cosmo 2

 

 

ಶ್ರೀಮತಿ ಪ್ರಮೀಳ ಮತ್ತು ಶ್ರೀಮತಿ ಶ್ರೀವಾಣಿ ಸುಗಮ್  ಇವರು ಅರ್ಪಿಸುವ ಹೆಸರಾಂತ “ಕಾಸ್ಮೋ ಬಜಾರ್” ಪೆಸ್ಟೀವ್ ಕಲೆಕ್ಷನ್ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ದಿನಾಂಕ 05/09/2025ನೇ ಶುಕ್ರವಾರ ಮೂಡಿಗೆರೆ ‘ರೈತ ಭವನದಲ್ಲಿ’ ಹಾಗೂ ದಿನಾಂಕ 06/09/2025ನೇ ಶನಿವಾರ   ಚಿಕ್ಕಮಗಳೂರಿನ ಹೋಟೆಲ್ ಆದ್ರಿಕಾ ಇಲ್ಲಿ ಆಯೋಜಿಸಲಾಗಿದೆ.

ವಿಶಿಷ್ಟ ವಿನ್ಯಾಸದ ಸೀರೆ, ಸಲ್ವಾರ್, ಕುರ್ತಾ ಮುಂತಾದ ಡಿಸೈನರ್ ಉಡುಪುಗಳು.. ಆಕರ್ಷಕ ಗೃಹೋಪಯೋಗಿ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳು, ‘ಪೀಠೋಪಕರಣಗಳು, ಒಳಾಂಗಣ ಅಲಂಕಾರದ ವಸ್ತುಗಳು. ಅಲಂಕಾರಿಕ ಗಿಡಗಳ ಪಾಟ್‍ಗಳು, ನೂತನ ವಿನ್ಯಾಸದ ಆಭರಣಗಳು, ಸಾವಯವ ಉತ್ಪನ್ನಗಳು, ಅಲಂಕಾರಿಕ ಲೋಹದ ವಸ್ತುಗಳು, ಪ್ರಸಾದನ ಸಾಮಗ್ರಿಗಳ ಪ್ರದರ್ಶನ ಮತ್ತು ಮಾರಾಟವಿರುತ್ತದೆ.

ಹಾಗೆಯೇ ಮಲೆನಾಡಿನ ವಿಶಿಷ್ಟ ಶೈಲಿಯ ಖಾದ್ಯಗಳ ಮಾರಾಟವಿರುತ್ತದೆ.

ಮೇಳದಲ್ಲಿ ಹಳೇ ರೇಷ್ಮೆ ಸೀರೆಗಳ ಜರಿಗಳನ್ನು ಸ್ಥಳದಲ್ಲೇ ಮೌಲ್ಯಮಾಪನ ಮಾಡಿ ಖರೀದಿಸಲಾಗುತ್ತದೆ.

ಸಾರ್ವಜನಿಕರು ಈ ವಿಶಿಷ್ಟ ಮೇಳವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

ದಿನಾಂಕ : 05/09/2025 ಶುಕ್ರವಾರ
ಸ್ಥಳ : ರೈತ ಭವನ, ಮೂಡಿಗೆರೆ

ಸಮಯ : ಬೆಳಿಗ್ಗೆ 10:30ರಿಂದ ರಾತ್ರಿ 8 ರವರೆಗೆ.

ಮುಖ್ಯ ಅತಿಥಿ : ಶ್ರೀಮತಿ ರಂಜನ್ ಅಜಿತ್ ಕುಮಾರ್, ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು, ಪಟ್ಟಣ ಪಂಚಾಯಿತಿ, ಮೂಡಿಗೆರೆ

ದಿನಾಂಕ : 06/09/2025 ಶನಿವಾರ
ಸ್ಥಳ : ಹೋಟೆಲ್ ಆದ್ರಿಕಾ, ಚಿಕ್ಕಮಗಳೂರು

ಸಮಯ : ಬೆಳಿಗ್ಗೆ 10:30ರಿಂದ ರಾತ್ರಿ 8 ರವರೆಗೆ.

ಮುಖ್ಯ ಅತಿಥಿ : ಶ್ರೀಮತಿ ನಯನಾ ಸಂತೋಷ್, ಅಧ್ಯಕ್ಷರು, ರೋಟರಿ ಇನ್ನರ್ ವೀಲ್ ಕ್ಲಬ್, ಚಿಕ್ಕಮಗಳೂರು

ಪ್ರವೇಶ ಉಚಿತ

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : ಶ್ರೀಮತಿ ಪ್ರಮೀಳ :- 9611573637, ಶ್ರೀಮತಿ ಶ್ರೀವಾಣಿ ಸುಗಮ್ :- 8197535020

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ