leed suddi-1(A)

 

 

ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವ ಜತೆಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನು ಪತ್ರಿಕಾರಂಗ ಮಾಡುತ್ತಿದೆ : ಎಚ್.ಡಿ.ತಮ್ಮಯ್ಯ

 

ಚಿಕ್ಕಮಗಳೂರು: ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮ ಸಮಾಜದ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಿಸಿದರು.

ಶನಿವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, 2025-28ರ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕೆಡಬ್ಯುಜೆ ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವ ಜತೆಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನು ಪತ್ರಿಕಾರಂಗ ಮಾಡುತ್ತಿದೆ ಎಂದು ಹೇಳಿದರು.

ಪತ್ರಿಕಾ ರಂಗ ಜನಪರವಾಗಿ ನಿಂತು ಕೆಲಸ ಮಾಡುತ್ತಿದೆ. ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸುವ ಪ್ರಬಲ ಮಾಧ್ಯಮವಾಗಿದೆ ಎಂದ ಅವರು ಪ್ರಸ್ತತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಅಬ್ಬರದಲ್ಲಿ ಪತ್ರಿಕಾರಂಗ ಅನೇಕ ಸವಾಲುಗಳನ್ನು ಎದುರಿಸುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಪತ್ರಿಕಾರಂಗದ ಸತ್ಯದ ಕೈಗನ್ನಡಿಯಾಗಿದೆ. ಆದರೆ, ಇಂದು ಮಾದ್ಯಮಗಳು ಉದ್ಯಮದ ರೂಪ ಪಡೆದಿದ್ದು, ಲಾಭನಷ್ಟವನ್ನು ಎದುರಿಸುತ್ತಿದೆ ಜತೆಗೆ ತಾಂತ್ರಿಕತೆ ಬೆಳೆದಂತೆ ಮಾದ್ಯಮಗಳಿಗೆ ಅನೇಕ ಸವಾಲುಗಳು ಎದುರಾಗುತ್ತಿವೆ ಎಂದರು.

ಸಮಾಜ ಗಟ್ಟಿಕೊಳ್ಳಬೇಕಾದರೇ ಮಾದ್ಯಮಗಳ ಪಾತ್ರ ದೊಡ್ಡದಿದೆ. ಸವಾಲುಗಳ ನಡುವೆ ಸಮಾಜವನ್ನು ಶಿಕ್ಷಣವಂತರನ್ನಾಗಿ ಮಾಡುವುದು ಕೂಡ ಮಾದ್ಯಮಗಳ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.

ನಿಕಟಪೂರ್ವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ವಿ.ಪ್ರಭಾಕರ್ ಮಾತನಾಡಿ, ಹಿಂದೆ ಮಾದ್ಯಮದಲ್ಲಿ ಕೆಲಸ ಮಾಡುವ ಯುವ ಸಮುದಾಯದಲ್ಲಿ ಕಲಿಕೆಯ ಆಸಕ್ತಿ ಮತ್ತು ಗುರಿ ಇತ್ತು. ಆದರೆ, ಇಂದು ಆಸಕ್ತಿಯೂ ಇಲ್ಲ, ಗುರಿಯೂ ಇಲ್ಲವಾಗಿದೆ. ಪತ್ರಕರ್ತರಲ್ಲಿ ತಾಳ್ಮೆ ಮತ್ತು ಸಮಾಧಾನವಿಲ್ಲದಿರುವುದರಿಂದ ಸತ್ಯದ ಸುದ್ದಿಗಳ ಜತೆ ಜತೆಗೆ ಸುಳ್ಳು ಸುದ್ದಿಗಳು ರಾರಾಜಿಸುತ್ತಿವೆ ಎಂದು ವಿಷಾಧಿಸಿದರು.

ಪ್ರಸ್ತುತ ದಿನಗಳಲ್ಲಿ ಪತ್ರಿಕೆಗಳಲ್ಲಿ ಮಾನವೀಯ ವರದಿಗಳು, ತನಿಖಾ ವರದಿಗಳು ಬಿತ್ತರವಾಗುತ್ತಿಲ್ಲ. ಯಾವ ಸುದ್ದಿಗೆ ಮಾನ್ಯತೆ ನೀಡಬೇಕಿತ್ತು. ಅದನ್ನು ಬಿಟ್ಟು ಕೇವಲ ರಾಜಕೀಯ, ಸಿನಿಮಾ ಸುದ್ದಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಪತ್ರಿಕೋದ್ಯಮದ ವಿಶ್ವಾಸಾರ್ಹತೆ ಉಳಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಹೊಸ ಪೀಳಿಗೆಯ ಪತ್ರಕರ್ತರಿಗೆ ತರಬೇತಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಘ ಯೋಚಿಸಬೇಕಿದೆ ಎಂದರು.

ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಪತ್ರಿಕೋದ್ಯಮ ಸಮಾಜದದ ಏಳಿಗೆಗೆ ನಿರಂತರವಾಗಿ ಶ್ರಮಿಸುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿಯೂ ಪತ್ರಿಕೆಗಳ ಪಾತ್ರ ಮಹತ್ವದಾಗಿದೆ. ಖಡ್ಗಕ್ಕಿಂತ ಲೇಖನಿ ಹರಿತವಾಗಿದ್ದು, ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ತರೀಕೆರೆ ಕ್ಷೇತ್ರದ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಪತ್ರಿಕೋದ್ಯಮ ಪ್ರಜಾಪ್ರಭುತ್ವದ ಬೆನ್ನೆಲುಬು. ಸಮಾಜದಲ್ಲಿ ಧ್ವನಿ ಇಲ್ಲದವರ ಧ್ವನಿಯಾಗಿ ಕೆಲಸ ಮಾಡುತ್ತಿದೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸಂಘದ ವತಿಯಿಂದ ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದವರ ಹೆಸರಿನಲ್ಲಿ ದತ್ತಿ ಪ್ರಶಸ್ತಿಯನ್ನು ಇತ್ತೀಚಿನ ವರ್ಷಗಳಿಂದ ನಿರಂತರವಾಗಿ ನೀಡುತ್ತಿದ್ದು, ಇಂದು ಐದನೇ ದತ್ತಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ ಎಂದರು.

ಸಣ್ಣ ಪತ್ರಿಕೆಗಳು, ದೊಡ್ಡ ಪತ್ರಿಕೆಗಳು ಸಣ್ಣಪುಟ್ಟ ವ್ಯಾಜ್ಯಗಳನ್ನು ಬಿಟ್ಟು ಒಗ್ಗಟ್ಟಾಗಬೇಕು. ಸಮಾಜದ ಚೌಕಟ್ಟಿನಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಕನ್ನಡಪ್ರಭ, ಸುವರ್ಣ ವಾಹಿನಿಯ ಪ್ರಧಾನ ಸಂಪಾದಕ ರವಿ ಹೆಗಡೆ ಅಭಿಪ್ರಾಯಪಟ್ಟರು.

ಪ್ರಧಾನ ಭಾಷಣದಲ್ಲಿ ಮಾತನಾಡಿ, ಪ್ರಸ್ತುತ ಪತ್ರಿಕೋದ್ಯಮ ಹೊಸ ಸವಾಲು ಎದುರಿಸುತ್ತಿದೆ. ಹೊಸ ಸವಾಲುಗಳಿಗೆ ಹೊಸ ರೀತಿಯ ವೇದಿಕೆ ಸೃಷ್ಟಿಸುವ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ಚಿಂತಿಸುವ ಅಗತ್ಯವಿದೆ ಎಂದರು.

ಇಂದು ಬಲಪಥ ಮತ್ತು ಎಡಪಂಥಗಳ ಚಿಂತನೆ ನಡುವೆ ಪತ್ರಿಕೋದ್ಯಮ ಕಠಿಣ ರೀತಿಯ ಸಂಘರ್ಷವನ್ನು ಎದುರಿಸುತ್ತಿದೆ. ಪತ್ರಿಕೋದ್ಯಮ ತಾಳಮೇಳ ತಪ್ಪುತ್ತಿದೆ ಎಂಬ ಸತ್ಯವನ್ನು ನಾವು ಒಪ್ಪಿಕೊಳ್ಳಬೇಕಿದೆ. ಪ್ರಜಾಪ್ರಭುತ್ವದಲ್ಲಿ ಪತ್ರಿಕೋದ್ಯಮ ಸಮತೂಕದಿಂದ ಕಾಯ್ದುಕೊಳ್ಳಬೇಕು. ಈ ಮಾರ್ಗದಲ್ಲಿ ಸಾಗಬೇಕಿದೆ. ಸತ್ಯ ಮಿತ್ಯಗಳ ನಡುವೆ ಸಮಾಜದ ಮುಂದೇ ವಾಸ್ತಾವಂಶವನ್ನು ತೆರೆದಿಡುವ ಕೆಲಸವನ್ನು ಪತ್ರಿಕೋದ್ಯಮ ಮಾಡಬೇಕಿದೆ ಎಂದು ಹೇಳಿದರು.

ಓದುಗರು ಪತ್ರಿಕೋದ್ಯಮದ ಮೇಲೆ ಅಪಾರವಾದ ವಿಶ್ವಾಸಾರ್ಹತೆ ಇಟ್ಟುಕೊಂಡಿದ್ದಾನೆ. ವಿಶ್ವಾಸಾರ್ಹತೆ ಉಳಿಸಿಕೊಳ್ಳುವ ದೊಡ್ಡ ಜವಬ್ದಾರಿಯೂ ಪತ್ರಿಕೋದ್ಯಮದ ಮೇಲಿದೆ. ಈ ನಿಟ್ಟಿನಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲವೆಂದು ಅಭಿಪ್ರಾಯಿಸಿದರು.

ಆಧುನಿಕ ತಂತ್ರಜ್ಞಾನದಿಂದ ಮುದ್ರಣ ಮಾದ್ಯಮ, ದೃಶ್ಯ ಮಾದ್ಯಮ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಓದುಗರು ಗಟ್ಟಿಯಾಗಿದ್ದರೇ ಸಂಪಾದಕ ಗಟ್ಟಿಯಾಗಿರುತ್ತಾನೆ. ಈ ಹಿನ್ನಲೆಯಲ್ಲಿ ನಮ್ಮಲ್ಲಿರುವ ಸೆಣ್ಣಪುಟ್ಟ ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ನಾವೆಲ್ಲರೂ ಒಗ್ಗಟ್ಟಾಗುವ ಅಗತ್ಯವಿದೆ. ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಹೊಸ ಸವಾಲುಗಳನ್ನು ಎದುರಿಸಲು ಸನ್ನಿಧರಾಗಬೇಕಿದೆ ಎಂದು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಆನಂದ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.

ಸಮಾರಂಭದಲ್ಲಿ ರಾಷ್ಟ್ರೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮದನ್‍ಗೌಡ, ಕನ್ನಡಪ್ರಭ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ, ಸಂಪಾದಕ ಜ್ಯೋಗಿ, ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಇತರರು ಇದ್ದರು.

ಹಿರಿಯ ಪತ್ರಕರ್ತರಿಗೆ ಸನ್ಮಾನ:

ಹಿರಿಯ ಪತ್ರಕರ್ತ ಸ.ಗಿರಿಜಾ ಶಂಕರ್, ಬಿ.ಟಿ.ತಿಪ್ಪೇರುದ್ರಪ್ಪ, ಅಜ್ಜಂಪುರ ಅಪ್ಪಾಜಿ, ತರೀಕೆರೆ ಅನಂತ್ ನಾಡಿಗ್, ಕೊಪ್ಪ ಬಿ.ವಿ.ವಿಶ್ವನಾಥ್ ಶೆಟ್ಟಿ, ಕಡೂರು ಎನ್.ಗಿರೀಶ್ ಬೀರೂರು, ಪ್ರಸನ್ನ ಗೌಡಹಳ್ಳಿ ಮೂಡಿಗೆರೆ, ಯೂಸೂಪ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ವಿಜಯ ಕರ್ನಾಟಕ ಕೆ.ಎಚ್.ರುದ್ರಯ್ಯ, ಸುವರ್ಣ ನ್ಯೂಸ್ ಕೆ.ಕಿರಣ್, ವಿಜಯವಾಣಿ ತರೀಕೆರೆ ವರದಿಗಾರ ಬಿ.ಉಮೇಶ್ ನಾಯಕ್, ಹಿರಿಯ ಪೋಟೋ ಜರ್ನಲಿಸ್ಟ್ ಅಕ್ರಮ್ ಅಬ್ದುಲ್ ಹಕ್, ಮಂಗಳೂರು ಇಬ್ರಾಹಿಂ ಅಡ್ಕಸ್ಥಳ, ಶಿವಕುಮಾರ್ ಪತ್ತಾರ ಟಿ.ವಿ.9 ಕೊಪ್ಪಳ, ಬಿಳಿಗಿರಿ ಶ್ರೀನಿವಾಸ್ ಚಾಮರಾಜನಗರ, ಎಚ್.ಪಿ.ರವಿಕುಮಾರ್ ಜನತಾಮಾಧ್ಯಮ ಹಾಸನ ಇವರಿಗೆ ಕೆಡಬ್ಯೂಜೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ದತ್ತಿ ಪ್ರಶಸ್ತಿ ಪ್ರಧಾನ:

ಡಿ.ವಿ.ಜಿ. ಪ್ರಶಸ್ತಿ- ಬಿ.ವಿ.ಗೋಪಿನಾಥ್, ಸಂಯುಕ್ತ ಕರ್ನಾಟಕ ಕೋಲಾರ

ಗೊಮ್ಮಟ ಮಾದ್ಯಮ ಪ್ರಶಸ್ತಿ- ಗಿರೀಶ್ ರಾವ್ ಹತ್ವಾರ (ಜೋಗಿ) ಸಂಪಾದಕರು ಕನ್ನಡಪ್ರಭ.

ಎಚ್.ಎಸ್.ದೊರೆಸ್ವಾಮಿ ಪ್ರಶಸ್ತಿ- ರವಿಪ್ರಕಾಶ್. ಪ್ರಜಾವಾಣಿ.

ಎಸ್.ವಿ.ಜಯಶೀಲರಾವ್ ಪ್ರಶಸ್ತಿ- ಮೀನಾ ಮೈಸೂರು.

ಸಿ.ಆರ್.ಕೃಷ್ಣರಾವ್ ಪ್ರಶಸ್ತಿ- ಅನಂತ ಚಿನಿವಾರ್ ಹಿರಿಯ ಪತ್ರಕರ್ತರು.

ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ- ಜಾನ್ ಮಥಾಯಿಸ್, ಹಿರಿಯ ಪತ್ರಕರ್ತರು.

ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ- ಮಾವಳ್ಳಿ ಶಂಕರ್, ಅಂಬೇಡ್ಕರ್ ವಾದ ಪತ್ರಿಕೆ.

ಪಾಟೀಲ್ ಪುಟ್ಟಪ್ಪ ಪ್ರಶಸ್ತಿ- ಅಡಿವೇಂದ್ರ ಇನಾಂದಾರ, ಹಿರಿಯ ಪತ್ರಕರ್ತ ಬಾದಾಮಿ.

ಶ್ರೀಮತಿ ಯಶೋಧಮ್ಮ ಜಿ.ನಾರಾಯಣ ಪ್ರಶಸ್ತಿ- ಮಂಜುಳ ಕಿರುಗಾವಲು ಜನೋದಯ ಮಂಡ್ಯ.

ಬದರಿನಾಥ ಹೊಂಬಾಳೆ ಪ್ರಶಸ್ತಿ-ಡಿ.ಜಿ.ಮೋಮಿನ್, ಗಜೇಂದ್ರಗಡ ಗದಗ.

ಕಿಡಿಶೇಷಪ್ಪ ಪ್ರಶಸ್ತಿ- ದಿನೇಶ್ ಗೌಡಗೆರೆ, ಸಂಪಾದಕರು ಇಬ್ಬನಿ ಸೂರ್ಯ ಚಿತ್ರದುರ್ಗ.

ರವಿ ಬೆಳೆಗೆರೆ ಪ್ರಶಸ್ತಿ- ಎಚ್.ಸಿ.ದಿನೇಶ್‍ಕುಮಾರ್, ಹಿರಿಯ ಪತ್ರಕರ್ತ.

ಪಿ.ಆರ್.ರಾಮಯ್ಯ ಸ್ಮಾರಕ ಪ್ರಶಸ್ತಿ- ಭಾವನಿ ಲಕ್ಷ್ಮೀನಾರಾಯಣ, ಹಿರಿಯ ಪತ್ರಕರ್ತ ಚಿಕ್ಕಬಳ್ಳಾಪುರ.

ಹೆಚ್.ಕೆ.ವೀರಣ್ಣಗೌಡ ಸ್ಮಾರಕ ಪ್ರಶಸ್ತಿ-ಬಿ.ಎಸ್,ಜಯರಾಂ, ಪಾಂಡವಪುರ,

ರಾಜಶೇಖರ ಕೋಟೆ ಪ್ರಶಸ್ತಿ- ಟಿ.ವಿ.ರಾಜೇಶ್ವರ ಆಂದೋಲನ ಮೈಸೂರು.

ಪಿ.ರಾಮಯ್ಯ ಪ್ರಶಸ್ತಿ-ಎಚ್,ಬಿ,ದಿನೇಶ್, ಹಿರಿಸಾವೆ.

ಮಾ.ರಾಮಮೂರ್ತಿ ಪ್ರಶಸ್ತಿ- ಪ್ರದೀಪ್ ಅಣ್ಣಾಜಿ ಕುಲಕರ್ಣಿ ಹಿರಿಯ ಪತ್ರಕರ್ತರು ವಿಜಯಪುರ.

ಮಹದೇವ ಪ್ರಕಾಶ್ ಪ್ರಶಸ್ತಿ-ಸುರೇಶ್ ಕೆ. ವಿಜಯಕರ್ನಾಟಕ ಬೆಳಗಾವಿ.

ಶಿವಮೊಗ್ಗ ಮಿಂಚು ಶ್ರೀನಿವಾಸ್ ಪ್ರಶಸ್ತಿ-ಶ್ರೀಕಾಂತ್ ಭಟ್ ವಿಜಯವಾಣಿ ಬೆಂಗಳೂರು.

ಎಚ್.ಎಸ್.ರಂಗಸ್ವಾಮಿ ಪ್ರಶಸ್ತಿ- ಜಿ.ವಾದಿರಾಜ್ ಕಮರೂರ ಸ್ಥಾನಿಕ ಸಂಪಾದಕ ಹೊಸದಿಂಗತ ಶಿವಮೊಗ್ಗ.

ಎಂ.ನಾಗೇಂದ್ರ ರಾವ್ ಪ್ರಶಸ್ತಿ- ಕಣ್ಣಪ್ಪ ಉಷಾಮಹಿ, ಹಿರಿಯ ಪತ್ರಕರ್ತರು ಶಿವಮೊಗ್ಗ.

ಶ್ರೀಮತಿ ಗಿರಿಜಮ್ಮ ರುದ್ರಪ್ಪ ತಾಳೊಕೋಟಿ ಪ್ರಶಸ್ತಿ- ಬಿ.ಕೆ.ರಮ್ಯಶ್ರೀ ಚಂದನ, ಆಕಾಶವಾಣಿ.

ಅಪ್ಪಾಜಿಗೌಡ (ಸಿನಿ) ಪ್ರಶಸ್ತಿ-ಹರ್ಷವರ್ಧನ್ ಬ್ಯಾಡನೂರು ವಿಜಯವಾಣಿ.

ಮೂಡಣ ಹಾವೇರಿ ಪ್ರಶಸ್ತಿ- ಎಸ್.ಆರ್.ನಂದಿಹಳ್ಳಿ ಡಿಡಿ1 ಹಾವೇರಿ.

ಇದೇ ಸಂದರ್ಭದಲ್ಲಿ ಪತ್ರಕರ್ತರ ಪ್ರತಿಭಾವಂತ ಮಕ್ಕಳನ್ನು ಗೌರವಿಸಲಾಯಿತು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ