aane

 

 

ದರ್ಪಣ ನ್ಯೂಸ್ ವಾಟ್ಸಾಪ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ

Follow this link to join my WhatsApp group: https://chat.whatsapp.com/EPix3ar9qizEtDUS0amt5B

ಮೂಡಿಗೆರೆ ತಾಲ್ಲೂಕು ಹುಲ್ಲೇಮನೆ ಕುಂದೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ರೈತ ಮಹಿಳೆ ಶೋಭಾ (45 ವರ್ಷ) ಬಲಿಯಾಗಿದ್ದಾರೆ.
ಇಂದು ಬೆಳಿಗ್ಗೆ ಮನೆಯ ಸಮೀಪ ಗದ್ದೆಯಲ್ಲಿ ಹುಲ್ಲುಕೊಯ್ಯಲು ತೆರಳಿದ್ದಾಗ ಕಾಡಾನೆ ದಾಳಿ ಮಾಡಿ ಸಾಯಿಸಿದೆ. ಶೋಭ ಹುಲ್ಲೇಮನೆ ಕುಂದೂರು ಗ್ರಾಮದ ಸತೀಶ್‍ಗೌಡರ ಪತ್ನಿ. (ರೈತಸಂಘದ ಚಂದ್ರೇಗೌಡರ ತಮ್ಮನ ಪತ್ನಿ). ಪತಿಯ ಕಣ್ಣೆದುರೆ ಆನೆ ಪತ್ನಿಯನ್ನು ಸಾಯಿಸಿದೆ ಎಂದು ತಿಳಿದುಬಂದಿದೆ. ಮೃತರಿಗೆ 20 ವರ್ಷದ ಪುತ್ರನಿದ್ದಾನೆ.

ರಸ್ತೆಗೆ ಸಮೀಪದಲ್ಲಿಯೇ ಬೆಳ್ಳಂಬೆಳಗ್ಗೆ ಕಾಡಾನೆ ದಾಳಿ ನಡೆಸಿದೆ. ಈ ಭಾಗದಲ್ಲಿ ಕಾಡಾನೆಗಳು ಸತತವಾಗಿ ಬೆಳೆಹಾನಿ, ಜೀವಹಾನಿಗೆ ಕಾರಣವಾಗುತ್ತಿವೆ. ಈಗ್ಗೆ ಕೆಲ ತಿಂಗಳ ಹಿಂದೆ ಕೆಂಜಿಗೆ ಗ್ರಾಮದಲ್ಲಿ ಆನಂದ ದೇವಾಡಿಗ ಎನ್ನುವವರನ್ನು ತುಳಿದು ಸಾಯಿಸಿದ್ದ ಆನೆಯೇ ಈ ದಾಳಿ ನಡೆಸಿದೆ ಎನ್ನಲಾಗುತ್ತಿದೆ.
ಕಳೆದ ಮೂರು ತಿಂಗಳಿಂದ ಮೂಡಿಗೆರೆ ತಾಲ್ಲೂಕಿನಲ್ಲಿ ಮೂರು ಜನರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಇತ್ತೀಚೆಗೆ ಊರುಬಗೆ ಗ್ರಾಮದಲ್ಲಿ ಅರ್ಜುನ್ ಎಂಬುವವರು ಆನೆ ದಾಳಿಗೆ ಬಲಿಯಾಗಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ