October 31, 2026
;
IMG-20261030-WA0285

 

 

ಬಣಕಲ್ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ (PACS) ದಿನಾಂಕ 30/10/2026 ರಂದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 24ನೇ ಕಂತು ಬಿಡುಗಡೆ ಕಾರ್ಯಕ್ರಮದ ನೇರ ಪ್ರಸಾರವನ್ನು ರೈತರಿಗೆ ವಿಡಿಯೋ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.

​ಇದರೊಂದಿಗೆ ಕೃಷಿ ಇಲಾಖೆಯ ‘ಆತ್ಮ’ (ATMA) ಯೋಜನೆಯಡಿ ‘ಖೇತ್ ಬಚಾವೋ – ಕೃಷಿ ಭೂಮಿ ಉಳಿಸಿ’ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಆತ್ಮ ಯೋಜನೆಯ ಸಿಬ್ಬಂದಿ ಪವಿತ್ರ ಅವರು, “ರೈತರು ನೀರನ್ನು ಮಿತವಾಗಿ ಹಾಗೂ ವೈಜ್ಞಾನಿಕವಾಗಿ ಬಳಸಬೇಕು. ಭವಿಷ್ಯದ ದೃಷ್ಟಿಯಿಂದ ನೀರಿನ ಸದ್ಬಳಕೆ ಮತ್ತು ಮಣ್ಣಿನ ಆರೋಗ್ಯ ರಕ್ಷಣೆ ಅತ್ಯಂತ ಅಗತ್ಯ,” ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಬಣಕಲ್ ವಿ ಎಸ್ ಎಸ್ ಎನ್ ಆಡಳಿತ ಮಂಡಳಿಯ ನಾರಾಯಣ ಗೌಡ, ವಿಕ್ರಂ, ಗಜೇಂದ್ರ, ಅಭಿಲಾಷ್, ಶರತ್, ನಿಶಾಂತ್, ರಂಗನಾಥ್, ಚಂದ್ರೇಗೌಡ, ನಾಗೇಶಗೌಡ, ರವೀಂದ್ರ ಹಾಗೂ ಕೃಷಿ ಇಲಾಖೆಯ ಸಿಬ್ಬಂದಿಗಳಾದ ಪವಿತ್ರ, ಶೈಲಜಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತ ಬಾಂಧವರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *