fasdfadf_page-0001

 

 

ಮೂಡಿಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಿಂಗನಾಯಕ್ (58) ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಲಿಂಗನಾಯಕ್ ಅವರು ಜನವರಿ 1ರಂದು ಬೆಳಗ್ಗೆ 8 ಗಂಟೆಗೆ ಮನೆಯಿಂದ ಹಾಲು ತರುತ್ತೇನೆಂದು ಪಟ್ಟಣಕ್ಕೆ ಹೋದವರು ಮರಳಿ ಮನೆಗೆ ತೆರಳಿಲ್ಲ. ಹಾಲು ತರಲು ಹೋದವರು ಇನ್ನೂ ಮನೆಗೆ ಬರಲಿಲ್ಲವೆಂದು ಅವರ ಪತ್ನಿ ಹುಡುಕಾಟ ನಡೆಸಿದ್ದಾರೆ. ಬೆಳಗ್ಗೆ ಎಂದಿನಂತೆ 10 ಗಂಟೆಗೆ ಸಿಬ್ಬಂದಿ ಕಚೇರಿಗೆ ಬಂದಾಗ ಲಿಂಗನಾಯಕ್ ಕಛೇರಿಯಲ್ಲಿಯೆ ನೇಣಿಗೆ ಶರಣಾಗಿದ್ದ ದೃಶ್ಯ ಕಂಡು ಬೆಚ್ಚಿ ಬಿದಿದ್ದಾರೆ.

ವಿಚಾರ ತಿಳಿಯುತ್ತಿದ್ದಂತೆ ತಾಲೂಕಿನಾಧ್ಯಂತ ಶಾಲೆ ಶಿಕ್ಷಕರು ದಂಡು ದಂಡಾಗಿ ಶಿಕ್ಷಣ ಇಲಾಖೆ ಕಛೇರಿ ಎದುರು ಜಮಾಯಿಸಿದರು. ಈ ಸಂದರ್ಭದಲ್ಲಿ ಕೆಲ ಶಿಕ್ಷಕರು ಬಿಇಓ ಕಚೇರಿ ಮತ್ತು ಶಾಲೆಗಳಿಗೆ ಮಾಹಿತಿ ಹಕ್ಕು ಕಾರ್ಯಕರ್ತನೆಂದು ಹೇಳಿಕೊಂಡು ವ್ಯಕ್ತಿಯೋರ್ವ ಪದೇ ಪದೇ ಅರ್ಜಿ ಹಾಕುವ ಮೂಲಕ ತೊಂದರೆ ಕೊಡುತ್ತಿದ್ದರು. ಅಲ್ಲದೇ ಶಿಕ್ಷಕರು ಶಾಲೆ ವಿಚಾರವಾಗಿ ಬಿಇಓ ಕಚೇರಿಗೆ ತೆರಳಿದ್ದ ಸಂದರ್ಭದಲ್ಲಿ ಶಾಲೆಯಲ್ಲಿ ಶಿಕ್ಷಕರು ಕೆಲಸ ಮಾಡಿತ್ತಿಲ್ಲವೆಂದು ಮೇಲಾಧಿಕಾರಿಗಳಿಗೆ ಸುಖಾ ಸುಮ್ಮನೆ ದೂರು ನೀಡುತ್ತಿದ್ದರು. ಇದರಿಂದ ಶಿಕ್ಷಕರು ಬೇಸತ್ತು ಹೋಗಿದ್ದಾರೆ.

ಲಿಂಗನಾಯಕ್ ಅವರು ಬಿಇಓ ಕಚೇರಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿದ್ದರು. ಅರ್ಜಿಗಳಿಗೆ ಉತ್ತರ ನೀಡುವಷ್ಟರಲ್ಲಿ ಮೇಲಿಂದ ಮೇಲೆ ಅರ್ಜಿಗಳು ಬರುತ್ತಲೇ ಇದಿದ್ದರಿಂದ ಲಿಂಗನಾಯಕ್ ಅವರಿಗೆ ಕೆಲಸದ ಒತ್ತಡ ಅಧಿಕವಾಗಿತ್ತು. ಇದರಿಂದ ಕೂಡ ಅವರು ನೊಂದಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಮನೆಯಲ್ಲಿ ಹಾಲು ತರುತ್ತೇನೆ ಎಂದು ತೆರಳಿದ ಲಿಂಗನಾಯಕ್ ನೇರವಾಗಿ ಕಚೇರಿಗೆ ತೆರಳಿದ್ದು, ಅಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಡೆತ್ ನೋಟ್ ಒಂದನ್ನು ಬರೆದಿಟ್ಟಿದ್ದು, ಕೆಲಸದ ಒತ್ತಡ ಅಧಿಕವಾಗಿತ್ತು, ಇತ್ತೀಚೆಗೆ ಲೋಕಾಯುಕ್ತ ದಾಳಿ ನಡೆಸಿದ ಬಳಿಕ ಡಿ ದರ್ಜೆ ನೌಕರ ಬಶೀರ್ ಅವರ ಕ್ಲಸ್ಟರ್ ಕೆಲಸ ಬಾಕಿ ಉಳಿದಿತ್ತು, ಜತೆಗೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಕೂಡ ಇತ್ತು, ಸಮಯಕ್ಕೆ ಸರಿಯಾಗಿ ಯಾವುದೇ ಕೆಲಸ ಕಾರ್ಯ ನಡೆಸಲು ಸಾಧ್ಯವಾಗುತ್ತಿರಲಿಲ್ಲ, ಇದರಿಂದ ರಾತ್ರಿ ನಿದ್ರೆ ಕೂಡ ಬರುತ್ತಿರಲಿಲ್ಲ ಹಾಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೆ ಕಾರಣ. ನಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು 2 ಪುಟದ ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾರೆ.

ಬಳಿಕ ಮೃತದೇಹವನ್ನು ಪಟ್ಟಣದ ಎಂಜಿಎಂ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಯಿತು.

ಸಖರಾಯಪಟ್ಟಣ ಮೂಲದ ಲಿಂಗನಾಯಕ್ ಕಳೆದ ಎರಡು ವರ್ಷಗಳಿಂದ ಮೂಡಿಗೆರೆ ಬಿ.ಇ.ಓ. ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ. ಘಟನೆ ಕುರಿತು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ