ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ 18 ಪಿಡಬ್ಲ್ಯೂಡಿ ರಸ್ತೆ ಗಳಿಗೆ ಒಟ್ಟು 119.00 ಕೋಟಿ ದುರಸ್ತಿ ಮತ್ತು ಅಭಿವೃದ್ಧಿಗಾಗಿ ಮಂಜೂರಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬಾಳೆಹೊನ್ನೂರು-ಶೃಂಗೇರಿ ರಸ್ತೆಗೆ 50 ಕೋಟಿ
ಕೊಪ್ಪ-ಜಯಪುರ-ಶೃಂಗೇರಿ ರಸ್ತೆ 6 ಕೋಟಿ
ಕುಂದಾಪುರ-ಬೈಂದೂರು-ವಿರಾಜಪೇಟೆ ರಸ್ತೆಗೆ 6 ಕೋಟಿ
ಉಡುಪಿ- ಹಿರಿಯಡ್ಕ -ಕಾರ್ಕಳ -ಸುಬ್ರಹ್ಮಣ್ಯ ರಸ್ತೆಗೆ 6 ಕೋಟಿ
ಬ್ರಹ್ಮಾವರ-ಜನ್ನಾಡಿ ರಸ್ತೆ ಅಭಿವೃದ್ಧಿಗೆ 5 ಕೋಟಿ
ಬಾರ್ಕೂರು ರಸ್ತೆ ಅಭಿವೃದ್ಧಿಗೆ 10 ಕೋಟಿ
ಶಿರೂರು- ಕೊಕ್ಕರ್ಣೆ-ಸಂತೆಕಟ್ಟೆ ರಸ್ತೆಗೆ 3 ಕೋಟಿ
ಹಳೆ ಎಮ್.ಬಿ.ಸಿ ರಸ್ತೆಗೆ 1.60 ಕೋಟಿ
ಆರೂರು-ಮಣ್ಣಿನ ಜಡ್ಡು-ಕೊಕ್ಕರ್ಣೆ ರಸ್ತೆಗೆ 1.40 ಕೋಟಿ
ತೀರ್ಥಹಳ್ಳಿಯಿಂದ ಕುಂದಾಪುರ ರಸ್ತೆಗೆ 2 ಕೋಟಿ
ಹೆಬ್ರಿ ತಾಲೂಕಿನ ಮುನಿಯಾಲು -ಕಬ್ಬಿನಾಲೆ ರಸ್ತೆಗೆ 1ಕೋಟಿ
ಅತ್ರಾಡಿ-ಮಂಗಳೂರು (ಕಾರ್ಕಳ ತಾಲೂಕು) ರಸ್ತೆಗೆ 1 ಕೋಟಿ
ಕುಂಟಾಡಿ-ಹಳೆಕಟ್ಟೆ-ಕೆಮ್ಮಣ್ಣು ಎಮ್ ಡಿಆರ್ ರಸ್ತೆಗೆ 1 ಕೋಟಿ
ನಾರಾವಿ-ಮಂಗಳೂರು (ಕಾರ್ಕಳ ತಾಲೂಕು) ರಸ್ತೆಗೆ 1 ಕೋಟಿ
ಕಡೂರು ತಾಲೂಕಿನ ಬೇಗೂರು ಗೇಟ್ ನಿಂದ -ಅರೇಹಳ್ಳಿ ಮೂಲಕ ಮಚ್ಚೆರಿ ರಸ್ತೆಗೆ 6 ಕೋಟಿ..
ಚಿಕ್ಕಮಗಳೂರು ತಾಲೂಕಿನ ಸೀತಾಳ್ಳಯ್ಯನ ಗಿರಿ- ಮುಳ್ಳಯ್ಯನಗಿರಿ ರಸ್ತೆಗೆ 6 ಕೋಟಿ.
ಮೂಡಿಗೆರೆ ತಾಲೂಕಿನ ರಾಜ್ಯ ಹೆದ್ದಾರಿ 106 ರ ಬಾಳೂರು ಹ್ಯಾಂಡ್ ಪೋಸ್ಟ್ ರಿಂದ ಕಳಸ ರಸ್ತೆಗೆ 6 ಕೋಟಿ.
ತರೀಕೆರೆ ತಾಲೂಕಿನಲ್ಲಿ ರಾಜ್ಯ ಹೆದ್ದಾರಿ 57 ಬಾಗಲಕೋಟೆ ಬಿಳಿಗಿರಂಗನ ಬೆಟ್ಟ ರಸ್ತೆಯ ಅಭಿವೃದಿಗೆ 6 ಕೋಟಿ.
ಮೇಲಿನ ಎಲ್ಲಾ ಕಾಮಗಾರಿ ಮಂಜೂರಾಗಿದ್ದು ಇದಕ್ಕೆ ಕಾರಣರಾದ ಕೇಂದ್ರ ಸಚಿವ ನಿತಿನ್ ಗಡ್ಕರಿ ಯವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಗಿದೆ ಎಂದು ಸಂಸದ ಕೋಟ ರವರ ಕಚೇರಿಯ ಪ್ರಕಟಣೆ ತಿಳಿಸಿದೆ.



