2Mudigere1A (1)

 

 

ಧರ್ಮಸ್ಥಳಕ್ಕಾಗಲಿ, ವೀರೇಂದ್ರ ಹೆಗಡೆ ಅವರಿಗಾಗಲಿ ಅಪಮಾನ ಮಾಡಲು ಯಾವುದೇ ಕಾರಣಕ್ಕೂ ಹಿಂದೂ ಸಮಾಜ ಬಿಡುವುದಿಲ್ಲವೆಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ಅವರು ಮಂಗಳವಾರ ಶಿವಮೊಗ್ಗದಿಂದ ಧರ್ಮಸ್ಥಳಕ್ಕೆ ಧರ್ಮ ರಕ್ಷಾ ಜಾಥ ನಡೆಸುವ ಸಂದರ್ಭದಲ್ಲಿ ಮೂಡಿಗೆರೆ ಪಟ್ಟಣದ ಶ್ರೀ ಹಿರೇ ದೇವಿರಮ್ಮನ ಬನ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಧರ್ಮಕ್ಕೆ ಅಪಮಾನ ಮಾಡುವ ವ್ಯವಸ್ಥೆಗೆ ರಾಜ್ಯ ಸರಕಾರ ಪ್ರೇರಣೆ ಕೊಡುತ್ತಿದೆ. ಎಸ್‍ಐಟಿ ತನಿಖೆಗೆ ಯಾರೂ ಹೇಳಿಲ್ಲ. ಇದರಿಂದ ಸತ್ಯ ಹೊರ ಬರುವುದಿಲ್ಲ. ಯಾವ ರೀತಿ ಅಯೋಧ್ಯೆಯಲ್ಲಿ ಆಯಿತೋ ಅದೇ ರೀತಿ ನ್ಯಾಯ ಧರ್ಮಸ್ಥಳದಲ್ಲಿ ಸಿಗುತ್ತದೆ. ಧರ್ಮಸ್ಥಳ ಹೆಸರು ಹಾಳು ಮಾಡುವ ಕುತಂತ್ರಿಗಳಿಗೆ ವಿದೇಶಿ ಹಣ ಕೂಡ ಬರುತ್ತಿದೆ ಎಂಬ ಮಾಹಿತಿ ಇದೆ. ಎಷ್ಟೇ ಪ್ರಯತ್ನ ನಡೆಸಿದರೂ ಅಧರ್ಮಕ್ಕೆ ಸೋಲು, ಧರ್ಮಕ್ಕೆ ನ್ಯಾಯ ಸಿಕ್ಕೇ ಸಿಗುತ್ತದೆ. ಈ ಬಗ್ಗೆ ಸತ್ಯಾ ಸತ್ಯತೆ ಸಂಪೂರ್ಣ ಹೊರ ಬರಬೇಕೆಂದರೆ ಎನ್‍ಐಎಗೆ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು.

ಮಂಗಳೂರಿನ ಅನೇಕ ಕಡೆ ಧಾರ್ಮಿಕ ಕಾರ್ಯಕ್ರಮ ನಡೆಸುವ ಸಂದರ್ಭದಲ್ಲಿ ಪೊಲೀಸರು ಹಿಂದೂ ಧಾರ್ಮಿಕ ಕಾರ್ಯಕ್ರಮವನ್ನು ಅರ್ಧದಲ್ಲಿಯೇ ನಿಲ್ಲಿಸಿರುವುದು ತನಗೆ ನೋವಾಗಿದೆ. ಬಹಳ ದಿನ ಕಾಂಗ್ರೆಸ್ ಸರಕಾರ ಇರುವುದಿಲ್ಲ. ಧರ್ಮ ದ್ರೋಹಿ ಸಿದ್ದರಾಮಯ್ಯ ಸರಕಾರ ಉಳಿಯೋಲ್ಲ. ಮುಂದೆ ಧರ್ಮವನ್ನು ಉಳಿಸುವ ಸರಕಾರ ಬರುತ್ತದೆ. ಆಗ ಪೊಲೀಸರು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಹಿರೇ ದೇವಿರಮ್ಮನ ಬನ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸಮಿತಿ ವತಿಯಿಂದ ಶಿವಮೊಗ್ಗ ಬಸವೇಶ್ವರ ಸಮಾಜದ ನಿರ್ದೇಶಕ ವೇದಮೂರ್ತಿ ಮಹಲಿಂಗಯ್ಯ, ಜ್ಞಾನೇಶ್ವರಿ ಗೋಶಾಲೆಯ ಗುರುರಾಜ್, ಉದ್ಯಮಿ ಚಂದ್ರಹಾಸ್ ಶೆಟ್ಟಿ, ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಪಾಂಡುರಂಗ ಸೇಟ್, ಕಾಂತೇಶ್ ಈಶ್ಚರಪ್ಪ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಧರ್ಮರಕ್ಷಾ ಜಾಥ ಕಾರ್ಯಕರ್ತರಿಗೆ ಅನ್ನಸಂತರ್ಪಣೆ ನಡೆಯಿತು. ಉದ್ಯಮಿ ಕೆ. ಮಂಚೇಗೌಡ, ಟಿ.ಎ.ಮದೀಶ್, ಜೆ.ಎಸ್.ರಘು, ಸುಧೀರ್ ಜನ್ನಾಪುರ, ವಿಜಯ್ ಕುಮಾರ್, ಕೀರ್ತಿ ಮಗ್ಗಲಮಕ್ಕಿ ಮತ್ತಿತರರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ