ಮೂಡಿಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢ ಶಾಲಾ ವಿಭಾಗ, ಮೂಡಿಗೆರೆಯಲ್ಲಿ ಶಾಲಾ ಆರಂಭೋತ್ಸವ & ಮಹಾ ಪೋಷಕರ ಸಭೆಯು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು sಎಸ್‍ಡಿಎಂಸಿ ಅಧ್ಯಕ್ಷರಾದ ಎಂ. ಎಸ್. ಅನಂತ್ ರವರು ವಹಿಸಿ ಮಾತನಾಡಿದರು. ಎಲ್ಲಾ ಮಕ್ಕಳಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು.
ಪ್ರಾಸ್ತಾವಿಕ ನುಡಿಯನ್ನು ಉಪಾಪ್ರಾಂಶುಪಾಲರಾದ ಡಾ. ಜಗದೀಶ ನಾಯ್ಕ. ಎಂ ನುಡಿದರು. ಎಲ್ಲಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ & ಸಮವಸ್ತ್ರವನ್ನು ನೀಡಲಾಯಿತು. ಸಭೆಯಲ್ಲಿ ಎಸ್‍ಡಿಎಂಸಿ ಉಪಾಧ್ಯಕ್ಷರಾದ ಪರಮೇಶ್, ಸದಸ್ಯರಾದ ಶ್ರೀಮತಿ ಪ್ರಿಯಾ, ಹಿರಿಯ ಶಿಕ್ಷಕರಾದ ಶ್ರೀಮತಿ ರೂಕ್ಸನ ಪರ್ವೀನ್, ಶ್ರೀಮತಿ ಲತಾ, ಶ್ರೀಮತಿ ರೇಣುಕಾ, ರವಿಕುಮಾರ್ ಶ್ರೀಮತಿ ಸುಜಾತ, ಶ್ರೀಮತಿ ಸವೀತಾ ಭಾಗವಹಿಸಿದ್ದರು. ಶ್ರೀಮತಿ ವಿಮಲಾಕ್ಸಿ ನಿರೂಪಿಸಿ, ಶ್ರೀಮತಿ ಮಣಿ ವಂದಿಸಿದರು. ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು..



