gowdas1

 

 

ಬದ್ರರ್ಸ್ ಗ್ರೂಪ್ ಅವರು ಚಿಕ್ಕಮಗಳೂರು ತಾಲ್ಲೂಕು ಆಲ್ದೂರು ಹೋಬಳಿ ಕೆಳಗೂರು ಕ್ರೀಡಾಂಗಣದಲ್ಲಿ  ಆಯೋಜಿಸಿದ್ದ ಗೌಡಾಸ್ ಪ್ರೀಮಿಯರ್ ಲೀಗ್-2025 ಸೀಸನ್ 1ರಲ್ಲಿ ಮೂಡಿಗೆರೆ ತಾಲ್ಲೂಕಿನ  ಮಿಟ್ಟಿ ಬ್ರದರ್ಸ್ ಬೈದುವಳ್ಳಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ, ದಿನೇಶ್ ಹೆಡಿದಾಳು ಟೀಮ್ ರನ್ನರ್ಸ್, ತಳಿಹಳ್ಳ ತಂಡ ತೃತೀಯ, ಡಿಎಂಹೆಚ್ ಮಾಗರಹಳ್ಳಿ ನಾಲ್ಕನೇ ಸ್ಥಾನ ಪಡೆದಿದೆ.

ಏಪ್ರಿಲ್ 25ರಿಂದ 27 ರ ವರೆಗೆ ನಡೆದ ಪಂದ್ಯಾವಳಿಯಲ್ಲಿ ಶ್ರೀನಿವಾಸ್ ಬೈದುವಳ್ಳಿ ಮಾಲೀಕತ್ವದ ಮತ್ತು ಪುನೀತ್ ಬೈದುವಳ್ಳಿ ನಾಯಕತ್ವದ ಮಿಟ್ಟಿ ಬ್ರದರ್ಸ್ ಬೈದುವಳ್ಳಿ ತಂಡ ಛಾಂಪಿಯನ್ ಪಟ್ಟ ಅಲಂಕರಿಸಿ ಆಕರ್ಷಕ ಟ್ರೋಪಿಯೊಂದಿಗೆ 1,11,111 ಮೊತ್ತದ ನಗದು ಬಹುಮಾನ ಪಡೆದಿದೆ.

ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯ ಒಟ್ಟು 14 ಪ್ರಾಂಚೈಸಿ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.  ಐಪಿಎಲ್ ಮಾದರಿಯಲ್ಲಿ ನಡೆದ ಪಂದ್ಯಾವಳಿಯ ಪ್ರತೀ ಪಂದ್ಯವನ್ನು ತಲಾ 4 ಓವರ್ ಗಳಿಗೆ ಸೀಮಿತಗೊಳಿಸಲಾಗಿತ್ತು.

ಪ್ರಶಸ್ತಿ ವಿಜೇತ ಮಿಟ್ಟಿ ಬ್ರದರ್ಸ್ ಬೈದುವಳ್ಳಿ ಪ್ರಾಂಚೈಸಿ ಪರವಾಗಿ  ಪುನೀತ್ ಬೈದುವಳ್ಳಿ  (ನಾಯಕ) ವಿಜಯ್ ಕೊಪ್ಪ, ಸಂತೋಷ್, ಮಿಥುನ್ ಕಣಚೂರು, ಮನೋಜ್ ಕಣಚೂರು, ಆಕಾಶ್ ಬೈದುವಳ್ಳಿ, ರಕ್ಷಿತ್ ದಾರದಹಳ್ಳಿ, ದೀಕ್ಷಿತ್ ದಾರದಹಳ್ಳಿ, ಅಭಿಷೇಕ್ ಬೈದುವಳ್ಳಿ, ಅಭಿಷೇಕ್ ಗುತ್ತಿ, ಮಂಜು ಹೆಡದಾಳು, ಶ್ರೀನಿವಾಸ್ ಬೈದುವಳ‍್ಳಿ ಕಣಕ್ಕಿಳಿದು ಆಟವಾಡಿದರು. ಬೈದುವಳ್ಳಿ ಮತ್ತು ಸುತ್ತಲ ಗ್ರಾಮದ ಯುವಕರು ತಮ್ಮ ತಂಡವನ್ನು ಬೆಂಬಲಿಸಿದರು.

ಪಂದ್ಯಾವಳಿಯಲ್ಲಿ ಮಿಟ್ಟಿ ಬ್ರದರ್ಸ್ ಬೈದವಳ್ಳಿ ತಂಡದ ನಾಯಕ ಪುನೀತ್ ತನ್ನ ಆಲ್ರೌಂಡರ್ ಆಟದಿಂದ ಫೈನಲ್ ನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಮತ್ತು ಮ್ಯಾನ್ ಆಫ್ ದಿ ಸಿರೀಸ್ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಉದಯೋನ್ಮುಖ ಆಟಗಾರನ್ನು ಹೊಂದಿರುವ  ಮಿಟ್ಟಿ ಬ್ರದರ್ಸ್ ಬೈದುವಳ್ಳಿ ತಂಡ ಈಗಾಗಲೇ ಹಲವಾರು ಪಂದ್ಯಾವಳಿಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ