IMG-20250512-WA0071

 

 

ಯುದ್ಧ ತಣ್ಣಗಾಗಿ ಭಾರತೀಯಸೇನೆ ಶಾಂತಿ ಸುರಕ್ಷೆ ಅನುಭವಿಸುವವರೆಗೆ ಅಡ್ಡಪಲ್ಲಕ್ಕಿ-ಸಾರೋಟ ಮೆರವಣಿಗೆಯನ್ನು ಸ್ಥಗಿತಗೊಳಿಸುವುದಾಗಿ ಶ್ರೀಶೈಲದ ಗಿರಿರಾಜಸೂರ್ಯ ಸಿಂಹಾಸನ ಮಹಾಪೀಠದ ಜಗದ್ಗುರು ಶ್ರೀಶ್ರೀಶ್ರೀ 1008 ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಪ್ರಕಟಿಸಿದರು.

ಬಡಗನಾಡು ಹೇಮರಡ್ಡಿ ವೀರಶೈವ ಜನಾಂಗ ಸಂಘದ ಬಾಸೂರು ಘಟಕದ ನೇತೃತ್ವದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಶಿವಶರಣೆ ಶ್ರೀ ಹೇಮರಡ್ಡಿಮಲ್ಲಮ್ಮ ಅವರ ಜಯಂತ್ಯುತ್ಸವದ ದಿವ್ಯ ಸಾನಿಧ್ಯವಹಿಸಿ ಅವರು ಶನಿವಾರ ಆಶೀರ್ವಚನ ನೀಡಿದರು.

ಸಾಧ್ವಿ ಶಿರೋಮಣಿ. ಭಕ್ತಿಯ ಪರಾಕಾಷ್ಠೆಯ ಜೊತೆಗೆ ತನ್ನ ಕುಟುಂಬ ಆ ಮೂಲಕ ಸಮೂಹಹಿತ ಬಯಸಿ ಪರಿವರ್ತನೆಯನ್ನು ತಂದ ಶ್ರೇಷ್ಠ ಸಾಧಕಿ. ಇಂದು ದೇಶ ಸಂಕಷ್ಟದಲ್ಲಿ ಸಿಲುಕಿರುವಾಗ ಎಲ್ಲರೂ ಒಮ್ಮತದಿಂದ ಮುನ್ನಡೆಯಬೇಕು. ದೇಶ ಉಳಿದರೆ ನಾಡು ಉಳಿದೀತು. ನಾಡು ಉಳಿದರೆ ಧರ್ಮ-ನಾವೂ ಉಳಿಯುತ್ತೇವೆ. ಧರ್ಮ ಉಳಿಸುವುದರ ಜೊತೆಗೆ ದೇಶಧರ್ಮ ಪಾಲನೆ ನಮ್ಮೆಲ್ಲರ ಕರ್ತವ್ಯ ಎಂದರು

ಸಮಾರಂಭ ಉದ್ಘಾಟಿಸಿದ ಭಾರತ ಭೂಸೇನೆಯ ನಿಕಟಪೂರ್ವ ಉಪದಂಡನಾಯಕ ಲೆ.ಜ.ಬಗ್ಗವಳ್ಳಿ ಎಸ್.ರಾಜು ಸಮಾರಂಭ ಉದ್ಘಾಟಿಸಿ ಮಾತನಾಡಿ ಅರಿವಿಗಿಂತ ಆಚಾರ ಮುಖ್ಯ ಎಂಬ ಮಲ್ಲಮ್ಮನ ಸಿದ್ಧಾಂತ ನಾವೆಲ್ಲ ಅನುಸರಿಸಬೇಕಾಗಿದೆ. ಕಸ ಹಾಕಬಾರದು ಎಂಬುದು ಅರಿವಾದರೆ, ಕಸ ಹಾಕದೆ ಸ್ವಚ್ಛತೆ ಕಾಪಾಡುವುದು ಆಚಾರ. ದೇಶದ ಪ್ರಗತಿ ಎಲ್ಲರ ಶ್ರಮದಿಂದ ಆಗಬೇಕಾಗಿದೆ. ಶಿಸ್ತು, ಸ್ವಚ್ಛತೆ, ಸಮಯಪಾಲನೆ ಬಾಲ್ಯದಿಂದಲೇ ಆರಂಭಿಸಿ ದೊಡ್ಡವರೂ ಪರಿಪಾಲಿಸಿದರೆ ಪ್ರಗತಿ ವೇಗ ಪಡೆಯುತ್ತದೆ ಎಂದವರು ಬಣ್ಣಿಸಿದರು.

ಕಾಶೀ ಮತ್ತು ಉಜ್ಜಯಿನಿ ಜಗದ್ಗುರುಗಳು ಹೇಮರಡ್ಡಿಮಲ್ಲಮ್ಮ ಹಾಗೂ ವಾಮನನ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು. ಕಡೂರು ಶಾಸಕ ಕೆ.ಎಸ್.ಆನಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿದರು. ಚಿತ್ರದುರ್ಗದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಬೆಂಗಳೂರು ಕೇಂದ್ರ ಸಂಘದ ಅಧ್ಯಕ್ಷ ಶೇಖರೇಗೌಡ ಮಾಲಿಪಾಟೀಲ ಮತ್ತು ಡಾ.ಶಂಭುಬಳಗಾರ್ ಮಾತನಾಡಿದರು.

ಬಡಗನಾಡು ಶ್ರೀ ಹೇಮರಡ್ಡಿ ವೀರಶೈವ ಜನಾಂಗ ಸಂಘದ ಬಾಸೂರು ಘಟಕದ ಅಧ್ಯಕ್ಷ ಬಿ.ಕೆ.ವಸಂತಕುಮಾರ ಸಮಾರಂಭದ ಅಧ್ಯಕ್ಷತÉವಹಿಸಿದ್ದರು. ಗಿರಿಯಾಪುರ ಕೇಂದ್ರಸಂಘದ ಅಧ್ಯಕ್ಷ ಎಚ್.ಸಿ.ರೇವಣಸಿದ್ದಪ್ಪ ಮತ್ತಿತರ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು. ವಿನಯಕುಮಾರ್ ಸ್ವಾಗತಿಸಿ, ಲಿಂಗರಾಜು ನಿರೂಪಿಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ