ಕರ್ನಾಟಕ ಬೆಳೆಗಾರರ ಒಕ್ಕೂಟದ (ಕೆಜಿಎಫ್) ನಿಯೋಗವು ದಿನಾಂಕ 07.03.2026ನೆಯ ಶನಿವಾರದಂದು ಕರ್ನಾಟಕ ಸರ್ಕಾರದ ಇಂದನ ಸಚಿವರು ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ ಜಾರ್ಜ್ ರವರನ್ನು ಭೇಟಿ ಮಾಡಿ ಸರ್ಕಾರಿ ಸಾಗುವಳಿ ಜಮೀನು ಗುತ್ತಿಗೆ ಆಧಾರದಲ್ಲಿ ನೀಡುವ ವಿಚಾರವಾಗಿ ಹಾಗೂ ಅರಣ್ಯ ಸಮಸ್ಯೆ ಬಗ್ಗೆ ಮತ್ತು ಕಾಡಾನೆ, ಕಾಡುಪ್ರಾಣಿಗಳ ಸಮಸ್ಯೆ ಬಗ್ಗೆ ಚರ್ಚಿಸಲಾಯಿತು.
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ನಯನ ಮೋಟಮ್ಮ ನವರ ನೇತೃತ್ವದಲ್ಲಿ ನಡೆದ ನಿವೇಶನ ಹಕ್ಕು ಪತ್ರ ವಿತರಣೆ ಸಮಾರಂಭಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಬೆಳೆಗಾರರ ಒಕ್ಕೂಟದ ನಿಯೋಗವು ಭೇಟಿ ಮಾಡಿತು.
ಈ ಸಂದರ್ಭದಲ್ಲಿ ಮಾಜಿ ಸಚಿವರುಗಳಾದ ಶ್ರೀಮತಿ ಮೋಟಮ್ಮನವರು ಹಾಗೂ ಬಿ ಬಿ ನಿಂಗಯ್ಯ, ಕಾಂಗ್ರೇಸ್ ಜಿಲ್ಲಾಧ್ಯಕ್ಷ ಡಾ. ಅಂಶುಮಂತ್ ರವರು ಇದ್ದರು.
ಈ ನಿಯೋಗದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿಎಸ್ ಜೈರಾಮ್ , ಕೋಮಾರ್ಕ್ ಮಾಜಿ ಅಧ್ಯಕ್ಷ ಡಿಎಸ್ ರಘು ಹಾಗೂ ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ ಆರ್ ಬಾಲಕೃಷ್ಣ, ಗೋಣಿಬೀಡು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ್ ಹಾಗೂ ಇತರರು ಇದ್ದು ಮನವಿ ಪತ್ರ ಸಲ್ಲಿಸಿದರು.
1.ರೈತರ ಭೂ ಮಂಜೂರಾತಿಗೆ ನಗರಸಭೆ ವ್ಯಾಪ್ತಿಯಿಂದ ಭೂ ಮಾರ್ಗವಾಗಿ ಅಂತರವನ್ನು ಪರಿಗಣಿಸಬೇಕು.
- ಈಗಾಗಲೇ ಫಾರಂ 30, 53 ಹಾಗೂ ಇತರೇ ದರಖಾಸ್ತಿನಲ್ಲಿ ಮಂಜೂರು ಮಾಡಲಾಗಿರುವ ಭೂಮಿಗಳಿಗೆ ನಗರಸಭೆ ವ್ಯಾಪ್ತಿಯ ಅಂತರದ ನೆಪ ಹೇಳದೇ ಯಥಾಸ್ಥಿತಿಯಲ್ಲಿ ಪರಿಗಣಿಸಬೇಕು.
- ಫಾರಂ 57 ಅನ್ನು ನಮೂನೆ 53 ಕ್ಕೆ ನಿಂನಿಮ ಮಾರ್ವಾಡು ಮಾಡಿಕೊಂಡು ಅರ್ಜಿ ಸಲ್ಲಿಸುವವರಿಗೆ ಹಕ್ಕುಪತ್ರ ನೀಡಬೇಕು.
- ಸೆಕ್ಷನ್ 4(1) ಅಧಿಸೂಚನೆಯನ್ನು ಅಂತಿಮಗೊಳಿಸುವ ಅಧಿಕಾರ ಹೊಂದಿರುವ ಎಫ್.ಎಸ್.ಒ. ರವರ ವಿವೇಚನೆಗೆ ಅರಣ್ಯ ಇಲಾಖೆ ಮಧ್ಯ ಪ್ರವೇಶಿಸಬಾರದು.
- ಡೀಮ್ಸ್ ಫಾರೆಸ್ಟ್ ಮತ್ತು ಕಂದಾಯ ಆರಣ್ಯ ಜಂಟಿ ಸರ್ವೆ ಸಂದರ್ಭದಲ್ಲಿ ಪ್ರತಿ ಗ್ರಾಮಗಳಿಗೆ ಕಡ್ಡಾಯವಾಗಿ ಪ್ರಚಾರಪಡಿಸಿ ಗ್ರಾಮಸ್ಥರ ಸಹಯೋಗದೊಂದಿಗೆ ಅಂತಿಮ ಪಟ್ಟಿ ತಯಾರಿಸಬೇಕು.
- ಆರಣ್ಯ ಇಲಾಖೆಯಲ್ಲಿ ಬಾಕಿ ಇರುವ ನಮೂನೆ 1 ರಿಂದ ಪ್ರಕರಣಗಳನ್ನು ಕೂಡಲೇ ಕ್ಲಿಯರೆನ್ಸ್ ನೀಡಬೇಕು.
- ಪ್ರಾಣಿಗಳ ಹಾವಳಿ ತಪ್ಪಿಸಿ ಪ್ರಾಣಿ ಮತ್ತು ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು.
- ಬಫರ್ ಜೋನುಗಳನ್ನು ಮೀಸಲು ಅರಣ್ಯದ ಮಿತಿಯ ಒಳಗೆ ರೂಪಿಸಿಕೊಳ್ಳಬೇಕು ಮತ್ತು ಬಫರ್ ಜೋನನ್ನು ‘0’ ಕಿ.ಮೀ.ಗೆ ನಿಗಧಿಗೊಳಿಸಬೇಕು ಮತ್ತು ನಗರಕ್ಕೆ ಹೊಂದಿಕೊಂಡಿರುವ ಸೆಕ್ಷನ್ 4(1) ಗಳನ್ನು ಕೈಬಿಡಬೇಕು.
9. ಹತ್ತಾರು ವರ್ಷಗಳಿಂದ ಕಾಮೇನಹಳ್ಳಿ ಮೀಸಲು ಆರಣ್ಯ, ಮನಗಲಿ ಮೀಸಲು ಅರಣ್ಯ ಇಂದಾವರ, ಉಕ್ಕುಂದ ಮತ್ತಾವರ ದಂತಹ ಆರಣ್ಯ ಪ್ರದೇಶಗಳಲ್ಲಿರುವ ರೈತರ ಮತ್ತು ಗ್ರಾಮಗಳ ಬಗ್ಗೆ ಸೂಕ್ತ ಪರಿಹಾರಕ್ಕೆ ನಿರ್ಧಾರ ಕೈಗೊಳ್ಳಬೇಕು



