suddi-1 (6)

 

 

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಐದು ಗ್ಯಾರಂಟಿ ನೀಡಿದ್ದರಿಂದ ರಾಜ್ಯದಲ್ಲಿ ಬಡವರು ಒಂದಿಷ್ಟು ನೆಮ್ಮದಿಯಿಂದ  ಬದುಕುತ್ತಿದ್ದಾರೆ. ಅವರ ‘ಅಚ್ಛ ದಿನ್‍ಗಾಗಿ ಕಾದಿದ್ದರೆ ಬರಗಾಲ್ ದಿನ್’ ಆಗಿರೋದು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದರು.

ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಬುಧವಾರ ನಗರದಲ್ಲಿ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೇಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಶಾಸಕರು ಮಾತನಾಡಿದರು.

2014ರಲ್ಲಿ ಬಿಜೆಪಿಯವರು ಸ್ವೀಸ್ ಬ್ಯಾಂಕ್‍ನಲ್ಲಿ ಇರುವ ಕಪ್ಪು ಹಣವನ್ನು ತರುತ್ತೇವೆ, ಎಲ್ಲರ ಅಕೌಂಟಿಗೆ ತಲಾ 15 ಲಕ್ಷ ರೂಪಾಯಿ ಹಾಕುವುದಾಗಿ ಹೇಳಿದರು. ಆದರೆ ಆ ಯಾವುದೇ ಕೆಲಸಗಳು ಅವರಿಂದ ಆಗಿಲ್ಲ ಎಂದರು.

ಬಡವರು ನೆಮ್ಮದಿಯಿಂದ ಬದುಕಿದ್ದರು, ಬೇಡ ಬೇಡ ಅಂದರೂ ಕೂಡ ಸಿಲಿಂಡರ್ ಉಚಿತವಾಗಿ ಕೊಟ್ಟರು ಆದರೆ, ಗ್ಯಾಸ್ ಬೆಲೆಯನ್ನು ಏರಿಸಿದರು. 2014ರಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದಾಗ ಸಿಲಿಂಡರ್ ಗ್ಯಾಸ್‍ನ ಬೆಲೆ ಕೇವಲ 410 ರೂಪಾಯಿ ಇತ್ತು. ಆದರೆ, ಇಂದು 944 ರೂಪಾಯಿ ಆಗಿದೆ ಎಂದು ಹೇಳಿದರು.

ಪಂಚ ರಾಜ್ಯಗಳ ಚುನಾವಣೆ ಇರುವುದರಿಂದ ಯಾವುದೇ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿರಲಿಲ್ಲ, ಚುನಾವಣೆ ಮುಗಿದ 15 ದಿನದೊಳಗೆ 4 ಬಾರಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ, ಮನಮೋಹನ್ ಸಿಂಗ್ ಅವರಿದ್ದಾಗ 71 ರೂ. ಇದ್ದ ಪೆಟ್ರೋಲ್ ಈಗ 112 ರೂಪಾಯಿ ಆಗಿದೆ. ಡಿಸೈಲ್ 56 ರಿಂದ 105 ಆಗಿದೆ, ಕಮರ್ಷಿಯಲ್ ಗ್ಯಾಸ್ 815 ಇತ್ತು, ಈಗ 3000 ಕೊಟ್ಟರೂ ಸಿಗುತ್ತಿಲ್ಲ. ಇಂದು ಚಿನ್ನವನ್ನು ಖರೀದಿ ಮಾಡುವ ಪರಿಸ್ಥಿತಿಯಲ್ಲಿ ಇಲ್ಲ ಒಂದು ಗ್ರಾಂ ಚಿನ್ನದ ಬೆಲೆ 2800 ರೂಪಾಯಿ  ಇತ್ತು, ಆದರೆ ಇಂದು 15,000 ರೂಪಾಯಿ ಆಗಿದೆ. ಒಂದು ಕೆಜಿ ಬೆಳ್ಳಿ 43,000 ಇತ್ತು ಆದರೆ ಇಂದು 2,52,000 ರೂ. ಆಗಿದೆ ಎಂದರು.

ಇದು ಅಚ್ಛ ದಿನ್ ಅಲ್ಲ, ಕೇವಲ ನಾಲ್ಕು ಜನರಿಗೆ ಮಾತ್ರ ಅಚ್ಛ ದಿನ್ ಆಗಿದೆ. ದೇಶದ ಜನರಿಗೆ ಬೆಲೆ ಏರಿಕೆಯ ಬಿಸಿಯನ್ನು ಕೇಂದ್ರ ಸರ್ಕಾರ ಮುಟ್ಟಿಸಿದೆ. 2024 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ 400 ಸ್ಥಾನ ಪಡೆಯುತ್ತೇವೆ ಎಂದು ಹೇಳಿದ್ದರು ಅದು ಸಾಧ್ಯವಾಗಲಿಲ್ಲ, ಕಾರಣ ಇವರುಗಳು ಮಾತಿನಲ್ಲಿಯೇ ಮನೆ ಕಟ್ಟುತ್ತಾರೆ ಎಂಬುದು ಜನರಿಗೆ ಅರ್ಥವಾಗಿದೆ. ಬೆಲೆ ಏರಿಕೆಯನ್ನು ಕಡಿಮೆ ಮಾಡಬೇಕು ಎಂದು ಹೇಳಿದರು.

2014 ರಿಂದ 18 ಪರ್ಸೆಂಟ್ ಜಿಎಸ್‍ಟಿ ಹಾಕಿದರು, 11 ವರ್ಷ ಜಿಎಸ್‍ಟಿ ಅನ್ನು ಸಂಗ್ರಹ ಮಾಡಿದರು.  ಜಿಎಸ್‍ಟಿ ಯನ್ನು ಅತಿ ಹೆಚ್ಚು ಕಟ್ಟುವ ರಾಜ್ಯಗಳ ಪೈಕಿ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಪಂಚ ರಾಜ್ಯಗಳ ಚುನಾವಣೆ ಇರುವುದರಿಂದ ಜಿಎಸ್‍ಟಿಯನ್ನು ಕಡಿಮೆ ಮಾಡಿದರು ಎಂದರು.

ನಮ್ಮ ಸರ್ಕಾರ ಪಂಚ ಗ್ಯಾರಂಟಿ ಕೊಟ್ಟಿದ್ದರಿಂದ ಕುಟುಂಬಗಳ ತಲಾ ಆದಾಯ 2,18,000 ರು. ಆಗಿದೆ. ಇದರ ಉದ್ದೇಶ ಸಮ ಸಮಾಜ ನಿರ್ಮಾಣ ಮಾಡುವುದು 12ನೇ ಶತಮಾನದಲ್ಲಿ ಶ್ರೀ ಬಸವಣ್ಣನವರು, 19ನೇ ಶತಮಾನದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ವಿಚಾರ ಧಾರೆಗಳನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿರುವುದನ್ನು ತಿಳಿಸಬೇಕು. ಎಸ್‍ಐಆರ್ ಭೂತ  ಕರ್ನಾಟಕಕ್ಕೆ ಬರಬಾರದು ಎಂದು ಹೇಳಿದರು.

ಪ್ರತಿಭಟನೆಯ ಹಿನ್ನಲೆಯಲ್ಲಿ ನಗರದ ತಾಲೂಕು ಕಚೇರಿಯಿಂದ ಆಜಾದ್ ಪಾರ್ಕ್ ವೃತ್ತದ ವರೆಗೆ ಎತ್ತಿನ ಗಾಡಿ ಹಾಗೂ ಕಾರಿಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಂಜೇಗೌಡ, ಕೆಫೆಕ್ಸ್ ಅಧ್ಯಕ್ಷ ಬಿ.ಹೆಚ್. ಹರೀಶ್, ಮುಖಂಡರಾದ ಮಹಮದ್ ನಯಾಜ್, ಉಪ್ಪಳ್ಳಿ ಭರತ್, ಶಾದಬ್, ಲಕ್ಷ್ಮಣ್ ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ