ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಗಳು ಸಾಗರದಷ್ಟು ಕೇವಲ ಹುಟ್ಟುಹಬ್ಬಕ್ಕೆ ಅವರನ್ನು ಸೀಮಿತಗೊಳಿಸದೆ ವಿಶ್ವಕ್ಕೆ ಅವರ ವ್ಯಕ್ತಿತ್ವವನ್ನು ಹರಡೋಣ ಎಂದು ವಿಧಾನ ಪರಿಷತ್ ಉಪಸಭಾಪತಿ ಎಂಕೆ ಪ್ರಾಣೇಶ್ ತಿಳಿಸಿದರು
ಅವರು ಮೂಡಿಗೆರೆ ಬಿಜೆಪಿ ಪಕ್ಷದ ಕಚೇರಿ ಪಂಚವಟಿಯಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ದಿನಾಚರಣೆ ಕುರಿತು ಮಾತನಾಡಿ. ಅಂಬೇಡ್ಕರ್ ಭಾರತದ ಗೌರವವಾಗಿದ್ದು. ಸಮಾನತೆ. ಅಸ್ಪುಶ್ರತೆ ನಿವಾರಣೆ. ದೀನ ದಲಿತರ ಉದ್ಧಾರ. ಭಾರತವನ್ನು ಭವಿಷ್ಯದಲ್ಲಿ ವಿಶ್ವಗುರು ವನ್ನಾಗಿಸುವುದು ಅಂಬೇಡ್ಕರ್ರವರ ಧ್ಯೇಯವಾಗಿತ್ತು ಈ ಕಾರಣದಿಂದ ವಿಶ್ವ ಉತ್ಕೃಷ್ಟ ಗ್ರಂಥ ಸಂವಿಧಾನವನ್ನು ಭಾರತೀಯರಿಗೆ ನೀಡಿದರು. ಅವರು ಯಾವುದೆ ಜಾತಿಗೆ ಸಿಮಿತವಾಗದೆ ವಿಶ್ವ ಮಾನವ ಅಗಿದ್ದರು. ನಡೆ. ನುಡಿ. ಶಿಸ್ತು. ಸುಚಿತ್ವ ಎಲ್ಲವು ಅಂಬೆಂಡ್ಕರ್ ಪಾಲಿಸಿದ ಜೀವನ ಸತ್ಯ. ಇದನ್ನೆ ಮೋದಿಜಿ ಪಾಲಿಸಿಕೊಂಡು ಬರುತ್ತಿರುವುದು. ಅವರ ವಿಚಾರದಾರೆಯನ್ನು ಯುವ ಪೀಳಿಗೆಗೆ ಹಸ್ತಾಂತರಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದ್ದು. ಅಂಬೇಡ್ಕರ್ರವರ ಹುಟ್ಟುಸ್ಥಳ ಸಮಾದಿ ಸ್ಥಳ ಬೆಳೆದದ್ದು. ಓದಿದ ಗ್ರಂಥಾಲಯ. ಸೇರಿದಂತೆ ಎಲ್ಲವನ್ನು ಪಂಚವಟಿಯಾಗಿ ಅಭಿವೃದ್ಧಿಪಡಿಸಿದ್ದು. ಬಿಜೆಪಿ ಸರ್ಕಾರ ಅವರಿಗೆ ಕೊಡುತ್ತಿರುವ ಗೌರವ ಎಂದ ಇವರು. ಅವರು ಹಾಕಿಕೊಟ್ಟ ವಿಚಾರದಾರೆಯಲ್ಲಿ ಒಂದಷ್ಟು ಒದಿಕೊಂಡು ಎಳ್ಳಷ್ಟನ್ನಾದರು ಪಾಲಿಸೋಣ. ಎಂದರು
ಬಿಜೆಪಿ ಮುಖಂಡ ಸಿದ್ದಯ್ಯ ಮಾತನಾಡಿ. ಬಾಬ ಸಾಹೇಬರ ಅಶಯಗಳಿಗೆ ಶಕ್ತಿ ನೀಡಿದ್ದು. ಮಾನ್ಯ ನರೇಂದ್ರ ಮೋದಿಯವರು. ಸಂವಿದಾನ ನೀಡಿದ ಅಂಬೇಡ್ಕರ್ ರವರನ್ನು ಚುನಾವಣೆಯಲ್ಲಿ ಸೋಲಿಸಿ ಮಂತ್ರಿಯಾಗಲು ಬಿಡಲಿಲ್ಲ. ಅವರ ಹೆಸರನ್ನೆ ಭವಿಷ್ಯದಲ್ಲಿ ಅಳಿಸುವ ಕೆಲಸ ಮಾಡಲು ಕಾಂಗ್ರೆಸ್ ಮುಂದಾಗಿತ್ತು. ಭೀಮ್ ಜಿ ವ್ಯಕ್ತಿತ್ವಕ್ಕೆ ವಂಚನೆ ಮಾಡಲಾಗಿತ್ತು. ಅದರೆ ಬಾರತಿಯ ಜನತಾ ಪಾರ್ಟಿ ಭಾರತರತ್ನ ನೀಡಿ ಗೌರವಿಸಿತು ಎಂದರು
ಕಾರ್ಯಕ್ರಮದಲ್ಲಿ ಹಳೆಕೋಟೆ ಮನೋಜ್, ಪ್ರಶಾಂತ್ ಬಿಳುಗುಳ,ಧನಿಕ್ ಮುಖಂಡರಾದ ನಯನ ತಳವಾರ,ಪರೀಕ್ಷಿತ್ ಜಾವಳಿ, ಸಚಿನ್ ಬಾನಳ್ಳಿ, ಕಾಮಾಕ್ಷಿ, ಕೊಣಗೆರೆಸುಂದರೇಶ್, ಹಿ ರವಿಒಡೆಯರ್, ಸಂದೀಪ್ ಕೆಲ್ಲೂರು, ಭರತ್, ಸುಜಿತ್, ಪ್ರಶಾಂತ್ ,ಶಿವಣ್ಣ, ರತನ್ ದೇವರುಂದ, ತಾರೇಶ್,ಸಂಜೀವ್ ಪ್ರಸಾದ್, ಪ್ರಕಾಶ್ , ರಘು, ಶರತ್ ಮತ್ತಿತರರಿದ್ದರು



