ಕಳಸ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿ ಸಮಗ್ರ ಪ್ರಶಸ್ತಿ ಗಳಿಸಿಕೊಂಡಿದ್ದು, ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.
ಕೆ.ಪಿ.ಎಸ್ ವಿದ್ಯಾರ್ಥಿಗಳ ಸಾಧನೆ:
1. ಬಾಲಕರ ಕಬ್ಬಡ್ಡಿ :ಪ್ರಥಮ
2. ಬಾಲಕಿಯರ ಕಬ್ಬಡ್ಡಿ :ಪ್ರಥಮ
3. ಬಾಲಕಿಯರ ವಾಲಿಬಾಲ್: ಪ್ರಥಮ
4. ಬಾಲಕರ ವಾಲಿಬಾಲ್: ದ್ವಿತೀಯ
5. ಬಾಲಕಿಯರ ಖೋಖೋ : ಪ್ರಥಮ
6. ಬಾಲಕರ ಖೋಖೋ : ದ್ವಿತೀಯ.
7. ಬಾಲಕಿಯರ ಬಾಲ್ ಬ್ಯಾಡ್ಮಿಟನ್: ದ್ವಿತೀಯ
ಅಥ್ಲೆಟಿಕ್ಸ್ ವಿಭಾಗದಲ್ಲಿ ಒಟ್ಟು 24 ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ದೈಹಿಕ ಶಿಕ್ಷಣ ಶಿಕ್ಷಕರಿಲ್ಲದೇ ವಿಷಯ ಶಿಕ್ಷಕರಾದ ಶೃಂಗೇಶ್ವರ್ ಹಾಗೂ ಇತರೆ ಶಿಕ್ಷಕರ ಮಾರ್ಗದರ್ಶನದಲ್ಲಿ ವಿಧ್ಯಾರ್ಥಿಗಳು ಈ ಸಾಧನೆ ಮಾಡಿರುವುದು ವಿಶೇಷ. ಉಪಪ್ರಾಂಶುಪಾಲರಾದ ಸುರೇಶ್ ಮಾತನಾಡಿ ಪಂದ್ಯಾಟಗಳಲ್ಲಿ 4 ರಲ್ಲಿ ಹಾಗೂ ಅಥ್ಲೆಟಿಕ್ಸ್ ನಲ್ಲಿ 16 ವಿಭಾಗಳಲ್ಲಿ ಒಟ್ಟು 40 ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸುಧೀರ್ ಅಬ್ಬುಗುಡಿಗೆ ಇವರು ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಶಿಸಿ ತಾಲ್ಲೂಕು ಹಂತಕ್ಕೆ ಶುಭ ಹಾರೈಸಿದರು.




