ಸಾರ್ವಜನಿಕ ಸ್ವಚ್ಛತೆ ಹಾಗೂ ಆರೋಗ್ಯಕರ ಪರಿಸರ ನಿರ್ಮಾಣದಲ್ಲಿ ಪೌರ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಉದ್ಯಮಿ ನೀಲಂ ಟೆಕ್ಸ್ ಟೇಲ್ಸ್ ಮಾಲೀಕ ದಿನೇಶ್ ಹೇಳಿದರು.
ಅವರು ಮಂಗಳವಾರ ಪಟ್ಟಣದ ಜೇಸಿ ಭವನದಲ್ಲಿ ಜೇಸಿ ಸಂಸ್ಥೆಯ ಸಮಾಜಮುಖಿ ಕಾರ್ಯಗಳ ಅಂಗವಾಗಿ ಪ.ಪಂ. ಪೌರ ಕಾರ್ಮಿಕರಿಗೆ ಸ್ಟೀಲ್ ವಾಟರ್ ಬಾಟಲ್‍ಗಳನ್ನು ವಿತರಿಸಿ ಮಾತನಾಡಿದರು. ಸ್ವಚ್ಛತೆಗಾಗಿ ನಿರಂತರ ಶ್ರಮಿಸುವ ಪೌರಕಾರ್ಮಿಕರು ಆರೋಗ್ಯ ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜೇಸಿಐ ಸಂಸ್ಥೆ ಪೌರ ಕಾರ್ಮಿಕರಿಗೆ ಕುಡಿಯುವ ನೀರು ಬಳಕೆ ಮಾಡಲು ಸ್ಟೀಲ್ ವಾಟರ್ ಬಾಟಲ್ ವಿತರಿಸಲು ಚಿಂತಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಅಧ್ಯಕ್ಷ ಸುನಿಲ್ ವಹಿಸಿದ್ದರು. ಜೇಸಿ ಸ್ಥಾಪಕ ಅಧ್ಯಕ್ಷ ಪುಣ್ಯಮೂರ್ತಿ, ವಲಯ ಉಪಾಧ್ಯಕ್ಷ ಜಗತ್, ಕಾರ್ಯದರ್ಶಿ ಸುದೀಪ್ ತ್ರಿಪುರ, ತೇಜಸ್ವಿ. ವಿಜಯಕುಮಾರ್, ಪ್ರೇಮ ಮತ್ತಿತರರಿದ್ದರು.




