September 12, 2026
;
alduru 3

 

 

ಆಲ್ದೂರು  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹೆಚ್ ಬಿ ವೆಂಕಟೇಶ್ ಗೌಡ ಗುರುವಾರ ಅವಿರೋಧ ಆಯ್ಕೆಯಾದರು.

ಚುನಾವಣಾ ಪ್ರಕ್ರಿಯೆಗಳನ್ನು ಮೂಡಿಗೆರೆ ಸಹಕಾರ ಅಭಿವೃದ್ಧಿ ಅಧಿಕಾರಿ ಎಂ ಜ್ಯೋತಿಲಕ್ಷ್ಮಿ ಪೂರ್ಣಗೊಳಿಸಿಕೊಟ್ಟರು.

ಬಳಿಕ ವೆಂಕಟೇಶ್ ರವರನ್ನು ಅಭಿನಂದಿಸಿದ ನಿರ್ದೇಶಕರಾದ ಹೆಚ್ಎಸ್ ಕವೀಶ್, ಇದೇ ಸಂಸ್ಥೆಯಲ್ಲಿ ಹಲವು ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಚುನಾವಣೆ ಮೂಲಕ ನಿರ್ದೇಶಕರಾಗಿ ಆಯ್ಕೆಯಾಗಿ ಪ್ರಸ್ತುತ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಶ್ಲಾಘನೀಯ ಎಂದರು. ಅಧ್ಯಕ್ಷರಾದ ವೆಂಕಟೇಶ್ ಗೌಡ, ಸಂಘವನ್ನು ಅಭಿವೃದ್ಧಿಯತ್ತ ಮುನ್ನಡೆಸಲು ಪೂರ್ಣ ಪ್ರಮಾಣದಲ್ಲಿ ಶ್ರಮಿಸುವುದಾಗಿ ತಿಳಿಸಿ ಸರ್ವ ನಿರ್ದೇಶಕರುಗಳ ಸಹಕಾರ ಬಹು ಮುಖ್ಯ ಎಂದು ಅಭಿಪ್ರಾಯ ಹಂಚಿಕೊಂಡರು.

ನಿರ್ದೇಶಕರಾದ ಬಿ ಎಂ ಸುದರ್ಶನ್,ರೈತ ಮುಖಂಡ ತುಳಸೇಗೌಡ, ಪ್ರಗತಿಪರ ಕೃಷಿಕ ರಾದ ಧರ್ಮಪ್ಪ ಮಾತನಾಡಿದರು.

ಉಪಾಧ್ಯಕ್ಷರಾದ ಡಿ ಎಂ ವಿನೋದ, ನಿರ್ದೇಶಕರುಗಳಾದ ಕೌಶಿಕ್,ಎಚ್ ಆರ್, ಸಂದೇಶ್ ,ಡಿ ಚಂಪಾ,

ಡಿಆರ್, ದಿಲೀಪ್ ಕುಮಾರ್, ಹೆಚ್ ಪಿ ನಾರಾಯಣಗೌಡ, ಬಿಎಂ ಸುದರ್ಶನ್, ಹೂವಪ್ಪ ಶೆಟ್ಟಿ,ದೇವರಾಜ್, ಚೆನ್ನಪ್ಪ, ಮೇಲ್ವಿಚಾರಕ ರಾದ  ಕೆ ಆರ್ ರಘು,ಸಿಬ್ಬಂದಿಗಳು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;