೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಹಾಗೂ ಕಾಂಗ್ರೆಸ್‍ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಮಿಶ್ರ ಸರಕಾರ ನಡೆಸುವ ಆಸೆ ನನಗಿರಲಿಲ್ಲ. ತನ್ನ ರೈತರು ಸಂಕಷ್ಟಕ್ಕೀಡಾಗಬಾರದು. ಅಧಿಕಾರವಿದ್ದರೆ ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂಬ ದೃಷ್ಟಿಯಿಂದ ಹೊಂದಾಣಿಕೆ ಮಾಡಿಕೊಳ್ಳಬೇಕಾಯಿತು. ಅವರ ವಿರೋಧದ ನಡುವೆಯೂ 26 ಲಕ್ಷ ರೈತ ಕುಟುಂಬಕ್ಕೆ ಸಾಲ ಮನ್ನಾ ಮಾಡಿದ್ದೇನೆ. ಅಂದು ತಾನು ಮುಳ್ಳಿನ ಹಸಿಗೆಯಲ್ಲಿ ಇದ್ದೆ. ಎಲ್ಲವನ್ನೂ ಸಹಿಸಿಕೊಂಡು ರೈತರ ಹಾಗೂ ಈ ರಾಜ್ಯದ ಜನತೆ ಹಿತ ಕಾಪಾಡುವಲ್ಲಿ ಶ್ರಮಿಸಿದ್ದೇನೆ.
ಈ ಬಾರಿ ರಾಜ್ಯದಲ್ಲಿ 120 ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡು ಹೊರಟಿದ್ದೇನೆ. ಬಿಜೆಪಿ, ಕಾಂಗ್ರೆಸ್ ಆಡಳಿತವನ್ನು ದೇವೇಗೌಡರ ಆಡಳಿತದ ಬಗ್ಗೆ ಜನರು ತಾಳೆ ಹಾಕಿ ನೋಡಿದ್ದಾರೆ. ಜೆಡಿಎಸ್ ಸ್ವತಂತ್ರ ಸರಕಾರ ರಚಿಸಿಬೇಕೆಂದು ಜನ ತೀರ್ಮಾನ ಮಾಡಿದ್ದಾರೆ. ನನಗೆ ಆಶೀರ್ವಾದ ಮಾಡಿದರೆ ನಿಮ್ಮ ಋಣ ತಾನು ತೀರಿಸುತ್ತೇನೆ. ಕೇವಲ ರೈತರ ಸಾಲ ಮನ್ನಾ ಮಾಡುವುದರಿಂದ ಸಮಸ್ಯೆ ಬಗೆ ಹರಿಯುವುದಿಲ್ಲ. ಬದಲಾಗಿ ಬೆಳೆದಂತ ಬೆಳೆಗೆ ಬೆಂಬಲ ಬೆಲೆ ಸಿಗುವ ರೀತಿಯಲ್ಲಿ ಹಾಗೂ ರೈತ ಕುಟುಂಬ ನೆಮ್ಮದಿಯಿಂದ ಬದುಕಲು ಪಂಚರತ್ನ ಯೋಜನೆಗೆ 2.5 ಲಕ್ಷ ಕೋಟಿ ಹಣ ಕ್ರೂಢೀಕರಿಸುವ ಮೂಲಕ ಕೂಲಿ ಕಾರ್ಮಿಕರು, ಯುವಜನರು, ದಲಿತರು, ಮಹಿಳೆಯರು, ಮಕ್ಕಳು ನೆಮ್ಮದಿಯಿಂದ ಬದುಕುವ ವಾತಾವರಣ ಸೃಷ್ಟಿ ಮಾಡಲಾಗುವುದು ಎಂದು ಹೇಳಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಹೊರ ದೇಶಕ್ಕೆ ಹೋದರೂ ಈ ದೇಶದ ಸಂಸ್ಕøತಿ ಬಿಡಲಿಲ್ಲ. ಆದರೆ ಬಿಜೆಪಿಯವರ ಸಂಸ್ಕøತಿ ಏನೆಂದು ಜನರ ಗಮನಿಸುತ್ತಿದ್ದಾರೆ. ಇಂಗ್ಲೇಂಡ್‍ನಲ್ಲಿ ನೆಹರು, ಗಾಂಧಿ ಮಾತ್ರವಲ್ಲ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಯಾಕೆ ಬರೆದಿದ್ದಾರೆಂದು ಸಿ.ಟಿ.ರವಿ ತಿಳಿದುಕೊಳ್ಳಬೇಕು. ಕುಪ್ಪಳ್ಳಿಯಲ್ಲಿ 15 ದಿನ ತಪಸ್ಸು ಮಾಡಿ ಬರಲಿ. ಆಗಲಾದರೂ ಒಳ್ಳೆ ಬುದ್ದಿ ಬರಬಹುದು. ಸಿ.ಟಿ.ರವಿ ಅವರೇ ನಮ್ಮ ನಾಯಕ ಕುಮಾರಣ್ಣ ಮುಖ್ಯಮಂತ್ರಿ ಆಗದಿದ್ದರೆ ತಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ. ನೀವು ನಿವೃತ್ತಿ ಹೊಂದಲು ತಯಾರಿದ್ದೀರಾ ಎಂದು ಸವಾಲು ಹಾಕಿದ ಅವರು, ದೇವೇಗೌಡರು ಪ್ರಧಾನಿಯಾದಾಗ ಕೇವಲ 16 ತಿಂಗಳಲ್ಲಿ 25 ಸಾವಿರ ಕೋಟಿ ರೂ ರೈತರ ಸಾಲ ಮನ್ನಾ ಮಾಡಿದರು. 18ಸಾವಿರ ಕೋಟಿ ರೂ ನೀರಾವರಿಗೆ ಕೊಟ್ಟರು. ಇದು ಮೋದಿ ಸಾಧ್ಯವಾಯಿತೇ? ಬಿಜೆಪಿ ಅವರ ಎಂಟ್ರಿಯಿಂದಾಗಿ ವಿಧಾನಸೌಧ ಸಂಪೂರ್ಣ ಮೈಲಿಗೆ ಆಗಿದೆ. ಮೇ ತಿಂಗಳಲ್ಲಿ ಕುಮಾರಣ್ಣ ಮುಖ್ಯಮಂತ್ರಿ ಆದ ಮೇಲೆ ಕಾವೇರಿ ನೀರು ತಂದು ನವಗಹ್ರಹ ಪೂಜೆ ಮಾಡಿ ವಿಧಾನಸೌಧ ಸ್ವಚ್ಛಗೊಳಿಸಿ ನಂತರ ಸೀಟಿನಲ್ಲಿ ಕೂರಲಿದ್ದಾರೆಂದು ಹೇಳಿದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಸ್ವಾತಂತ್ರ್ಯ ಬಂದ ಬಳಿಕ ಜನಪರವಾದ ಯೋಜನೆ ರೂಪಿಸಿಕೊಂಡು ಬಂದಿರುವ ಏಕೈಕ ಮುಖ್ಯಮಂತ್ರಿ ಇದ್ದರೆ ಅದು ಎಚ್.ಡಿ.ಕುಮಾರಸ್ವಾಮಿ ಅವರು. ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ ರೈತರ ಸಂಕಷ್ಟಕ್ಕೆ ಕುಮಾರಣ್ಣ ಆಗಮಿಸಿದ್ದಾರೆ. ಕಳಸ ತಾಲೂಕು ಘೋಷಣೆ ಮಾಡಿದ್ದಾರೆ. ಇನಾಂ ಭೂಮಿ ವಿಚಾರ ಬಂದಾಗ ಜನರ ಕಷ್ಟ ಸುಖಕ್ಕೆ ಆಗಮಿಸಿದ್ದಾರೆ. ಮಾಣವ ಮತ್ತು ಪ್ರಾಣಿಗಳ ಸಂಘರ್ಷ ಹೆಚ್ಚಾಗಿದೆ. ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕುಮಾರಣ್ಣ ಮುಖ್ಯಮಂತ್ರಿಯಾಗಲೇಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹೇಮಾವತಿ ನದಿ ಉಗಮ ಹಿತರಕ್ಷಣಾ ಒಕ್ಕೂಟದಿಂದ ಹೇಮಾವತಿ ನದಿ ಮೂಲ ಹಾಗೂ ಸಮಗ್ರ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಲು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಸರಕಾರಿ ನೌಕರರ ಸಂಘದ ವತಿಯಿಂದ ಹಳೆ ಪಿಂಚಣಿ ಜಾರಿಗಾಗಿ ಮನವಿ ಸಲ್ಲಿಸಿದರು. ರೈತ ಸಂಘದಿಂದ ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಲು ಮನವಿ ಸಲ್ಲಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಜೆ.ಸುರೇಶ್‍ಗೌಡ ವಹಿಸಿದ್ದರು. ಎಂಎಲ್‍ಸಿ ಎಸ್.ಎಲ್.ಭೋಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಸೇರಿದಂತೆ ಅನೇಕ ಹಿರಿಯ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಿರಂತರ ಸುದ್ದಿಗಳಿಗಾಗಿ ದರ್ಪಣ ನ್ಯೂಸ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ
https://chat.whatsapp.com/DDXjmfQaBa0HJQqmKf7y89


 

 

Leave a Reply

Your email address will not be published. Required fields are marked *