WhatsApp Image 2026-07-03 at 12.07.00 PM

 

 

ಕಾರ್ಮಿಕ ಮತ್ತು ಲೌಕಿಕ ಶಿಕ್ಷಣ ಪಡೆದವರು ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಇಂತಹ ಸುಸಂಸ್ಕೃತ ಶಿಕ್ಷಣದಿಂದ ಸಮಾಜದ ಗೌರವ ಹೆಚ್ಚುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಕಿನ್ಯಾ ಗ್ರಾಮದ ಧರ್ಮಗುರು ರಿಯಾಜ್ ರೆಹ್ಮಾನಿ ಹೇಳಿದರು.

ಮೂಡಿಗೆರೆ ಪಟ್ಟಣದ ಬದ್ರಿಯಾ ಕೇಂದ್ರ ಜುಮ್ಮಾ ಮಸೀದಿಯಲ್ಲಿ ರೆಂಜ್ ಜಂಹಿಯತ್ ಮುಹಲ್ಲಿಮಿನ್ ಸಂಸ್ಥೆಯಿಂದ ಬುಧವಾರ ನಡೆದ ಮದರಸಾ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಧಾರ್ಮಿಕ ಶಿಕ್ಷಣದಿಂದ ಮನುಷ್ಯ ಅಡ್ಡದಾರಿ ಹಿಡಿಯುವುದನ್ನು ತಪ್ಪಿಸಲು ಸಾಧ್ಯವಿದೆ. ಜಗತ್ತಿನ ಪ್ರತಿ ಧರ್ಮಗಳು ಕೂಡ ತನ್ನದೆಯಾದ ಚಾರಿತ್ರ್ಯವನ್ನು ಹೊಂದಿದೆ. ಧರ್ಮಗ್ರಂಥಗಳು ಧಾರ್ಮಿಕತೆಯ ಪ್ರತೀಕವಾಗಿ ಪ್ರತಿಯೊಬ್ಬರನ್ನು ಗೌರವಯುತ ಭಾವನೆಯಿಂದ ಕಾಣುವಂತೆ ಹಾಗೂ ಕಲ್ಯಾಣ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಧಾರ್ಮಿಕ ಶಿಕ್ಷಣ ಪಡೆಯದೆ ಲೌಕಿಕ ಶಿಕ್ಷಣವನ್ನು ಮಾತ್ರ ಪಡೆದರೆ ಪ್ರಯೋಜನವಾಗದು. ಪ್ರತಿಯೊಂದು ಧರ್ಮದಲ್ಲೂ ಧಾರ್ಮಿಕ ಶಿಕ್ಷಣವಿದೆ. ಅದನ್ನು ಕಲಿಯಲು ಕಾರ್ಮಿಕ ಪಂಡಿತರು ಪ್ರತಿಯೊಬ್ಬರಿಗೂ ಅವಕಾಶ ಮಾಡಿಕೊಡುತ್ತಾರೆ. ಧಾರ್ಮಿಕ ಶಿಕ್ಷಣ ಪಡೆದ ಯಾರೊಬ್ಬರೂ ತನ್ನ ಗೌರವವನ್ನು ಕಳೆದುಕೊಂಡಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಲೌಕಿಕ ಶಿಕ್ಷಣದಿಂದ ಸಮಾಜದಲ್ಲಿ ಉನ್ನತವಾದ ಗುರಿಯನ್ನು ತಲುಪುವ ಜೊತೆಗೆ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಹಾಗೂ ಜನರ ಸೇವೆ ಮಾಡಲು ಕೂಡ ಅವಕಾಶ ಸಿಗುತ್ತದೆ. ಇದನ್ನು ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಮದರಸಾಗಳು ಸರ್ಕಾರಿ ಮತ್ತು ಖಾಸಗಿ ಶಾಲೆಗಳಂತೆ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣವನ್ನು ನೀಡುವ ಕೇಂದ್ರಗಳಾಗಿದೆ. ಮದರಸಾಗಳಲ್ಲಿ ಸಮಾಜಕ್ಕೆ ಬೇಕಾದ ಪಾಠವನ್ನು ಮಾತ್ರ ಹೇಳಿಕೊಡಲಾಗುತ್ತದೆ. ಮದರಸಾದಲ್ಲಿ ಧಾರ್ಮಿಕ ಪಾಠ ಕಲಿತ ವಿದ್ಯಾರ್ಥಿಗಳು ಸಮಾಜದಲ್ಲಿ ಗೌರವಯುತರಾಗಿದ್ದಾರೆ. ರಾಜಕೀಯದಲ್ಲಿ ಲಾಭ ಪಡೆಯುವ ಕಾರಣಕ್ಕಾಗಿ ಮದರಸಾಗಳನ್ನು ಟೀಕೆ ಮಾಡುವವರು ಹೆಚ್ಚಾಗಿದ್ದಾರೆ. ರಾಜಕಾರಣಕ್ಕಾಗಿ ಧಾರ್ಮಿಕ ಕೇಂದ್ರಗಳನ್ನು ಟೀಕೆ ಮಾಡುವವರು ಧಾರ್ಮಿಕ ಶಿಕ್ಷಣದ ಬಗ್ಗೆ ತಿಳಿದುಕೊಂಡು ಶಾಂತಿ, ಸಹಬಾಳ್ವೆ, ಸೌಹಾರ್ದತೆಯ ರಾಜಕಾರಣ ಮಾಡುವುದು ಸೂಕ್ತವಾಗಿದೆ ಎಂದು ತಿಳಿಸಿದರು.

ತಾಲೂಕು ಮದರಸಾ ಶಿಕ್ಷಣಾಧಿಕಾರಿ ಅಬ್ದುಲ್ಲಾ ಕುಜ್ಞಿ ಫೈಝಿ ಮಾತನಾಡಿ, ಮದರಸಾಗಳು ಕೆಲವೆಡೆ ಮಾತ್ರ ಧಾರ್ಮಿಕ ಶಿಕ್ಷಣವನ್ನು ಮಾತ್ರ ನೀಡುತ್ತದೆ. ಇನ್ನು ಕೆಲವು ಕಡೆ ಧಾರ್ಮಿಕ ಶಿಕ್ಷಣದೊಂದಿಗೆ ಲೌಕಿಕ ಶಿಕ್ಷಣವನ್ನು ಧಾರ್ಮಿಕ ಸಂಸ್ಥೆಗಳಿಂದಲೆ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಧಾರ್ಮಿಕ ಶಿಕ್ಷಣ ಬದುಕುವ ದಾರಿಯನ್ನು ಕಲಿಸುವ ಜೊತೆಗೆ ಸಮಾಜದಲ್ಲಿ ಸನ್ನಡತೆಯಲ್ಲಿ ಮುನ್ನಡೆಯಬೇಕಾದ ಪಾಠವನ್ನು ಮಾತ್ರ ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗುತ್ತದೆ. ಮದರಸಾ ಶಿಕ್ಷಕರಿಗೆ ಮಸೀದಿಯ ಸಮಿತಿಯಿಂದ ಗೌರವಧನ ನೀಡುತ್ತಾರೆ. ಈ ಶಿಕ್ಷಣಕ್ಕೆ ಸರ್ಕಾರದ ಸಹಾಯ ಅಗತ್ಯವಿದೆ. ಮದರಸಾ ಶಿಕ್ಷಕರಿಗೆ ಸರ್ಕಾರದಿಂದ ಮಾಸಿಕ ವೇತನ ನೀಡುವ ಯೋಜನೆ ಜಾರಿಯಾಗಬೇಕು ಎಂದು ಒತ್ತಾಯಿಸಿದರು.

ಬದ್ರಿಯಾ ಕೇಂದ್ರ ಜುಮ್ಮಾ ಮಸೀದಿ ಖತೀಬ್ ಮುಸ್ತಫಾ ಯಮಾನಿ ಕಾರ್ಯಕ್ರಮ ಉದ್ಘಾಟಿಸಿದರು.

ರೋಗಿಗಳಿಗೆ ಸಹಾಯಧನ ಮತ್ತು ತಾಲೂಕಿನ ಎಲ್ಲಾ ಮದರಸಾಗಳಿಗೂ ವಿವಿಧ ಜಾತಿಯ ಗಿಡಗಳನ್ನು ವಿತರಿಸಲಾಯಿತು.

ಬದ್ರಿಯಾ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಎ.ಎಂ.ಶರೀಫ್ ಹಾಜಿ, ಸಂಯುಕ್ತ ಜಮಾತ್ ಒಕ್ಕೂಟದ ಅಧ್ಯಕ್ಷ ಸಿ.ಕೆ.ಇಬ್ರಾಹಿಂ ಹಾಜಿ, ಮುಸ್ತಫಾ ಯಮಾನಿ, ಸುಲೇಮಾನ್ ಮುಸ್ಲಿಯಾರ್. ಶಿನಾನ್ ಫೈಝಿ, ಬದ್ರದ್ದೀನ್ ಧಾರಿಮಿ, ನಜೀರ್ ಹಾಜಿ, ಎ.ಸಿ.ಅಯೂಬ್ ಹಾಜಿ, ಮೂಸಾ ಹಾಜಿ, ಎಂ.ಎಚ್.ಇಬ್ರಾಹಿಂ ಹಾಜಿ, ಅಕ್ರಂ ಹಾಜಿ, ಎಂ.ಎಚ್.ಇಸ್ಮಾಯಿಲ್, ಇಬ್ರಾಹಿಂ ಯಾದ್ಗಾರ್, ಜೆ.ಬಿ.ಅಲಿ ಹಾಜಿ, ಶಂಸುದ್ದೀನ್ ಯಮಾನಿ, ಯಾಕೂಬ್ ದಾರಿಮಿ, ಹಸೈನರ್ ಮುಸ್ಲಿಯಾರ್ ಇತರರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ