sdpi2

 

 

ಸತ್ತಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಂತೆ ಪ್ರದೇಶ‌ ಮತ್ತು ಆಸ್ಪತ್ರೆ ರಸ್ತೆಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯದೇ ಇರುವುದರಿಂದಾಗಿ ಮಳೆ ನೀರು ರಸ್ತೆಯಲ್ಲಿಯೇ ಜಮಾವಣೆಗೊಂಡು ಆಸ್ಪತ್ರೆಗೆ ಬರುವ ರೋಗಿಗಳಿಗೆ ಮತ್ತು ಅದೇ ರಸ್ತೆಯಲ್ಲಿರುವ ಶಾಲೆಗಳಿಗೆ ಬರುವ ವಿಧ್ಯಾರ್ಥಿಗಳಿಗೆ ನಡೆದಾಡಲು ಪರದಾಡುವಂಥಹ ಪರಿಸ್ಥಿತಿ ಉಂಟಾಗಿದೆ ಆದ್ದರಿಂದ ಈ ಸಮಸದಯೆಗಳನ್ನು ಆದಷ್ಟು ಬೇಗ ಪರಿಹರಿಸಬೇಕೆಂದು ಒತ್ತಾಯಿಸಿ ಎಸ್.ಡಿ.ಪಿ.ಐ ಸತ್ತಿಹಳ್ಳಿ ಗ್ರಾಮ ಸಮಿತಿ ಅಧ್ಯಕ್ಷ ಅಫ್ಸರ್  ನೇತೃತ್ವದಲ್ಲಿ ಸತ್ತಿಹಳ್ಳಿ ಗ್ರಾಮ ಪಂಚಾಯತಿ ಗೆ ಮನವಿ ನೀಡಲಾಯಿತು.

ಅದೇ ರೀತಿಯಲ್ಲಿ ಪಂಚಾಯತ್ ವ್ಯಾಪ್ತಿಯ ಎಲ್ಲ ಚರಂಡಿಗಳನ್ನು ಸ್ವಚ್ಛಗೊಳಿಸಿ ರಸ್ತೆಯಲ್ಲಿ ನೀರು ಶೇಖರಣೆಯಾಗದಂತೆ ಮಾಡಬೇಕು.
ಹಾಂದಿಯ ಅಂಬೇಡ್ಕರ್ ವೃತ್ತ. ಹಾರ್ಲಗದ್ದೆ, ಭೂತನಕಾಡಿನ. ಬದ್ರಿಯಾ ಮಸ್ಜಿದ್ ನ ಬಳಿ ಬಸ್ಸು ತಂಗುದಾಣ ನಿರ್ಮಿಸಿ ಪ್ರಯಾಣಿಕರಿಗೆ, ಹಾಗೂ ವಿಧ್ಯಾರ್ಥಿಗಳಿಗೆ ಅನೂಕೂಲ ಕಲ್ಪಿಸಬೇಕು. ಪಂಚಾಯತ್ ವ್ಯಾಪ್ತಿಯಲ್ಲಿರುವ ಎಲ್ಲ ವಿದ್ಯುತ್ ಕಂಬಗಳಿಗೆ ಬೀದಿ ದೀಪಗಳನ್ನು ಅಳವಡಿಸಬೇಕು.
ಪಂಚಾಯತ್ ವ್ಯಾಪ್ತಿಯ ಎಲ್ಲ ರಸ್ತೆಗಳನ್ನು ದುರಸ್ತಿಗೊಳಿಸಬೇಕು ಎಂದು ಪಕ್ಷದ ವತಿಯಿಂದ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಸೋಷಿಯಲ್‌ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಮೂಡಿಗೆರೆ ಕ್ಷೇತ್ರ ಸಮಿತಿ ಸದಸ್ಯರಾದ ಅಲ್ತಾಫ್ ಬಿಳಗುಳ, ಸತ್ತಿಹಳ್ಳಿ ಗ್ರಾಮ ಸಮಿತಿ ಕಾರ್ಯದರ್ಶಿ ಸಲ್ಮಾನ್, ಸಹ ಕಾರ್ಯದರ್ಶಿ ಸೈಫ್, ಉಪಾಧ್ಯಕ್ಷರಾದ ಮುಜಾಯಿದ್, ಕೋಶಾಧಿಕಾರಿ ಯಾಸೀನ್, ಘಟಕದ ಉಪಾಧ್ಯಕ್ಷ ಮೆಹಬೂಬ್ ಸಮಿತಿ ಸದಸ್ಯರಾದ ರಫೀಕ್, ತಾಸೀರ್, ಅರ್ಬಾಝ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ