ಸಾಹಿತ್ಯ ಸಮ್ಮೇಳನಗಳು ಕೇವಲ ಸಡಗರ, ಸಂಭ್ರಮ ಹಾಗೂ ಆಚರಣೆಗಳಿಗೆ ಸೀಮಿತವಾಗಬಾರದು. ಸಮ್ಮೇಳನಗಳು, ಕನ್ನಡ ಜಾತ್ರೆ ಮತ್ತು ಹಬ್ಬಗಳು ನಾಡು-ನುಡಿಯ ಉಳಿವು ಹಾಗೂ ಬೆಳವಣಿಗೆಗೆ ಪೂರಕವಾಗಿವೆ. ಮಲೆನಾಡಿನ ಜನರ ಬದುಕು ಸುಗಮವಾಗಿಲ್ಲ. ಸ್ಥಳೀಯ ಸಮಸ್ಯೆಗಳ ಕುರಿತು ಚರ್ಚಿಸಲು ಸಾಹಿತ್ಯ ಸಮ್ಮೇಳನಗಳು ವೇದಿಕೆಯಾಗುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ, ನಮ್ಮ ನೆಲದ ಸಾಂಸ್ಕøತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಚಿಕ್ಕಮಗಳೂರಿನ ಐಡಿಎಸ್ಜಿ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಂ.ಮಹೇಶ್ ಹೇಳಿದರು.
ಅವರು ಶುಕ್ರವಾರ ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಆಯೋಜಿಸಿದ್ದ 7ನೇ ತಾಲೂಕು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿಗೆ ರಾಜ್ಯಾಧ್ಯಕ್ಷರಿಲ್ಲದಿದ್ದರೂ ಸಾಹಿತ್ಯ ಸಮ್ಮೇಳನಗಳು ನಿಂತಿಲ್ಲ. ಪರಿಷತ್ತಿನ ಹಾಗೂ ಕನ್ನಡದ ರಥವನ್ನು ಕನ್ನಡಿಗರೇ ಎಳೆದು ಸಾಗಿಸುತ್ತಿರುವುದು ಕನ್ನಡಿಗರ ಭಾóಷಾಭಿಮಾನಕ್ಕೆ ಸಾಕ್ಷಿಯಾಗಿದೆ ಮಲೆನಾಡಿನ ವಿಶಿಷ್ಟ ಸಂಸ್ಕøತಿ, ಕಲೆ, ಆಹಾರ ಪದ್ಧತಿ ಹಾಗೂ ಜೀವನಶೈಲಿಯನ್ನು ಮುಂದಿನ ಪೀಳಿಗೆಗೆ ನೇರವಾಗಿ ಪರಿಚಯಿಸುವ ಬದಲು ಪುಸ್ತಕಗಳಲ್ಲಿ ತೋರಿಸಬೇಕಾದ ಸ್ಥಿತಿಗೆ ತಲುಪಿರುವುದು ಆತಂಕಕಾರಿ ಸಂಗತಿ. ಭಾರತದ 20 ಪ್ರಮುಖ ಭಾಷೆಯ ಸಾಲಿನಲ್ಲಿ ಕನ್ನಡ ತನ್ನದೇ ಆದ ಉನ್ನತ ಸ್ಥಾನ ಹೊಂದಿದೆ. ಕನ್ನಡ ಸಾಹಿತ್ಯದ ಶ್ರೀಮಂತಿಕೆ ಜಾಗತಿಕ ಸಾಹಿತ್ಯ ಪರಂಪರೆಯಲ್ಲಿಯೂ ಗುರುತಿಸಿಕೊಳ್ಳುವಂತಿದೆ. ಕನ್ನಡ ಭಾಷೆ ಮತ್ತು ಲಿಪಿಯ ಹಿರಿಮೆ ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗರೂ ಕೈಜೋಡಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಹಲವು ಸಾಧಕರಿಗೆ ಕನ್ನಡ ಸಿರಿ ಹಾಗೂ ರೈತ ಸಿರಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸಮ್ಮೇಳನಾಧ್ಯಕ್ಷ ಮೇಕನಗದ್ದೆ ಲಕ್ಷ್ಮಣ್ಗೌಡ, ಕಸಾಪ ತಾಲ್ಲೂಕು ಅಧ್ಯಕ್ಷ ಡಿ.ಕೆ. ಲಕ್ಷ್ಮಣಗೌಡ ಮಾತನಾಡಿದರು.
ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ.ಲಕ್ಷ್ಮಣ್ಕುಮಾರ್, ಮಾಜಿ ಸಚಿವ ಬಿ.ಬಿ. ನಿಂಗಯ್ಯ, ಪ್ರಧಾನ ಸಂಚಾಲಕ ಎಂ.ಆರ್.ಪೂರ್ಣೇಶ್ ಮೂರ್ತಿ, ರವಿ ಕುನ್ನಹಳ್ಳಿ, ಎಚ್.ಎಂ.ಶಾಂತಕುಮಾರ್, ಬಿ.ಎಸ್.ಓಂಕಾರ್, ಗಣೇಶ್ ಮಗ್ಗಲಮಕ್ಕಿ, ಆರ್.ಪ್ರಕಾಶ್, ಬಿ.ಆರ್. ನವೀನ್, ನಾಗೇಶ್ ಮಡ್ಡಿಕೆರೆ, ವಿ.ಪಿ.ನಾರಾಯಣ, ಡಿ.ಜಿ.ರಮೇಶ್ ಪಟೇಲ್ ಮುಂತಾದವರು ಉಪಸ್ಥಿತರಿದ್ದರು.
ಬಹಿರಂಗ ಅಧಿವೇಶನದಲ್ಲಿ ಕೈಗೊಂಡ ನಿರ್ಣಯಗಳು
ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಕನ್ನಡ ಭವನ ನಿರ್ಮಾಣಕ್ಕೆ ಪಟ್ಟಣ ವ್ಯಾಪ್ತಿಯಲ್ಲಿ ನಿವೇಶನ ನೀಡಬೇಕು. ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸ್ವಾಗತ ದ್ವಾರಗಳನ್ನು ನಿರ್ಮಿಸಲು ಕನ್ನಡ ಸಾಹಿತ್ಯ ಪರಿಷತ್ತಿಗೆ ಅವಕಾಶ ಕೊಡಬೇಕು. ಕಂದಾಯ ಇಲಾಖೆಯಲ್ಲಿರುವ ಪರ್ಷಿಯನ್ ಮತ್ತು ಅರೇಬಿಕ್ ಮೂಲದ ಪದಗಳನ್ನು ಕನ್ನಡದಲ್ಲಿ ಭಾಷಾಂತರಿಸಿ ಬಳಕೆಗೆ ತರಬೇಕು. ಕನ್ನಡ ಶಾಲೆಗಳಿಗೆ ಉತ್ತಮ ಕಟ್ಟಡ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಿ ವಿದ್ಯಾರ್ಥಿಗಳನ್ನು ಕನ್ನಡ ಶಾಲೆಗಳತ್ತ ಆಕರ್ಷಿಸಲು ಸರಕಾರ ಸೂಕ್ತ ಕ್ರಮ ವಹಿಸಬೇಕೆಂದು ನಿರ್ಣಯ ಕೈಗೊಳ್ಳಲಾಯಿತು.
ಅಧಿವೇಶನದ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣ್ಗೌಡ ವಹಿಸಿದ್ದರು. ಸುಚಿತ್ರ ಪ್ರಸನ್ನ, ಬಿ.ಆರ್.ನವೀನ್, ಆರ್.ಪ್ರಕಾಶ್, ಎಂ.ಎಸ್.ನಾಗರಾಜು, ಕುನ್ನಳ್ಳಿ ರವಿ, ಲೋಕೇಶ್ ಬೆಟ್ಟಗೆರೆ, ಸೋಮೇಶ್ಗೌಡ, ನವೀನ್ ಆನೆದಿಬ್ಬ, ವಿಶಾ¯ ನಾಗರಾಜ್, ಅನಿತಾ ಜಗದೀಪ್, ರೇಖಾ ರವಿರಾಜ್, ಚಂದ್ರ ಒಡೆಯರ್, ಹಾ.ಬಾ.ನಾಗೇಶ್ ಮುಂತಾದವರು ಉಪಸ್ಥಿತರಿದ್ದರು.


