September 12, 2026
;
1003992331

 

 

ಜೇಸಿಐ ಮೂಡಿಗೆರೆ ವತಿಯಿಂದ ನಡೆಯುತ್ತಿರುವ ಪ್ರತಿಬಿಂಬ ಜೇಸಿ ಸಪ್ತಾಹದ ಐದನೇ ದಿನವಾದ ಶುಕ್ರವಾರ ಕೃಷಿ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನ ಬಳಕೆ ಕುರಿತು ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.

ಜೇಸಿಐ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಯಮಿ ಡಾ. ನಂಜೇಶ್ ಬೆಣ್ಣೂರು ಅವರು ಕೃಷಿ ಕ್ಷೇತ್ರದಲ್ಲಿ ಕೃತಕ ಬದ್ದಿಮತ್ತೆ ಬಳಸಿ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಬಹುದು, ಹವಾಮಾನ, ಪೋಷಕಾಂಶ ನಿರ್ವಹಣೆ, ನೀರಿನ ನಿರ್ವಹಣೆ ಸೇರಿದಂತೆ ಕಡಿಮೆ ವೆಚ್ಚದಲ್ಲಿ ಉತ್ತಮ ಫಲಿತಾಂಶ ಪಡೆಯಲು ಇರುವ ಮಾರ್ಗಗಳು, ಜೊತೆಗೆ ಕೃಷಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಎಐ ತಂತ್ರಜ್ಞಾನದ ಬಳಕೆ ಕುರಿತು ಸವಿವರವಾದ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮೂಡಿಗೆರೆ ರೈತ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪೂರ್ಣೇಶ್ ಜಿ.ಹೊಸಳ್ಳಿ, ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಉಮಾ ಮಹೇಶ್, ದೇಶಿ ತರಬೇತುದಾರ ಡಾ. ರಾಮಚಂದ್ರಪ್ಪ, ಕೃಷಿ ಇಲಾಖೆಯ ಸತೀಶ್, ನಾಗೇಶ್ ಸೇಲ್ಸ್ ಮಾಲೀಕ ನಾಗೇಶ್ ನಾಯಕ್, ದುರ್ಗಾ ಆಗ್ರೋ ಏಜೆನ್ಸಿಸ್ ಮಾಲೀಕ ನಯನ ಕಣಚೂರು, ನೆಸ್ಲೆ ಕಂಪನಿಯ ಶಿವಕುಮಾರ್, ಮೂಡಿಗೆರೆ ಜೇಸಿಐ ಪದಾಧಿಕಾರಿಗಳಾದ ಸುದೀಪ್ ತ್ರಿಪುರ, ಸಂದ್ಯಾ ಸುದೀಪ್, ನಿಶ್ಚಿತಾ ಯತೀಶ್, ಅಕ್ಷತ್ ಪಟ್ಟದೂರು ಮುಂತಾದವರು ಇದ್ದರು.

ಮೂಡಿಗೆರೆ ಜೇಸಿಐ ಅಧ್ಯಕ್ಷ ಸುನಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;