ಪಂಜಾಬ್‌ನ ಬರ್ನಾಲದಲ್ಲಿ ಸಿಐಎಸ್‌ಸಿಇ ವತಿಯಿಂದ ಈಚೆಗೆ ನಡೆದ ರಾಷ್ಟ್ರೀಯ ಕಬಡ್ಡಿ ಟೂರ್ನಿಯ 19ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಚಿಕ್ಕಮಗಳೂರು ನಗರದ ಸೇಂಟ್ ಮೇರಿಸ್ ಇಂಟರ್‌ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿಯರು ಚಿನ್ನದ ಪದಕ ಗೆದ್ದಿದ್ದಾರೆ.
ಸಿಂಚನಾ, ವಿದ್ಯಾರ್ಥಿನಿಯರಾದ ಜ್ಞಾನ ಗೌಡ, ಮೋಕ್ಷಾ ಲೋಕೇಶ್, ಸಾನ್ವಿ ಆಳ್ವಾ, ಹಿತೈಶಿಗೌಡ, ಶ್ರೇಷ್ಠಶೆಟ್ಟಿ ಅವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರು.
ಸ್ಕೂಲ್ ಗೇಮ್ಸ್ ಫೆಡರೇಶ ಆಫ್ ಇಂಡಿಯಾ (ಎಸ್‌ಜಿಎಫ್‌ಐ) ಆಯೋಜಿಸಿದ್ದ ಕಬಡ್ಡಿ ಟೂರ್ನಿಗೆ ನಮ್ಮ ಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಜಿಲ್ಲೆಗೆ ಹೆಮ್ಮೆಯ ಹಾಗೂ ಸಂತಸದಾಯಕ ವಿಷಯವಾಗಿದೆ ಎಂದು ಶಾಲೆಯ ಸಂಸ್ಥಾಪಕ ಅಧ್ಯಕ್ಷ ಜೆರಾಲ್ಡ್ ಲೋಬೊ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ರಾಜ್ಯಕ್ಕೆ ಮತ್ತು ಜಿಲ್ಲೆಗೆ ಕೀರ್ತಿ ತಂದ ವಿದ್ಯಾರ್ಥಿ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರನ್ನು ಅಭಿನಂದಿಸಿದ್ದಾರೆ.




