ಶ್ರೀ ಕ್ಷೇತ್ರ ಧರ್ಮಸ್ಥಳ ಜನಜಾಗೃತಿ ವೇದಿಕೆ ವತಿಯಿಂದ ಚಿಕ್ಕಮಗಳೂರಿನ ಅಂಬಳೆ ಗ್ರಾಮದಲ್ಲಿ 1831ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮಸ್ಥಳ ಧರ್ಮೋತ್ತಾನ ಟ್ರಸ್ಟಿನ ಟ್ರಸ್ಟಿ ಆದ ಪ್ರಶಾಂತ್ ಚಿಪ್ರಗುತ್ತಿ ರವರು ಮಾತನಾಡಿ ನಮ್ಮನ್ನು ಆಳುತ್ತಿರುವ ಪ್ರಜಾಪ್ರಭುತ್ವದ ಜನಪ್ರತಿನಿಧಿಗಳಿಗೆ ತಮ್ಮ ಜನರ ಬಗ್ಗೆ ನಿಜವಾದ ಹಿತಾಸಕ್ತಿ ಹಾಗೂ ಕಾಳಜಿ ಇದ್ದರೆ ನಮ್ಮ ರಾಜ್ಯದ ದೇಶದ ಪ್ರಜೆಗಳ ಆರೋಗ್ಯ ಹಾಗೂ ಇನ್ನಿತರ ಸಂಪತ್ತು ಚೆನ್ನಾಗಿ ಇರಬೇಕೆಂದರೆ ನಿಮ್ಮ ಪ್ರಜೆಗಳಿಗೆ ಮಾರಕವಾಗಿರುವ ಮದ್ಯಪಾನವನ್ನು ಕೂಡಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿಷೇಧಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ಜನ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಕೋರವಿ ರಾಜಣ್ಣ ಮಾತನಾಡಿ ನಾವುಗಳು ಮಾಡುವ ಸಹವಾಸ ದೋಷ ನಮ್ಮ ಮೇಲೆ ಪರಿಣಾಮ ಬೀರುತ್ತದೆ ಹಾಗಾಗಿ ಸಾತ್ವಿಕರ ಸಹವಾಸ ಮಾಡಬೇಕೆಂದು ಕರೆ ನೀಡಿದರು.
ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ಗೀತಾ ರವರು ಮಾತನಾಡಿ ಒಳ್ಳೆ ಗುಣಗಳನ್ನು ನಾವು ರೂಡಿಸಿಕೊಂಡು ಸಮಾಜದಲ್ಲಿ ಬೇರೆಯವರಿಗೆ ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ರೀತಿಯಲ್ಲಿ ಮಾದರಿ ಆಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಿಬಿರದ ಅಧ್ಯಕ್ಷರಾದ ಬಸವರಾಜ್ ಯೋಜನಾಧಿಕಾರಿ ರಮೇಶ ನಾಯಕ್ ಮಂಜೇಗೌಡ ಈಶ್ವರಗೌಡ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತಿ ಇದ್ದರು


