September 12, 2026
;
WhatsApp Image 2026-09-11 at 8.47.56 PM

 

 

ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಮತ್ತು ಹಿರಿಯ ಕಾಂಗ್ರೆಸ್ ಮುಖಂಡರ ನಡುವಿನ ಕಿತ್ತಾಟಕ್ಕೆ ಬ್ರೇಕ್ ಹಾಕಿ ರಾಜಿಸಂಧಾನ ನಡೆಸುವ ಸಲುವಾಗಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಶುಕ್ರವಾರ ಮೂಡಿಗೆರೆಗೆ ವೀಕ್ಷಕರನ್ನು ಕಳಿಸಿದ್ದರು. ಹಿರಿಯ ಕಾಂಗ್ರೆಸ್ ಮುಖಂಡರು ಮತ್ತು ಶಾಸಕರ ಬಣದ ಪ್ರತ್ಯೇಕ ಸಭೆ ನಡೆಸಿದ ವೀಕ್ಷಕರು ಉಭಯ ಬಣಗಳ ದೂರು ಆಲಿಸಿ ಕೆಪಿಸಿಸಿಗೆ ವರದಿ ನೀಡಲು ಬೆಂಗಳೂರಿನತ್ತ ತೆರಳಿದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಭದ್ರಾ ಕಾಡ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಜಾವಗಲ್, ಕಾಂಗ್ರೆಸ್ ನಿಯೋಜಿತ ಜಿಲ್ಲಾಧ್ಯಕ್ಷ ಮಂಜೇಗೌಡ ವೀಕ್ಷಕರಾಗಿ ಭೇಟಿ ನೀಡಿದ್ದರು. ಕಾಂಗ್ರೆಸ್ ಭವನದಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ಉಭಯ ಬಣಗಳ ಪ್ರತ್ಯೇಕ ಸಭೆ ನಡೆಸಿದ ವೀಕ್ಷಕರು, ಯಾವುದೆ ತೀರ್ಮಾನ ತೆಗೆದುಕೊಳ್ಳದೆ ಅಭಿಪ್ರಾಯ ಸಂಗ್ರಹಿಸಿ ವಾಪಸಾಗಿದ್ದಾರೆ.

ಹಿರಿಯ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಕೆಪಿಸಿಸಿ ವೀಕ್ಷಕರರಿಗೆ ಮನವಿಯೊಂದನ್ನು ನೀಡಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ ಅವರಿಗೆ ನೋಟಿಸ್ ನೀಡದೆ ತೆಗೆದುಹಾಕಲಾಗಿದೆ. ಅವರನ್ನು ಮರುನೇಮಿಸಬೇಕು. ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷರಾಗಿದ್ದ ಬಿ.ಎಸ್.ಜಯರಾಮ್ ಅವರನ್ನು ಕಾರಣವಿಲ್ಲದೆ ವಜಾಗೊಳಿಸಲಾಗಿದೆ. ಅವರನ್ನು ಕೂಡ ಮರುನೇಮಿಸಬೇಕು. ಶಾಸಕರಿಂದ ಸರ್ವಾಧಿಕಾರಿ ಧೋರಣೆಯ ಆಡಳಿತ ನಡೆಯುತ್ತಿದೆ. ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ. ಪಕ್ಷದ ಹಿರಿಯ ಮುಖಂಡರಿಗೆ ಮತ್ತು ಕ್ಷೇತ್ರದ ಜನರಿಗೆ ನಿರಂತರವಾಗಿ ಅವಮಾನ ಮಾಡುತ್ತಿದ್ದಾರೆ. 25 ಮಂದಿ ಹಿರಿಯ ಕಾಂಗ್ರೆಸ್ ಮುಖಂಡರ ಸಮನ್ವಯ ಸಮಿತಿ ರಚಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಶಾಸಕಿ ನಯನಾ ಮೋಟಮ್ಮ ವಿರುದ್ಧ ಹಿರಿಯ ಕಾಂಗ್ರೆಸ್ ಮುಖಂಡರು ಮೌಖಿಕವಾಗಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಿರಿಯ ಕಾಂಗ್ರೆಸ್ ಮುಖಂಡರ ಬಣದಲ್ಲಿ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಮುಖಂಡರಾದ ಬಿ.ಎಸ್.ಜಯರಾಮ್, ಸಿ.ಕೆ.ಇಬ್ರಾಹಿಂ ಹಾಜಿ, ಯು.ಹೆಚ್.ಹೇಮಶೇಖರ್, ಅಕ್ರಮ್ ಹಾಜಿ, ಕೆ.ಆರ್.ಮಹೇಶ್, ಕೆ.ಕೆ.ರಾಮಯ್ಯ, ಎ.ಸಿ.ಅಯೂಬ್ ಹಾಜಿ, ಮರಗುಂದ ಪ್ರಸನ್ನ, ಬಿ.ಎ.ಉಮರ್, ಪಿ.ಕೆ.ಹಮೀದ್, ಎಂ.ಎಸ್.ಅನಂತ್, ಡಿ.ಎಲ್.ಅಶೋಕ್ ಕುಮಾರ್, ಜಿ.ಎಚ್ ಹಾಲಪ್ಪಗೌಡ ಸಿ.ಎಚ್.ಅಹಮದ್ ಬಾವ, ಇಮ್ತಿಯಾಜ್, ಜೋಹರ್ ಬೀದರಹಳ್ಳಿ ಇತರರಿದ್ದರು.

ಮಧ್ಯಾಹ್ನ 3:30 ರಿಂದ ಶಾಸಕಿ ನಯನಾ ಮೋಟಮ್ಮ ಅವರ ಬಣದ ಸಭೆಯನ್ನು ವೀಕ್ಷಕರು ನಡೆಸಿದರು. ಶಾಸಕಿ ನಯನಾ ಮೋಟಮ್ಮ ಮಾತನಾಡಿ, ನಾನು ಶಾಸಕಿಯಾದ ಬಳಿಕ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಹೆಚ್ಚಿನ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಧುಮುಕಿದ್ದೇನೆ. ಕಳೆದ 20 ವರ್ಷದಿಂದ ಆಗದ ಕೆಲಸವನ್ನು 3 ವರ್ಷದಲ್ಲಿ ಮಾಡಿದ್ದೇನೆ. ಫಲಾನುಭವಿಗಳಿಗೆ ನಿವೇಶನ, ಹಕ್ಕುಪತ್ರ ಒದಗಿಸಲು ಕ್ರಮ ಕೈಗೊಂಡಿದ್ದೇನೆ. ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರಿಂದ ಕ್ಷೇತ್ರದ ಜನರಿಗೆ ನನ್ನ ಕರ್ತವ್ಯದ ಬಗ್ಗೆ ನೆಮ್ಮದಿಯಿದೆ. ಆದರೆ ನಮ್ಮ ಪಕ್ಷದಲ್ಲಿ ಕೆಲ ಹಿರಿಯ ಮುಖಂಡರು ವಿರೋಧ ಪಕ್ಷದವರ ರೀತಿಯಲ್ಲಿ ನನ್ನನ್ನು ವಿರೋಧಿಸುತ್ತಿದ್ದಾರೆ. ನಾನು ಯಾರನ್ನು ದೂರವಿಟಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಮಾತ್ರ ಆದ್ಯತೆ ನೀಡುತ್ತಿದ್ದೇನೆ. ಜನರ ಕೆಲಸವನ್ನು ನಿರ್ವಹಿಸುವಲ್ಲಿ ತಾರತಮ್ಯ ಮಾಡುತ್ತಿಲ್ಲ. ಇದನ್ನು ಕೆಲವರಿಗೆ ಸಹಿಸಲಾಗುತ್ತಿಲ್ಲ. ಹಾಗಾಗಿ ನನ್ನ ವಿರುದ್ಧ ತೊಡೆತಟ್ಟುತ್ತಿದ್ದಾರೆ ಎಂದು ವೀಕ್ಷಕರ ಗಮನಕ್ಕೆ ತಂದರು.

ಶಾಸಕರ ಬಣದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುನ್ನಳ್ಳಿ ರವಿ, ಮುದಬ್ಬೀರ್, ಶ್ರೇಣಿಕ್, ಹೋಬಳಿ ಕಾಂಗ್ರೆಸ್ ಅಧ್ಯಕ್ಷರಾದ ರಘು, ಸುಬ್ರಾಯ ಗೌಡ, ಅರುಣ, ಶ್ರೀನಾಥ್, ರಫೀಕ್, ಪೂರ್ಣೇಶ್, ಸಿದ್ಧಾಂತ್, ದಿಣ್ಣೆಕೆರೆ ಪೂರ್ಣೇಶ್, ವಿಜಯ್ ಕುಮಾರ್, ಸೋಮೇಗೌಡ, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸಿ.ಬಿ.ಶಂಕರ್, ಮುಖಂಡರಾದ ಕೆ.ವೆಂಕಟೇಶ್, ಹವ್ವಳ್ಳಿ ಕೃಷ್ಣೆಗೌಡ, ಹೊಸಕೆರೆ ರಮೇಶ್, ಸುಬ್ರಹ್ಮಣ್ಯ, ದೀಕ್ಷಿತ್ ಕಣಚೂರು, ಸುರೇಂದ್ರ, ಸುಧೀರ್ ಚಕ್ರಮಣಿ ಇತರರಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;