suddi-5 (3)

 

 

ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶ ಸೋಮವಾರ ಹೊರಬಿದ್ದಿದ್ದು 3 ರಾಜ್ಯಗಳ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲ್ಲೂಕು ಜನ್ನಾಪುರ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವದ ಸಂಭ್ರಮಾಚರಣೆ ನಡೆಸಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಘು ಜೆ ಎಸ್ ಮಾತನಾಡಿ ಪಂಚಾರಾಜ್ಯ ಚುನಾವಣೆಯಲ್ಲಿ ಫಲಿತಾಂಶ ಬಂದಿದ್ದು ಮೂರು ರಾಜ್ಯದಲ್ಲಿ ಬಿಜೆಪಿ ಬಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು ಒಂದು ಕಾಲದಲ್ಲಿ ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾದೇಶದ ನುಸುಳುಕೋರರ ಸಮಸ್ಯೆ ಆಗುತ್ತಿತ್ತು ಅ ಸಮಸ್ಯೆಗೋಸ್ಕರ ಈಡಿ ಹಿಂದೂ ಸಮಾಜ ಒಟ್ಟಾಗಿ ಮತವನ್ನು ಕ್ರೂಢೀಕರಣ ಮಾಡಿ ಇವತ್ತು 205 ಕ್ಕಿಂತ ಹೆಚ್ಚು ಸ್ಥಾನಗಳಿಸಿ ಪ್ರಥಮ ಬಾರಿಗೆ 15 ವರ್ಷಗಳಿಂದ ಆಡಳಿತದಲ್ಲಿದ್ದ ಮಮತಾ ಬ್ಯಾನರ್ಜಿ ಸರ್ಕಾರವನ್ನು ಕಿತ್ತೊಗೆದು ಬಿಜೆಪಿ ಅಧಿಕಾರಕ್ಕೆ ಬಂದಿದೆ ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರ ಜೋಡೆತ್ತುಗಳ ಹೋರಾಟ ಮತ್ತು ಯೋಗಿ ಜೀ ಅವರ ಪ್ರಚಾರ ಭಾಷಣದಿಂದ ಪ. ಬಂಗಾಳವನ್ನು ಗೆದ್ದಿದ್ದೇವೆ ಎಂದರು.

ಗೋಣಿಬೀಡು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಭರತ್ ವಾಲೆಕರೆಟಿ ಮಾತನಾಡಿ ಭಾರತದ ಇತಿಹಾಸದ ಪುಟದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತ ದಿನವಾಗಿದ್ದು ಭಾರತದ ಆಂತರಿಕ ಭದ್ರತೆಗೆ ದಕ್ಕೆ ಉಂಟುಮಾಡುವಂತ ಎಲ್ಲ ಸಾಧ್ಯತೆಗಳಿದ್ದ 2 ರಾಜ್ಯಗಳಾದ ಅಸ್ಸಾಂ. ಮತ್ತು ಪಶ್ಚಿಮ ಬಂಗಾಳದಲ್ಲಿ ನಮ್ಮ ನಾಯಕರಾದ ಬಿ. ಎಲ್ ಸಂತೋಷ್ ಅವರು ತೆರೆಮರೆಯಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸಿ ಸತತವಾಗಿ 15 ವರ್ಷಗಳಿಂದ ಪ್ರಯತ್ನ ಪಟ್ಟು ದೇಶಕ್ಕೆ ಮತ್ತು ಬಿಜೆಪಿಗೆ ಅಭೂತಪೆÇೀರ್ವ ಗೆಲುವು ತಂದುಕೊಟ್ಟಿದ್ದಾರೆ. ಈ ಗೆಲುವು ಚುನಾವಣೆಯಲ್ಲಿ ನಿರಂತರ ಶ್ರಮವಹಿಸಿ ತ್ಯಾಗದಿಂದ ತಮ್ಮ ಜೀವನವನ್ನೆ ಬಲಿದಾನ ಕೊಟ್ಟ ಬಿಜೆಪಿ ಕಾರ್ಯಕರ್ತರಿಗೆ ಸಮರ್ಪಣೆ ಅಗಬೇಕೆಂದರು.

ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷ ಅವಿನಾಶ್ ಮಾತನಾಡಿ ಈ ಚುನಾವಣೆಯ ಗೆಲುವು ಮಾತ್ರ ಮುಖ್ಯವಲ್ಲ ಬಾಂಗ್ಲಾ ದೇಶದ ರೋಹಿಂಗಿಗಳು ಮತ್ತು ಅಕ್ರಮ ನುಸುಳುಕೋರರನ್ನು ಹೊರ ಹಾಕುವ ವಿಚಾರವಾಗಿ ನಡೆದಂತ ಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ ಮತ್ತು ಮೊನ್ನೆ ಮೊನ್ನೆಯಷ್ಟೇ ದೆಹಲಿಯ ಸಂಸತ್ ಭವನದಲ್ಲಿ ನೆಡೆದಂತ ಮಹಿಳಾ ಮೀಸಲಾತಿ ಬಿಲ್ ವಿರೋಧಿಸಿದ ಎಲ್ಲರಿಗೂ ಈ ಪಂಚರಾಜ್ಯ ಚುನಾವಣೆಯಲ್ಲಿ ಮಹಿಳಾ ಮತದಾರರು ತಕ್ಕ ಪಾಠ ಕಳಿಸಿದ್ದಾರೆ ಎಂದರು .

ಬಿಜೆಪಿ ವಿಜಯೋತ್ಸವದಲ್ಲಿ ಜನ್ನಾಪುರ ಸರ್ಕಲ್ ನಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಜೈಕಾರ ಕೂಗಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಧರ್ಮೇಶ್ ಉದುಸೆ, ಸಂತೋಷ ಶುಭನಗರ, ಸಿ.ಎಲ್.ಪೂರ್ಣೇಶ್ ಚಕ್ಕುಡಿಗೆ, ಗಿರೀಶ್ ಪೂಜಾರಿ, ಅಭಿ ಶುಭನಗರ, ಮೋಹನ್, ರಾಘವೇಂದ್ರ, ಪೃಥ್ವಿ, ಪ್ರತಾಪ್, ರಾಜು ಮತ್ತು ಎಲ್ಲ ಕಾರ್ಯಕರ್ತರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ