ಸಿಲ್ವರ್ ಮರ ಹತ್ತಿ ಮರಗಸಿ ಮಾಡುವಾಗ ವಿದ್ಯುತ್ ಶಾಕ್ ನಿಂದ ಕಾರ್ಮಿಕರೋರ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಸಮೀಪದ ಕೆರೆಮನೆ ಎಸ್ಟೇಟ್ ನಲ್ಲಿ ಸೋಮವಾರ ಈ ದರ್ಘಟನೆ ನಡೆದಿದೆ. ತಮಿಳುನಾಡು ಮೂಲದ ಕಾರ್ಮಿಕ ಆರ್ಮುಗಂ (45) ಮೃತ ದುರ್ದೈವಿ, ಬಾಬರ್ ಎಂಬುವರ ಕೆರೆಮನೆ ಎಸ್ಟೇಟ್ ತೋಟದಲ್ಲಿ ಈ ದರ್ಘಟನೆ ನಡೆದಿದೆ.
ಮರಗಸಿ ಮಾಡುವಾಗ ಮರದ ಪಕ್ಕದಲ್ಲಿಯೇ ಹಾದು ಹೋಗಿದ್ದ ವಿದ್ಯುತ್ ತಂತಿಯಿಂದ ವಿದ್ಯುತ್ ಪ್ರವಹಿಸಿ ಕಾರ್ಮಿಕ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ತೋಟದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಾಗಿದೆ. ಸ್ಥಳಕ್ಕೆ ಮಲ್ಲಂದೂರು ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.



