ಪಂಚರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವಿಗೆ ಚಿಕ್ಕಮಗಳೂರು ತಾಲೂಕಿನ ಆವತಿ ಹೋಬಳಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ ನಡೆಸಲಾಯಿತು.
ಹೋಬಳಿ ಮುಖ್ಯ ಕೇಂದ್ರದಲ್ಲಿ ಕಾರ್ಯಕರ್ತರು ಬಾವುಟ ಹಿಡಿದು, ಘೋಷಣೆ ಕೂಗಿ, ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮ ಹಂಚಿಕೊಂಡರು.
ಆವತಿ ಹೋಬಳಿ ಅಧ್ಯಕ್ಷರಾದ ಕೆರೆಮಕ್ಕಿ ಮಹೇಶ್, ಹೆಚ್ ಬಿ ಮಹೇಂದ್ರ, ನಾಗೇಶ್ ಬೈಗೂರ್, ಕೆ ಎಂ ಶಾಂತೇಗೌಡ್ರು, ಹೆಚ್ ಎಂ ಶ್ಯಾಮ್, ಗಿರೀಶ್ ಕಸಿಗೆ, ರಮೇಶ್ ಬೆಟ್ಟದ ಮಳಲಿ, ಎಚ್ ಟಿ ಉಮೇಶ್, ಮಲ್ಲೇಶ್, ರವಿಪ್ರಸಾದ್, ಗೋಕುಲ್ ಏನ್ ಜೆ, ನಾಗೇಶ್ ಸಿರಗೂರು, ಶಶಿಧರ್, ಚೇತನ್, ಇಂದ್ರೇಶ್ ರುದ್ರೇಶ್, ರಾಜು ನರಿಗುಡ್ಡೆ, ರಮೇಶ್, ಕೃಷ್ಣೇಗೌಡರು, ಸುರೇಶ್ ಮುಂತಾದವರು ಭಾಗವಹಿಸಿದ್ದರು.



