ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಿಕ್ಕಮಗಳೂರು ತಾಲ್ಲೂಕು ಸಂಘದ ನೂತನ ಅಧ್ಯಕ್ಷ ರಾಗಿ ಪಿ.ಜಿ.ಸುಮ ಮತ್ತು ಗೌರವಾಧ್ಯಕ್ಷರಾಗಿ ಡಿ.ಎಸ್.ಗಿರಿಯಪ್ಪ ಅವರನ್ನು ತಾ.ಪಂ. ಸಭಾಂಗಣದಲ್ಲಿ ನಡೆ ದ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಎ.ಕೆ.ಕುಲದೀಪ್ ತಿಳಿಸಿ ದ್ದಾರೆ.
ಪದಾಧಿಕಾರಿಗಳು : ಹೆಚ್.ವಿಜಯ (ಉಪಾಧ್ಯಕ್ಷೆ), ವಿ.ವೈ.ಚಂದನ್ (ಖಜಾಂಚಿ), ಪಿ.ಲೀ ಲಾ (ಸಂಘಟನಾ ಕಾರ್ಯದರ್ಶಿ), ಎಸ್.ಪರಶುರಾಮ್, ಪಿ.ಡಿ.ಶರತ್, ಕೆ.ಎಸ್.ಪ್ರದೀಪ್, ಎಸ್.ಪಿ.ಲಿಖಿತ್ (ಸದಸ್ಯರುಗಳು). ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ದಿ ಜಿಲ್ಲಾ ಸಂಘಕ್ಕೆ ಎನ್.ಎಸ್.ಜಗ ನ್ನಾಥ್ (ಗೌರವಾಧ್ಯಕ್ಷ), ವಿಶ್ವನಾಥಯ್ಯ (ಪ್ರ.ಕಾರ್ಯದರ್ಶಿ), ಚಾಲುಕ್ಯ ಭಾರವಿ (ಸಲಹೆಗಾರ) ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಪರಿಷತ್ ಸದಸ್ಯ ಹೆಚ್.ಎಂ.ಚೇತನ್, ಜಿಲ್ಲಾ ಉಪಾಧ್ಯಕ್ಷ ಎಂ.ಶಾಂತಿ, ಖಜಾಚಿ ಆರ್.ರಾಜಕುಮಾರ್ ಮತ್ತಿತರರು ಉಪಸ್ಥಿತರಿದ್ದರು.



