November 7, 2026
;
kole 1

 

 

ಬೆಂಗಳೂರು ನಗರದಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ ಸರಣಿ ಹತ್ಯೆ ಪ್ರಕರಣ ನಡೆದಿದೆ. ರಾಜಾಜಿನಗರ ವ್ಯಾಪ್ತಿಯಲ್ಲಿ ಇಂದುಶೇಖರ ಎಂಬಾತ ತನ್ನ ಪತ್ನಿ ಸೇರಿದಂತೆ ಕುಟುಂಬದ ಏಳುಮಂದಿಯನ್ನು ಕೊಲೆಮಾಡಿದ್ದು ಈ ಭಯಾನಕ ಘಟನೆಯಿಂದ ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ.

ಬಾಡೂಟಕ್ಕೆ ಕರೆದು 7 ಜನರನ್ನೂ ಆರೋಪಿ ಇಂದುಶೇಖರ್‌ ಹತ್ಯೆ ಮಾಡಿರುವ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಹದಿನೈದು ದಿನಗಳ ಅಂತರದಲ್ಲಿ ಏಳು ಜನರ ಬರ್ಬರ ಹತ್ಯೆ ಮಾಡಿದ್ದಾನೆ. ಮೊದಲಿಗೆ ತನ್ನ ಹೆಂಡತಿ ಸುನೀತಾಳನ್ನು ಕೊಲೆ ಮಾಡಿದ್ದ.

ನಂತರ ಅತ್ತೆ ರೂಪಾವತಿಗೆ ಕರೆ ಮಾಡಿ ಆರೋಪಿಯ ಅಪ್ರಾಪ್ತ ಮಗಳು ಬಾಡೂಟಕ್ಕೆ ಕರೆದಿದ್ದಳು. ಊಟಕ್ಕೆ ಬಂದ ಅತ್ತೆಯನ್ನು ರುಬ್ಬುವ ಗುಂಡು ಬಳಸಿ ಕೊಲೆ ಮಾಡಿದ್ದ.

ಮೃತದೇಹದ ಎಸೆದು ಅಪ್ಪ-ಮಗಳು ಮನೆ ಕ್ಲೀನ್ ಮಾಡಿದ್ದರು‌. ನಂತರ ಬಾಮೈದುನಾ ಶಿವಕುಮಾರ್ ಮತ್ತು ದಿವ್ಯಾಳ ಕೊಲೆ ನಡೆದಿದೆ. ಆ ಬಳಿಕ ಶಂಕರ್ ಮತ್ತು ನಳಿನಾ, ದಂಪತಿಯನ್ನು ಊಟಕ್ಕೆ ಕರೆದಿದ್ದ. ಪ್ರತಿ ಬಾರಿ ಇಂದುಶೇಖರ್ ಮಗಳ ಕೈಯಿಂದಲೇ ಕರೆ ಮಾಡಿಸಿ ಮನೆಗೆ ಕರೆಸಿದ್ದ. ಕೊನೆಯದಾಗಿ ಶಂಕರ್ ಮತ್ತು ನಳಿನಾ, ಏಳು ವರ್ಷದ ಮಗನನ್ನು ಕ್ರೂರವಾಗಿ ಕೊಲೆ ಮಾಡಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.

ಕೊಲೆಮಾಡಿದ ನಂತರ ಮೃತದೇಹಗಳನ್ನು ಈತ ತನ್ನದೇ ಕಾರಿನಲ್ಲಿ ಕೊಂಡೊಯ್ದು ಬೇರೆ ಬೇರೆ ಪ್ರದೇಶಗಳಲ್ಲಿ ಎಸೆದಿದ್ದಾನೆ ಎಂದು ತಿಳಿದುಬಂದಿದೆ.

ಪತ್ನಿ ಮತ್ತು ಅತ್ತೆಯ ಮೃತದೇಹವನ್ನು ತಮಿಳುನಾಡಿನ ಸೇಲಂ ಬಳಿ ಎಸೆದಿರುವುದು ಮತ್ತು ಅಲ್ಲಿ ಎರಡು ಮೃತದೇಹಗಳ ಸಿಕ್ಕಿರುವುದು ವರದಿಯಾಗಿದೆ. ಉಳಿದ ಮೃತದೇಹಗಳನ್ನು ಎಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈತ ಈ ಕೃತ್ಯಕ್ಕೆ ತನ್ನ ಅಪ್ರಾಪ್ತ ಮಗಳನ್ನು ಬ್ರೈನ್ ವಾಷ್ ಮಾಡಿ ಬಳಸಿಕೊಂಡಿದ್ದ, ಮಗಳಿಂದಲೇ ಎಲ್ಲರಿಗೂ ಕರೆಮಾಡಿ ಮನೆಗೆ  ಕರೆಸಿಕೊಂಡಿದ್ದ ಎನ್ನಲಾಗಿದೆ.

15 ದಿನಗಳಲ್ಲಿ ಇಷ್ಟು ವ್ಯವಸ್ಥಿತವಾಗಿ 7 ಜನರನ್ನು ಕೊಲೆ ಮಾಡಿರುವುದು ಹೇಗೆ ? ಒಬ್ಬರ ಕೊಲೆ ಮಾಡಿರುವುದು ಮತ್ತೊಬ್ಬರಿಗೆ ಹೇಗೆ ತಿಳಿಯಲಿಲ್ಲ ? ಈ ಬಗ್ಗೆಯೆಲ್ಲಾ ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರಬೇಕು.

 

 

Leave a Reply

Your email address will not be published. Required fields are marked *