ಮೂಡಿಗೆರೆ ಸರ್ವೇ ಇಲಾಖೆ ಎ.ಡಿ.ಎಲ್.ಆರ್. ಕಚೇರಿಯಲ್ಲಿ ಲಂಚ ಪಡೆಯುವಾಗ ಸರ್ವೇ ಇಲಾಖೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ಸರ್ವೇ ಸ್ಕೆಚ್ ಗೆ 20 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಸರ್ವೇ ಇಲಾಖೆಯ ಎ ಡಿ ಎಲ್ ಆರ್ ಕಛೇರಿ ಸಿಬ್ಬಂದಿ ಸುಮಾ ಎಂಬುವವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
15 ಸಾವಿರ ಲಂಚ ಪಡೆಯುವ ವೇಳೆ ಲೋಕಾ ಬಲೆಗೆ ಬಿದ್ದಿದ್ದಾರೆ. ಸುಮಾ, ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ಸರ್ವೇಯರ್, ಮೂಡಿಗೆರೆ ಸರ್ವೇ ಇಲಾಖೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.
ಎ.ಡಿ.ಎಲ್.ಆರ್.ಕಚೇರಿಯಲ್ಲೇ ಹಣ ಪಡೆಯುವ ವೇಳೆ ಸಿಕ್ಕಿಬಿದ್ದ ಸುಮಾ, ಲೋಕಾಯುಕ್ತ ಡಿವೈಎಸ್.ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ. ಲಂಚಕ್ಕೆ ಬೇಡಿಕೆ ಇಟ್ಟು ಸುಮಾ ಬಳಿ ಹಣ ನೀಡುವಂತೆ ಎ ಡಿ ಎಲ್ ಆರ್ ಮಂಜೇಶ್ ಹೇಳಿದ್ದರು ಎನ್ನಲಾಗಿದೆ
ಮೂಡಿಗೆರೆ ತಾಲ್ಲೂಕು ದೇವವೃಂದ ಗ್ರಾಮದ ಮಂಜುನಾಥ್ ಎಂಬುವವರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ಮನನೊಂದು ಮಂಜುನಾಥ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಮಂಜುನಾಥ್ ಅವರು ಜಮೀನು ಅಲಿನೇಸನ್ ಆಗಿತ್ತು, ಈ ಸ್ವತ್ತಿಗಾಗಿ ಸರ್ವೇ ಸ್ಕೆಚ್ ಬೇಕಾಗಿತ್ತು. ಸರ್ವೇ ಸ್ಕೆಚ್ ನೀಡಲು 20 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಲ್ಲಿ ಮಂಜುನಾಥ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
15 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತರು ನೇರವಾಗಿ ದಾಳಿ ನಡೆಸಿ ಕಛೇರಿಯಲ್ಲಿ ಲಂಚ ಪಡೆಯುತ್ತಿದ್ದ ಸುಮಾ ಅವರನ್ನು ಬಂಧಿಸಿದ್ದಾರೆ.
ಮೂಡಿಗೆರೆ ಎ ಡಿ ಎಲ್ ಅರ್ ಮತ್ತು ಸರ್ವೇ ಇಲಾಖೆಯ ಕೆಲ ಅಧಿಕಾರಿಗಳು ಮತ್ತು ನೌಕರರು ರೈತರನ್ನು ಲಂಚಕ್ಕಾಗಿ ಸತಾಯಿಸುತ್ತಿದ್ದ ಆರೋಪಗಳು ಕೇಳಿಬಂದಿದ್ದವು.



