suddi-4

 

 

ಜೀವನದಲ್ಲಿ ಹಲವಾರು ಏಳುಬೀಳುಗಳನ್ನು ಗಮನಿಸಿರುವ ಹಿರಿಯ ನಾಗರೀಕರಿಗೆ, ಪ್ರಜ್ಞಾವಂತ ನಾಗರೀಕ ಸಮಾಜವು ದುಡಿಮೆಯ ಒಂದಿಷ್ಟು ಪಾಲನ್ನು ಹಿರಿಯರ ಸೌಕರ್ಯ ಕ್ಕೆ ಮುಡಿಪಿಡಬೇಕು ಎಂದು ಚಿಕ್ಕಮಗಳೂರು ಕಾಫಿ ಟ್ರೇಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಕಳವಾಸೆ ರವಿ ಹೇಳಿದರು.

ಚಿಕ್ಕಮಗಳೂರು ತಾಲ್ಲೂಕಿನ ಇಂದಾವರ ಗ್ರಾಮದ ಅನ್ನಪೂರ್ಣ ವೃದ್ದಾಶ್ರಮದಲ್ಲಿ ಮಂಗಳವಾರ ಕಾಫಿ ಟ್ರೇಡರ್ಸ್ ಅ ಸೋಸಿಯೇಷನ್ ವತಿಯಿಂದ ಆಯೋಜಿಸಿದ್ಧ ವೃದ್ದಾಶ್ರಮಕ್ಕೆ ಉಚಿತ ದಿನಸಿ ಪದಾರ್ಥ, ಮಿಕ್ಸರ್ ಸೇರಿದಂ ತೆ ಮೂಲಸೌಕರ್ಯ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿ ಮಕ್ಕಳ ಯಶಸ್ಸಿನ ಹಿಂಬದಿ ಪಾಲಕರು ಶ್ರಮ ಬಹಳಷ್ಟಿದೆ. ಬಾಲ್ಯದಿಂದ, ಯೌವ್ವನದವರೆಗೂ ಸು ಖ-ದುಃಖದಲ್ಲಿ ಪಾಲಕರು ಮಕ್ಕಳನ್ನು ಎಂದಿಗೂ ಕೈಬೀಡುವುದಿಲ್ಲ. ಸೋಲಾನುಭವಿದ ಸಂದರ್ಭದಲ್ಲೂ ಆತ್ಮವಿಶ್ವಾಸ, ಛಲ ಹಾಗೂ ಮನೋಸ್ಥೈರ್ಯ ತುಂಬುತ್ತಾರೆ ಎಂದು ಹೇಳಿದರು.

ಇಂದಿನ ಕಾಲಮಾನದಲ್ಲಿ ವಿದ್ಯಾವಂತ ಯುವಕರೇ ಪಾಲಕರನ್ನು ವೃದ್ದಾಶ್ರಮಕ್ಕೆ ಸೇರಿಸುವ ಸಂಸ್ಕøತಿ ಹೆಚ್ಚಾಗಿದೆ. ಅಲ್ಲದೇ ಉದ್ಯೋಗ ಅಥವಾ ಮದುವೆಯ ಬಳಿಕ ಹೆತ್ತವರನ್ನು ಒಬ್ಬಂಟಿಯಾಗಿಸುವುದು ಸರಿ ಯಾದ ಕ್ರಮವಲ್ಲ. ಮುಂದೆ ಯೌವ್ವನದ ವಯಸ್ಸು ಕಳೆದು ಮುಪ್ಪು ಆವರಿಸುವುದನ್ನು ಮರೆಯಬಾರದು ಎಂದು ಹೇಳಿದರು.

ಭಾರತದಲ್ಲಿ ಕಾಫಿ ಬೆಳೆಯಲು ಏಳು ಕಾಫಿ ಬೀಜಗಳನ್ನು ಗಿರಿಶ್ರೇಣಿಗಳಲ್ಲಿ ನೆಟ್ಟರು ಎಂಬ ಇತಿಹಾಸವಿ ದೆ. ಇದು ಭಾರತದ ಪ್ರಮುಖ ಕಾಫಿ ಉತ್ಪಾದಕ ಮತ್ತು ರಫ್ತು ದೇಶಗಳಲ್ಲಿ ಒಂದಾಗಿದೆ. ಹಿಂದೆ ಕಾಫಿಯ ನ್ನು ಕೇವಲ ಕೃಷಿ ಉತ್ಪನ್ನವಾಗಿ ಮಾರಾಟ ಮಾಡಲಾಗುತ್ತಿತ್ತು. ಇದೀಗ ಕಾಫಿಯೇ ಒಂದು ಜಾಗತೀಕ ಮ ಟ್ಟದ ಉದ್ಯಮವಾಗಿ ಬೆಳೆದಿದೆ ಎಂದರು.

ಅಸೋಸಿಯೇಷನ್ ಉಪಾಧ್ಯಕ್ಷ ಕೃಷ್ಣಮೂರ್ತಿ ರಾಜ್ ಅರಸ್ ಮಾತನಾಡಿ ಸಮಾಜದಿಂದ ಎಲ್ಲವನ್ನು ಪಡೆಯುವ ಮಾನವರು, ಸಮಾಜಕ್ಕೆ ಯಾವ ಕೊಡುಗೆ ನೀಡಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳ ಬೇಕು. ವರ್ಷಪೂರ್ತಿ ದುಡಿದು ಹಣ ಕೂಡಿಡುವ ಬದಲು, ಹಿರಿಯರು, ವಿಶೇಷಚೇತನರಿಗೆ ಕೈಲಾದ ಸಹಾ ಯಹಸ್ತ ಚಾಚುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಇದೇ ವೇಳೆ ಅನ್ನಪೂರ್ಣ ವೃದ್ದಾಶ್ರಮ ಹಾಗೂ ಹಿರಿಯರಿಗೆ ನೆರವಾಗಲು ಮಿಕ್ಸಿ, ದಿನಸಿ ಪದಾರ್ಥ, ಚಾಪೆಯನ್ನು ಉಚಿತವಾಗಿ ನೀಡಲಾಯಿತು. ಬಳಿಕ ಅನ್ನದಾಸೋಹ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸಂಜಯ್, ಖಜಾಂಚಿ ಬಾಲರಾಜ್ ಅರಸ್, ಸಂಘಟನಾ ಕಾರ್ಯದರ್ಶಿಗಳಾದ ಮನೋಹರ್, ನಹೀಂ ನಿರ್ದೇಶಕರುಗಳಾದ ಮಂಜುನಾಥ್, ಸಲೀಂ, ಪರಮೇಶ್, ಸಂಜಯ್ ಮಳಲೂರು, ವೃದ್ದಾಶ್ರಮದ ಮುಖ್ಯಸ್ಥರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ