November 7, 2026
;
1004251266

 

 

ಮೂಡಿಗೆರೆ ತಾಲ್ಲೂಕು, ಗೋಣಿಬೀಡು ಹೋಬಳಿ, ಕಜ್ಜೇಹಳ್ಳಿ ಗ್ರಾಮದಲ್ಲಿ ಪುರಾತನ ಶ್ರೀ ಚನ್ನಕೇಶವ ದೇವಸ್ಥಾನದ ಜೀರ್ಣೋದ್ದಾರ ಮತ್ತು ಪುನರ್ ಪ್ರತಿಷ್ಟಾಪನಾ ಕಾರ್ಯ ಇತ್ತೀಚೆಗೆ ನೆರವೇರಿತು. ಅಕ್ಟೋಬರ್ 31ರಿಂದ ನವೆಂಬರ್ 3ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಗ್ರಾಮದಲ್ಲಿ ಹೊಯ್ಸಳ ಕಾಲದವು ಎನ್ನಲಾದ ಶ್ರೀ ಚನ್ನಕೇಶವ ದೇವಾಲಯ, ಅಪರೂಪದ ಚೆನ್ನಕೇಶವ ವಿಗ್ರಹ ಸೂಕ್ತ ನಿರ್ವಹಣೆ ಇಲ್ಲದ ಸ್ಥಿತಿಯಲ್ಲಿ ಇತ್ತು. ಗ್ರಾಮಸ್ಥರು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಸೇರಿ ದಾನಿಗಳ ನೆರವಿನಿಂದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕನ್ನೇಹಳ್ಳಿ ಆದರ್ಶ ಮತ್ತು ಸಮಿತಿಯ ಸರ್ವ ಸದಸ್ಯರು ಸೇರಿ ಜೀರ್ಣೋದ್ದಾರ ಕಾರ್ಯವನ್ನು ನೆರವೇರಿಸಿದ್ದಾರೆ.

ಶ್ರೀ ಚನ್ನಕೇಶವ, ಮಹಾಲಿಂಗೇಶ್ವರ, ಗಣಪತಿ, ಮಹಿಷ ಮರ್ದಿನಿ, ಸೂರ್ಯನಾರಾಯಣ, ನಂದಿ, ನಾಗದೇವರು, ಚೌಡೇಶ್ವರಿ, ಅಯ್ಯಪ್ಪ ದೇವರ ಪುನಪ್ರತಿಷ್ಟಾಪನೆ ಹಾಗೂ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದ್ದಾರೆ.

ಇದೇ ಸಂದರ್ಭದಲ್ಲಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ನೆರವು ನೀಡಿದ ದಾನಿಗಳನ್ನು ಗೌರವಿಸಲಾಯಿತು.

ಈ ಎಲ್ಲಾ ಕಾರ್ಯಗಳಲ್ಲಿ ಕಜ್ಜಳ್ಳಿ, ಕನ್ನೇಹಳ್ಳಿ, ಕಿರುಗುಂದ, ಹಂಜಗೋಡನಹಳ್ಳಿ, ಕಜ್ಜೇಹಳ್ಳಿ ಎಸ್ಟೇಟ್ ಹಾಗೂ ಸುತ್ತಮುತ್ತಲ ಗ್ರಾಮದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

 

 

Leave a Reply

Your email address will not be published. Required fields are marked *