November 2, 2026
;
manasika

 

 

ಮೂಡಿಗೆರೆ ತಾಲ್ಲೂಕು ಬಣಕಲ್‌ ಪಟ್ಟಣದಲ್ಲಿ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರಿಗೆ ಸ್ನಾನ ಮಾಡಿಸಿ, ಕ್ಷೌರ ಮಾಡಿಸಿ ಆರೈಕೆ ಮಾಡುವ ಮೂಲಕ ಸಮಾಜ ಸೇವಕ ಆರೀಫ್ ಅವರು ಮಾನವೀಯತೆ ಮೆರೆದಿದ್ದಾರೆ.

ಅನಾಥವಾಗಿ, ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿಯ ಬಗ್ಗೆ ಕಾಳಜಿ ವಹಿಸಿ, ಅವರ ಸ್ವಚ್ಛತೆ ಹಾಗೂ ಆರೈಕೆ ಮಾಡಿ ಮಾನವೀಯತೆ ಮೆರೆದ ಆರೀಫ್ ಅವರ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಆರೀಫ್ ಅವರು ಈ ಹಿಂದೆಯೂ ಅನೇಕ ಜನ ಮಾನಸಿಕ ಅಸ್ವಸ್ಥರು, ಅನಾಥರ ಆರೈಕೆ ಮಾಡಿದ್ದಾರೆ. ಹಾವುಗಳ ರಕ್ಷಣೆ, ಅನಾಥ ಶವಗಳ ಸಂಸ್ಕಾರ ಸೇರಿದಂತೆ ಕಠಿಣ ಕಾರ್ಯಾಚರಣೆಗಳಲ್ಲಿ ಪೊಲೀಸ್ ಹಾಗೂ ಅರಣ್ಯ ಇಲಾಖೆಯೊಂದಿಗೆ ಸ್ವಯಂಪ್ರೇರಿತರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ.

 

 

Leave a Reply

Your email address will not be published. Required fields are marked *