suddi-4 (2)

 

 

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಸಂದಿಗ್ನ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದೆ. ಕೇಂದ್ರ ಸರ್ಕಾರ ಎಸ್‍ಐಆರ್ ಅಸ್ತ್ರ ಬಳಸಿಕೊಂಡು ಜನಸಾಮಾನ್ಯರ ಮತದಾನದ ಹಕ್ಕನ್ನು ಕಸಿಯುವ ದೊಡ್ಡ ಸಂಚು ರೂಪಿಸುತ್ತಿದೆ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಹೇಳಿದರು.

ಚಿಕ್ಕಮಗಳೂರು ನಗರದ ಎಐಟಿ ವೃತ್ತದ ಸಮೀಪ ಒಕ್ಕಲಿಗರ ಭವನದಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ಧ ಚಿಕ್ಕಮಗಳೂರು-ಹಾಸನ ಜಿಲ್ಲೆಯ ಕಾರ್ಯಕರ್ತರಿಗೆ ಎಸ್‍ಐಆರ್ ಸಮಗ್ರ ಮತದಾನ ಪಟ್ಟಿ ಪರಿಷ್ಕರಣೆ ಕುರಿತು ತರಬೇತಿ ಮತ್ತು ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರದ ಸ್ವಾತಂತ್ರ್ಯ ಹೋರಾಟ, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಕಾರ್ಯವೈಖರಿ ಇತ ರೆ ಯಾವುದೇ ದೇಶದಲ್ಲೂ ಕಾಣಲು ಸಿಗುವುದಿಲ್ಲ. ಸತ್ಯ ಮತ್ತು ಅಹಿಂಸೆಯ ಮೂಲಕ ದೇಶದ ಐಕ್ಯತೆಯ ನ್ನು ಪಡೆದುಕೊಂಡಿದ್ದೇವೆ. ಇತರೆ ರಾಷ್ಟ್ರಗಳ ಮಹಿಳೆಯರು ನೂರಾರು ವರ್ಷದ ಬಳಿಕ ಮತದಾನದ ಹಕ್ಕು ಲಭಿಸಿದರೆ, ಭಾರತದಲ್ಲಿ ಸಂವಿಧಾನ ರಚನೆಗೊಂಡ ದಿನದಿಂದನೇ ದೊರಕಿದೆ ಎಂದರು.

ಎಸ್‍ಐಆರ್ ಸಂವಿಧಾನದಲ್ಲಿ ಅಡಕವಾಗಿದೆ. 1951ರ ಇಸವಿಯಿಂದ ಎಂಟು ಭಾರಿ ಎಸ್‍ಐಆರ್ ಆಗಿ ದೆ. ಭಾರತದ ಪ್ರತಿ ಪ್ರಜೆಗಳು, ಕಾಂಗ್ರೆಸ್ ಕಾರ್ಯಕರ್ತರು ಪ್ರಶ್ನಿಸಿಕೊಳ್ಳಬೇಕು. ಬಿಜೆಪಿ ಸರ್ಕಾರ ಸಂವಿಧಾನ ನೀಡಿದ ಹಕ್ಕನ್ನು ತಿರುಚುವ ಕೆಲಸ ಮಾಡುತ್ತಿದೆ. ಎಸ್‍ಐಆರ್ ಮತದಾರರ ಪಟ್ಟಿ ಪರಿಷ್ಕರಣೆಯಲ್ಲ, ಮತಾ ಧಿಕಾರದ ಹರಣವಾಗುತ್ತಿದೆ ಎಂದು ತಿಳಿಸಿದರು.

ದೇಶದಲ್ಲಿ ಎಂಟು ಭಾರಿ ಎಸ್‍ಐಆರ್ ನಡೆದರೂ ಕೂಡಾ, ಯಾವುದೇ ರಾಜಕೀಯ ಪಕ್ಷಗಳು ಎಸ್ ಐಆರ್ ತರಬೇತಿ ಶಿಬಿರ, ಜಾಗೃತಿ ಕೆಲಸ ಮಾಡಿಲ್ಲ. ಅದು ಚುನಾವಣಾ ಆಯೋಗ ಪಾರದರ್ಶಕವಾದ ಪ್ರ ಕ್ರಿಯೆಯಿತ್ತು. ಆದರೆ ಹನ್ನೊಂದು ವರ್ಷಗಳಲ್ಲಿ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ಬುಡಮೇಲು ಮಾಡಿ, ಚು ನಾಯಿತ ಸರ್ಕಾರವೇ ನನ್ನ ಮತದಾರ ಯಾರೆಂದು ಗುರುತಿಸುತ್ತಿದೆ ಎಂದರು.

ಸದ್ಯದಲ್ಲೇ ಮ್ಯಾಪಿಂಗ್ ಕಾರ್ಯ ಮುಗಿಯುವ ಹಂತದಲ್ಲಿದೆ. ಆ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳು ಪ್ರತಿ ವಾರ್ಡ್‍ಗಳಲ್ಲಿ ಮಾಹಿತಿ ಕೇಂದ್ರ ತೆರೆದು ಜನರಿಗೆ ಅರಿವು ಮಾಡಬೇಕು. ನಿರ್ಲಕ್ಷ್ಯಹಿಸಿದರೆ ಮುಂದೆ ಭಾರೀ ಗಂಡಾಂತರ ಕಾದಿದೆ. ಪ್ರಸ್ತುತ ಉತ್ತರ ಪ್ರದೇಶದಲ್ಲಿ 16 ಕೋಟಿ ಜನಸಂಖ್ಯೆಯಿದೆ. ಎಸ್‍ಐಆರ್ ಬಳಿ ಕ 2 ಕೋಟಿಗೂ ಹೆಚ್ಚು ಮತದಾರರನ್ನು ಒಡೆದಿರುವ ಕೆಲಸ ಬಿಜೆಪಿ ಮಾಡಿದೆ ಎಂದರು.

ಉತ್ತರಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಎಸ್‍ಐಆರ್ ಬಳಸಿಕೊಂಡು ಕೇಂ ದ್ರದ ಬಿಜೆಪಿ ಸರ್ಕಾರ, ಆರ್‍ಎಸ್‍ಎಸ್ ಸಂಘಟನೆಗಳು ಮತದಾರನ್ನು ಹಕ್ಕನ್ನು ಕಸಿದುಕೊಳ್ಳಲು ಮುಂದಾ ಗುತ್ತಿದೆ. ಆ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವದ ಬರಲು ಕಾರಣವಾದ ಕಾಂಗ್ರೆಸ್ ಪಕ್ಷವನ್ನು ಉಳಿಸಿಕೊಳ್ಳಲು ಹೋರಾಟ ರೂಪಿಸಿಕೊಂಡು ಯಶಸ್ವಿಯಾಗಬೇಕು ಎಂದು ಕರೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ|| ಕೆ.ಪಿ.ಅಂಶುಮಂತ್ ಮಾತನಾಡಿ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ ಕಾರ್ಯಕರ್ತರು, ಚುನಾಯಿತ ಪ್ರತಿನಿಧಿಗಳು ಸನ್ನದ್ಧರಾಗಬೇಕು. ಜಿಲ್ಲೆಯ ಪ್ರತಿ ಬೂತ್‍ಮಟ್ಟದಿಂ ದ ಮತದಾನ ಪರಿಷ್ಕರಣೆಯ ಮಾಹಿತಿ ಜನರಿಗೆ ತಿಳಿಸಬೇಕು. ತಳಮಟ್ಟದಲ್ಲಿ ನಾಯಕತ್ವ ಬೆಳೆಸಲು ಪಕ್ಷ ಅವಕಾಶ ನೀಡಿದ್ದು ಜವಾಬ್ದಾರಿಯಿಂದ ಕೆಲಕಾಲ ಕಾರ್ಯನಿರ್ವಹಿಸಬೇಕು ಎಂದರು.

ಪಕ್ಷದ ಕಾರ್ಯಕರ್ತರು ಅರ್ಹ ಜನತೆಯ ಮತದಾನದ ಹಕ್ಕನ್ನು ಕಸಿದುಕೊಳ್ಳದಂತೆ ಗಮನಹರಿಸ ಬೇಕು. ಮ್ಯಾಪಿಂಗ್ ನಡೆದಿರುವ ಅನೇಕ ಕಡೆಗಳಲ್ಲಿ ಮತದಾರರನ್ನು ಪಟ್ಟಿಯಿಂದ ಅಳಿಸುವ ಪ್ರಕ್ರಿಯೆ ನಡೆದಿ ವೆ. ಸದ್ಯದಲ್ಲೇ ಮ್ಯಾಪಿಂಗ್ ಪ್ರಕ್ರಿಯೆ ಹಂತದಲ್ಲಿರುವ ಕಾರಣ ಪಕ್ಷದ ಮುಖಂಡರು ಸೇನಾನಿಗಳಂತೆ ವಿಚಾರ  ವಿನಿಯಮ ಮಾಡಿಕೊಂಡು ಕೆಲಸ ನಿರ್ವಹಿಸಬೇಕು ಎಂದು ಕರೆ ನೀಡಿದರು.

 

ಹಾಸನ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್ ಮಾತನಾಡಿ ಎಸ್‍ಐಆರ್ ಮುಖೇನಾ ಬಿಜೆಪಿ ಪಕ್ಷ ಅನೇಕ ರಾ ಜ್ಯದಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ತನ್ನ ನಿಲುವು ಕಟ್ಟಿಗೊಳಿಸಲು ದಲಿತರು, ಮುಸ್ಲೀಂ ಹಾಗೂ ಹಿಂದುಳಿದ ವರ್ಗಗಳ ಮತದಾಗಳನ್ನು ಛಿದ್ರಗೊಳಿಸಲು ಪ್ರಯತ್ನಿಸಿದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಈ ಮೂರು ವರ್ಗವು ಭದ್ರಕೋಟೆಯಂತೆ. ಹೀಗಾಗಿ ಬಿಜೆಪಿ ಕುತಂತ್ರ ಸಫಲವಾಗದಂತೆ ಸೂಕ್ತ ನಿಗಾವಹಿಸಬೇ ಕು ಎಂದು ಹೇಳಿದರು.

ಇದೇ ವೇಳೆ ಕರ್ನಾಟಕ ಜಾಗೃತ ಬಳಗದ ಸಂಚಾಲಕ ಡಾ|| ಬಿ.ಸಿ.ಬಸವರಾಜ್ ತರಬೇತಿ ಕಾರ್ಯಾ ಗಾರ ನಡೆಸಿಕೊಟ್ಟುರು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಡಾ|| ಡಿ.ಎಲ್.ವಿಜಯ್ ಕುಮಾರ್, ಎಂ.ಎಲ್.ಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಜಿಲ್ಲಾ ಕಾಂಗ್ರೆಸ್ ಸಂಶೊಧನಾ ವಿಭಾಗದ ಹೆಚ್.ಎಸ್.ಶಿವಕುಮಾರ್, ಜಿ.ಪಂ. ಮಾಜಿ ಅಧ್ಯಕ್ಷ ಕೆ.ಮಹಮ್ಮದ್, ಸತೀಶ್, ಮಾಜಿ ಎಂಎಲ್ಸಿ ಗಾಯ ತ್ರಿಶಾಂತೇಗೌಡ, ಹಾಸನ ಕಾಂ ಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘು, ಕಾರ್ಯಾಧ್ಯಕ್ಷ ಶಶಿಧರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ