suddi-12

 

 

ರೈತರು, ಕಾರ್ವಿಕರ ಬಗ್ಗೆ ಉದ್ದಾತ ಬಾವನೆಯನು ಹೊಂದಿದವರು ಲಕ್ಷಾಂತರ ಕಾಪಿ ಬೆಳೆಗಾರರಿಗೆ ಆಶಾದಾಯಕವಾಗಿದ್ದರು ಮತ್ತು ಸ್ಪೂರ್ತಿಯಾಗಿದ್ದಂತಹ   ವಿ.ಜಿ.ಸಿದ್ದಾರ್ಥಹೆಗ್ಗಡೆ ಯವರ ಅಗಲಿಕೆ ಸಮಾಜಕ್ಕೆ ದೊಡ್ಡ ನಷ್ಟವಾಗಿದೆ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ತಿಳಿಸಿದರು.

ಮೂಡಿಗೆರೆ ಸಮೀಪದ ಸಿದ್ದಾರ್ಥ ವನದಲ್ಲಿ ಸಿದ್ದಾರ್ಥ ಹೆಗ್ಗಡೆಯವರ ಏಳನೇ ವರ್ಷದ ಪ್ಮಣ್ಯ ಸ್ಮರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಶೃಂದ್ದಾಂಜಲಿ ಸಭೆಯಲ್ಲಿ ಬಾಗವಹಿಸಿ ಮಾತನಾಡಿದ ಅವರು. ಸಿದ್ದಾರ್ಥ ಹೆಗ್ಗಡೆ ಎಂದರೆ ಅದು ಒಂದು ಶಕ್ತಿಯಾಗಿತ್ತು ಇಂದು ಆ ಶಕ್ತಿ ನಮ್ಮೊಂದಿಗಿಲ್ಲಾ ಆದರೆ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದರು.

ಸಿದ್ದಾರ್ಥ ಹೆಗ್ಗಡೆ ಅಭಿಮಾನಿ ಬಳಗದ ಅಧ್ಯಕ್ಷರು ಮಾಜಿ ಗೃಹಮಂಡಲಿ ಮಾಜಿ ಅಧ್ಯಕ್ಷ ಜಿ.ಹೆಚ್.ಹಾಲಪ್ಪಗೌಡ ಮಾತನಾಡಿ. ಕಾರ್ಮೀಕರೊರ್ವರಿಗೆ ಎದೆ ನೋವು ಬಂದು ಒದ್ದಾಡುತ್ತಿದ್ದಾಗ ಹಿಂದೆ ಮುಂದೆ ಯೋಚಿಸದೆ ಹೆಲಿಕಾಪಟ್ಟರ್ ಮೂಲಕ ಆ ಕಾರ್ಮಿಕನನ್ನು ಆಸ್ಪತ್ರೆಗೆ ಸೇರಿಸಿ ಆತನ ಶಸ್ತ್ರ ಚಿಕಿತ್ಸೆ ಮಾಡಿಸಿ ಆತನ ಜೀವ ಉಳಿಸುವುದರೊಂದಿಗೆ ಅವರ ಕುಟುಂಬಕ್ಕೆ ಆಸರೆಯಾಗಿದ್ದಾರೆ. ತಂದೆ ಗಂಗಯ್ಯ ಹೆಗ್ಡೆ ಸ್ವಾತಂತ್ರ್ಯ ಹೋರಾಟಗಾರರಾದರೆ ಮಗ ಸಾಮಾಜಿಕ ಹೋರಾಟಗಾರ ಜನ ಸಾಮಾನ್ಯರಂತೆ ಎಲ್ಲರೊಂದಿಗೆ ಬೆರೆತು ತನ್ನ ಕೈಲಾದ ಸೇವೆ ತೊಡಗಿಕೊಂಡ ಅನ್ನದಾತ ಎಂದರೆ ತಪ್ಪಾಗಲಾರದು ಎಂದರು..

ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಮಾತನಾಡಿ. ಬೆಳೆಗಾರರ ಸಂಘವನ್ನು ಸಿದ್ದಾರ್ಥ ಅವರ ತಂದೆ ಗಂಗಯ್ಯ ಹೆಗ್ಗಡೆ ಸ್ಪಾಪಿಸಿದರೆ ಬೆಳೆಗಾರ ಸಂಕಷ್ಟಕ್ಕೆ ನೆರವಾಗುತ್ತಿದ್ದವರು ಸಿದ್ದಾರ್ಥ ಹೆಗ್ಗಡೆ. ಗಂಗಯ್ಯ ಹೆಗ್ಡೆ ಮತ್ತು ಸಿದ್ದಾರ್ಥ ಹೆಗ್ಡೆ ಇವರಿಬ್ಬರು ಕಾರ್ಮಿಕರಿಗೂ ಹಾಗೂ ಬೆಳೆಗಾರರಿಗೂ ಎರಡು ಕಣ್ಣುಗಳ ಹಾಗೆ ಇದ್ದವರು. ಸಿದ್ದಾರ್ಥ ಅಭಿಮಾನಿ ಬಳಗದ ಅಧ್ಯಕ್ಷ ಜಿ.ಹೆಚ್.ಹಾಲಪ್ಪಗೌಡರು ಅವರ ಪುತ್ಥಳಿಯನ್ಮ್ನ ಸ್ಥಾಪಿಸುವುದರೊಂದಿಗೆ ಅವರ ನೆನಪು ಸದಾ ಮನದಲ್ಲಿ ಉಳಿಯುವಂತೆ ಮಾಡಿದ್ದಾರೆ. ಎಂದರು.

ಬಿ.ಕೆ.ಲಕ್ಷ್ಮಣ್ ಕುಮಾರ್ ಮತ್ತು ಹವಳ್ಳಿ ಕೃಷ್ಣೇಗೌಡ್ರು, ಮೊಯಿದ್ದಿನ್ ಶೇಟ್, ಪೂರ್ಣೆಶ್ ಮೂರ್ತಿ, ಹೂವಪ್ಪ, ಮಾತನಾಡಿದರು. ಈ ಸಂದರ್ಭದಲ್ಲಿ ಡಿ.ಕೆ. ಲಕ್ಷ್ಮಣಗೌಡ್ರು,   ಮಾಜಿ ಗ್ರಾಪಂ ಸದಸ್ಯರುಗಳಾದ ಪ್ರಶಾಂತ್, ಶಿವಣ್ಣ, ದಿವಾಕರ್, ರಾಧಕ್ಕ, ವಿಶ್ವನಾಥ್, ಉದಯ್, ರಾಮಚಂದ್ರ ಒಡೆಯರ್, ದಶರಥ್ ಹಾಲಪ್ಪಗೌಡ, ಸೇರಿದಂತೆ ಸಿದ್ದಾರ್ಥ ಅಭಿಮಾನಿಗಳು  ಶೃದ್ದಾಂಜಲಿ ಅರ್ಪಿಸಿದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ