drfo 1

 

 

ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ನಕಲಿ ಟಿಕಟ್ ಗಳನ್ನು ಕೊಟ್ಟು ಸರ್ಕಾರಕ್ಕೆ ಮೋಸ ಮಾಡುತ್ತಿದ್ದ ಉಪ ವಲಯ ಅರಣ್ಯ ಅಧಿಕಾರಿಯೋರ್ವನನ್ನು ಅಮಾನತು ಮಾಡಲಾಗಿದೆ.

ಕಳಸ  ಅರಣ್ಯ ಇಲಾಖೆಯ ಉಪ ವಲಯ ಅರಣ್ಯ ಅಧಿಕಾರಿ ಚಂದನ ಗೌಡ ದ್ಯಾಮನಗೌಡ್ರು ಎಂಬಾತನನ್ನು ಸರ್ಕಾರಕ್ಕೆ ಮೋಸ ಮಾಡಿರುವ ಕಾರಣದಿಂದ ಸೇವೆಯಿಂದ ಅಮಾನತು ಮಾಡಲಾಗಿದೆ.

ಕಳಸ ಅರಣ್ಯ ವಲಯದ ವ್ಯಾಪ್ತಿಯಲ್ಲಿರುವ ಪ್ರೇಕ್ಷಣೀಯ ಸ್ಥಳಗಳಾದ ರಾಣಿಝರಿ ಪ್ರವಾಸಿ ತಾಣದ ಬಳಿಯಿಂದ ಬಂಡಾಜೆ ಪಾಲ್ಸ್ ಮತ್ತು ಬಲ್ಲಾಳರಾಯನದುರ್ಗ ಪ್ರದೇಶಕ್ಕೆ ಚಾರಣಕ್ಕೆ ಸರ್ಕಾರ ರೂ. 250 ಶುಲ್ಕ ನಿಗದಿ ಮಾಡಿದೆ. ಈ ಶುಲ್ಕವನ್ನು ಆನ್ ಲೈನ್ ಮೂಲಕವೇ ಪಾವತಿಸಬೇಕಾಗಿದೆ. ಈ ಚಾರಣ ಪ್ರದೇಶಗಳನ್ನು ಅರಣ್ಯ ಇಲಾಖೆಯು ಉಸ್ತುವಾರಿ ನೋಡಿಕೊಳ್ಳುತ್ತಿದೆ.

ಈ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಅನ್ ಲೈನ್ ಟಿಕೆಟ್ ಮಾದರಿಯಲ್ಲಿಯೇ ನಕಲಿ ಟಿಕೆಟ್ ಗಳನ್ನು ಮುದ್ರಿಸಿ ಅದನ್ನು ಅಲ್ಲಿಗೆ ನೇರವಾಗಿ ಬರುವ ಪ್ರವಾಸಿಗರೆ ನೀಡಿ ಪ್ರತಿ ಪ್ರವಾಸಿಗರಿಂದ ರೂ. 250 ಹಣವನ್ನು ಫೋನ್ ಪೇ ಮೂಲಕ ಪಾವತಿ ಮಾಡಿಸಿಕೊಳ್ಳುತ್ತಿದ್ದ ಚಂದನ್ ಈ ಹಣವನ್ನು ಮೋನಿಕಾ ಎಂಬುವವರ ಖಾತೆಗೆ ಜಮಾ ಮಾಡಿಸುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ಒಂದು ಬುಕ್ಕಿಂಗ್ ಐಡಿ ಯನ್ನು ನಕಲು ಮಾಡಿ ತಲಾ  10ರಂತೆ ಟಿಕೆಟ್ ಮುದ್ರಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಜೂನ್ ತಿಂಗಳಿನಲ್ಲಿ ಆನ್ ಲೈನ್ ಬುಕ್ಕಿಂಗ್ ಪಟ್ಟಿಗೂ ಮತ್ತು ಚಾರಣದ ನೊಂದಣಿ ಪುಸ್ತಕದಲ್ಲಿರುವ ಪಟ್ಟಿಗೂ ತಾಳೆ ಬರುತ್ತಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಸಹಾಯಕ ಅರಣ್ಯ ಅಧಿಕಾರಿ ವರದಿ ಸಲ್ಲಿಸಿದ್ದರು. ಈ ವರದಿ ಆಧಾರದ ಮೇಲೆ ಕೊಪ್ಪ ಡಿ.ಎಫ್.ಓ. ಉಪೇಂದ್ರ ಪ್ರತಾಪ್ ಸಿಂಗ್ ಅವರಿಂದ ಅಮಾನತು ಆದೇಶ ಹೊರಬಿದ್ದಿದೆ.

ಸದ್ಯಕ್ಕೆ ರೂ. 9000 ಹಣವನ್ನ ಸರ್ಕಾರಕ್ಕೆ ಮೋಸ ಮಾಡಿರುವುದು ಸಾಬೀತಾಗಿದ್ದು, ಇಲಾಖೆಗೆ ಸಂಧಾಯವಾಗಬೇಕಾಗಿದ್ದ ಲಕ್ಷಗಟ್ಟಲೇ ಹಣ ಮೋನಿಕಾ ಎಂಬ ಯುವತಿ ಖಾತೆಗೆ ಜಮಾವಾಗಿರೋ ಅನುಮಾನವಿದೆ. ಈ ಬಗ್ಗೆ  ಸಮಗ್ರ ತನಿಖೆ ನಡೆಸಿ ಸರ್ಕಾರಕ್ಕೆ ಮೋಸವಾಗಿರುವ ಪೂರ್ತಿ ಹಣವನ್ನು ವಶಪಡಿಸಿಕೊಂಡು ಅಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಚಂದನ ಗೌಡನಿಂದ ಪದೇ ಪದೇ ತಪ್ಪು, ಈ ಹಿಂದೆ ಮಹಿಳೆಯೊಂದಿಗೆ ಸಿಕ್ಕಿಬಿದ್ದಿದ್ದ

ಸದರಿ ಚಂದನಗೌಡ ಇಲಾಖೆಯಲ್ಲಿ ಪದೇ ಪದೇ ತಪ್ಪುಗಳನ್ನು ಮಾಡುತ್ತಿದ್ದು ವಿವಾದಗಳಿಗೆ ಈಡಾಗುತ್ತಿದ್ದಾನೆ. ಈ ಹಿಂದೆ ಕಳಸ ವಲಯದ ಗಬ್ಗಲ್ ಭಾಗದಲ್ಲಿ ಅರಣ್ಯ ಇಲಾಖೆ ಕ್ವಾಟ್ರಸ್ ಒಂದರಲ್ಲಿ ವಿವಾಹಿತ ಮಹಿಳೆಯೊಂದಿಗೆ ಇದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ, ಅಕ್ರಮವಾಗಿ ಮರ ಕಡಿದಿದ್ದೀರಿ ಎಂದು ಹೆದರಿಸಿ ಕೇಸು ಮುಚ್ಚಿ ಹಾಕಬೇಕೆಂದರೆ ನನ್ನೊಂದಿಗೆ ಸಹಕರಿಸಬೇಕು ಎಂದು ಬ್ಲಾಕ್ ಮೇಲ್ ಮಾಡಿ ಮಹಿಳೆಯೊಂದಿಗೆ ಇದ್ದಾಗ ಸಿಕ್ಕಿಬಿದ್ದು ಸಾರ್ವಜನಿಕರಿಂದ ಗೂಸಾ ತಿಂದಿದ್ದ. ಇದೀಗ ಮತ್ತೊಂದು ವಂಚನೆ ಪ್ರಕರಣದಲ್ಲಿ ತಲಗುಹಾಕಿಕೊಂಡು ಸಸ್ಪೆಂಡ್ ಆಗಿದ್ದಾನೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ