ಇಂದು (ಆಗಸ್ಟ್ 17) ಮೂಡಿಗೆರೆ ತಾಲ್ಲೂಕಿನಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ. ಗೆಂಡೇಹಳ್ಳಿ ಮೂಡಿಗೆರೆ 66 ಕೆ.ವಿ. ಮುಖ್ಯ ವಿದ್ಯುತ್ ಸರಬರಾಜು ಮಾರ್ಗದ ನಿರ್ವಹಣೆ ಅಂಗವಾಗಿ ಇಂದು ಬೆಳಿಗ್ಗೆ 10 ರಿಂದ ಸಂಜೆ 6ರ ವರೆಗೆ ವಿದ್ಯುತ್ ಸಂಪರ್ಕ ಕಡಿತವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಮೂಡಿಗೆರೆ ವಿದ್ಯುತ್ ವಿತರಣ ಕೇಂದ್ರದಿಂದ ಹೊರಹೊಮ್ಮುವ ಪಟ್ಟಣ ಮತ್ತು ಗ್ರಾಮೀಣ ಫೀಡರ್ ಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಲಿದೆ.
ಮೂಡಿಗೆರೆ, ಹ್ಯಾಂಡ್ ಪೋಸ್ಟ್, ವಾಟರ್ ಸಪ್ಲೈ, ದೇವರುಂದ, ಗೌಡಹಳ್ಳಿ, ದಾರದಹಳ್ಳಿ, ಬಣಕಲ್, ಬಾಳೂರು, ಗೋಣಿಬೀಡು, ದಾರದಹಳ್ಳಿ, ಮಾಕೋನಹಳ್ಳಿ ಭಾಗಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದ್ದು, ಗ್ರಾಹಕರು ಸಹಕಾರ ನೀಡಬೇಕೆಂದು ಮೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೋರಿದ್ದಾರೆ.




