ಕ್ರೀಡೆ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಹಕಾರಿ ಎಂದು ಸುಧೀರ್ ಹೆಗ್ಗುಡ್ಲು ತಿಳಿಸಿದರು.
ಅವರು ಮೂಡಿಗೆರೆ ತಾಲ್ಲೂಕಿನ ಹಂತೂರಿನಲ್ಲಿ ರಾಮೇಶ್ವರ ಕ್ರಿಕೆಟರ್ಸ್ ಕಣಚೂರು ವತಿಯಿಂದ ನಡೆದ 35 ವರ್ಷ ಮೇಲ್ಪಟ್ಟವರ ಲೆಜೆಂಡ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಆಧುನಿಕ ಯುಗದಲ್ಲಿ ದೈಹಿಕ ಕ್ಷಮತೆಗೆ ಒತ್ತು ನೀಡುವುದು ಪ್ರಮುಖವಾಗಿದ್ದು. ಕ್ರೀಡೆ ಈ ನಿಟ್ಟಿನಲ್ಲಿ ಸಹಕಾರಿ. ಮನುಷ್ಯ ತನ್ನ ಸಹಜ ದೈಹಿಕ ಕ್ಷಮತೆಯನ್ನು ಮರೆತ ಪರಿಣಾಮ ಆರೋಗ್ಯದಲ್ಲಿ ಒತ್ತಡದಿಂದ ಹಲವು ಸಮಸ್ಯೆಗಳು ಕಂಡು ಬರುತ್ತಿದ್ದು. ಆಯುಷ್ಯ ಕಳೆದುಕೊಳ್ಳುವ ಹಂತ ತಲುಪಿದ್ದೇವೆ. ಕೃಷಿ ಇನ್ನಿತರ ಚಟುವಟಿಕೆಯೊಂದಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮಾನಸಿಕ ದೈಹಿಕ ಸದೃಢಕ್ಕೆ ಕಾರಣವಾಗುತ್ತದೆ. ಅದರಲ್ಲೂ ಪ್ರಮುಖವಾಗಿ ಯುವಕರನ್ನು ಬಿಟ್ಟು ಅವಕಾಶ ವಂಚಿತ 35 ವರ್ಷ ಮೇಲ್ಪಟ್ಟವರಿಗೆ ಕ್ರೀಡೆಯನ್ನ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಲೀಗ್ ಮಾದರಿಯಲ್ಲಿ ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಆರು ತಂಡಗಳು ಭಾಗವಹಿಸಿದ್ದು. ಪ್ರಥಮ ಸ್ಥಾನವನ್ನು ಭೈರವ ವಾರಿಯರ್ಸ್ ಕಣಚೂರು. ದ್ವಿತೀಯ ಹನಿ ಫೀಲ್ಡ್ ಜೇನುಬ್ಯೆಲು. ತೃತೀಯ ಕಾಳಿಕಾಂಬ ದಾರದಹಳ್ಳಿ ಗಳಿಸಿದ್ದು. ಸರಣಿ ಶ್ರೇಷ್ಠ ದೇವರಾಜ್ ಅಂಗಡಿ, ಪಂದ್ಯ ಪುರುಷೋತ್ತಮ ಮಿಥುನ್ ಕಣಚೂರು. ಉತ್ತಮ ಬ್ಯಾಟ್ಸ್ ಮೆನ್ ಅಭಿ ದಾರದಹಳ್ಳಿ ಹಾಗೂ ಉತ್ತಮ ಬೌಲರ್ ಪ್ರದ್ಯುಮ್ನ ಹೊಸಳ್ಳಿ ಗಳಿಸಿದರು.
ಪಂದ್ಯಾವಳಿಯಲ್ಲಿ ದೀಪಕ್ ಎಚ್ ಎಮ್. ವಿನೋದ್ ಕೆ.ಎಸ್. ಹೆನ್ರಿ ರೋಬೆಲ್ಲೋ. ವಿಶ್ವನಾಥ್ ಮೋಹನ್. ಸುಧೀರ್ ಕಡಿದಾಳು. ರವೀಂದ್ರ. ಸಂತೋಷ್ ವಿ.ಡಿ. ಮಿಥುನ್ ಕೆ.ಪಿ ಮನೋಜ್. ಕೆ.ಎಂ ಮಿಥುನ್. ಮಧು. ಗ್ರಾಮಸ್ಥರು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.



