teacher

 

 

ಕಾಣೆಯಾಗಿದ್ದ  ಖಾಸಗಿ  ಶಾಲೆಯ ಶಿಕ್ಷಕಿ ಮಂಗಳೂರಿನ  ದರ್ಗಾವೊಂದರ ಬಳಿ  ಪತ್ತೆಯಾಗಿದ್ದಾರೆ.

ಮೂಡಿಗೆರೆ ತಾಲ್ಲೂಕಿನ ಬಣಕಲ್ ಖಾಸಗಿ ಶಾಖೆಯೊಂದರ ಶಿಕ್ಷಕಿ ಆಸಿಯಾ ಬುಧವಾರ ಚಿಕ್ಕಮಗಳೂರಿನಿಂದ ಬಣಕಲ್ ಶಾಲೆಗೆ ಆಗಮಿಸಿ ನಂತರ ಕೆಲ ಹೊತ್ತಿನಲ್ಲಿಯೇ ಮನೆಗೆ ತುರ್ತಾಗಿ ಹೋಗಬೇಕು ಎಂದು ಮುಖ್ಯ ಶಿಕ್ಷಕರಲ್ಲಿ ರಜೆ ಹಾಕಿ ಮನೆಗೆ ಹೋಗುತ್ತೇನೆಂದು ತೆರಳಿದವರು ನಾಪತ್ತೆಯಾಗಿದ್ದರು.

ಆಸೀಯ ರಾತ್ರಿಯಾದರೂ ಮನೆಗೆ ಬಾರದ ಹಿನ್ನಲೆಯಲ್ಲಿ ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ದಾಖಲಿಸಿದ್ದರು. ದೂರು ದಾಖಲಿಸಿದ ಬಳಿಕ ಕುಟುಂಬಸ್ಥರು ಹುಡುಕಾಡಿದ್ದಾರೆ.

ನಂತರ ಮಾಧ್ಯಮಗಳಲ್ಲಿಯೂ ಭಾವಚಿತ್ರ ಸಹಿತ ಸುದ್ದಿ ಪ್ರಕಟವಾಗಿತ್ತು. ಸುದ್ದಿಯನ್ನು ಗಮನಿಸಿ ನಾಪತ್ತೆಯಾದ ಮಹಿಳೆಯ ಮಂಗಳೂರಿನ ಉಳ್ಳಾಲ ದರ್ಗಾ ಬಳಿ ಕುಳಿತುಕೊಂಡಿದ್ದ ಬಗ್ಗೆ ಮಾಹಿತಿ ದೊರೆತಿದೆ.

ಮಂಗಳೂರಿನ ಬಿಸಿ ರಸ್ತೆಯಲ್ಲಿ ಆಸಿಯಾ ಕುಟುಂಬಸ್ಥರು ಉಳ್ಳಾಲ ದರ್ಗಾಕ್ಕೆ ತೆರಳಿ ನಾಪತ್ತೆಯಾಗಿದ್ದ ಮಹಿಳೆಯನ್ನು ಮನೆಗೆ ಕರೆತಂದಿದ್ದಾರೆ.

ಶಿಕ್ಷಕಿ ಯಾವ ಕಾರಣಕ್ಕಾಗಿ ಶಾಲೆಯಿಂದ ಮನೆಗೆ ತೆರಳದೇ ನೇರವಾಗಿ ಮಂಗಳೂರಿಗೆ ತೆರಳಿ ದರ್ಗಾದ ಬಳಿ ಹೋಗಿದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಒಟ್ಟಾರೆ ಎರಡು ದಿನಗಳ ಕಾಲ ಕುಟುಂಬದವ ಆತಂಕಕ್ಕೆ ಕಾರಣವಾಗಿದ್ದ ಶಿಕ್ಷಕಿ ನಾಪತ್ತೆ ಪ್ರಕರಣ ಸುಖಾಂತ್ಯವಾಗಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ