ಜೈವಿಕ ಇಂಧನ ವಲಯವನ್ನು ಉತ್ತೇಜಿಸುವಲ್ಲಿ ನಿಟ್ಟಿನಲ್ಲಿ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳ ಸರ್ಕಾರಗಳ ಪ್ರಯತ್ನಿಸುತ್ತಿವೆ. ಇದು ಭವಿಷ್ಯದಲ್ಲಿ ಪೆಟ್ರೋಲ್, ಡೀಸೆಲ್ ಹೊ ರತಾಗಿ ಬಳಕೆಗೊಳ್ಳಲಿವೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಯಶ್ಪಾಲ್ ಕ್ಷೀರಸಾಗರ್ ಹೇಳಿದರು.
ಚಿಕ್ಕಮಗಳೂರು ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ಸೋಮವಾರ ಮೆಕ್ಯಾನಿಕಲ್ ಇಂಜಿನಿಯರ್ ವಿಭಾಗದಿಂ ದ ಆಯೋಜಿಸಿದ್ಧ ಅಂತರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೈವಿಕ ಇಂಧನಗಳು ಪರಿಸರ ಸ್ನೇಹಿ ಇಂಧನಗಳಾಗಿವೆ. ಅವುಗಳನ್ನು ಕೃಷಿ ತ್ಯಾಜ್ಯ, ಮರಗಳು, ಬೆಳೆ ಗಳು ಅಥವಾ ಹುಲ್ಲಿನಂಥಹ ಜೈವಿಕ ವಸ್ತುಗಳನ್ನು ಬಳಸಿ ಉತ್ಪಾದಿಸುವುದರಿಂದ ಪ್ರಕೃತಿ ಮೇಲೆ ಯಾವುದೇ ಅಡ್ಡಪರಿಣಾಮವಾಗುವುದಲ್ಲದೇ ಮನುಷ್ಯನ ಆರೋಗ್ಯಕ್ಕೂ ಪೂರಕವಾಗಲಿದೆ ಎಂದು ಹೇಳಿದರು.
ಜೈವಿಕ ಇಂಧನಗಳ ನೈಸರ್ಗಿಕ ಪ್ರಯೋಜನಗಳನ್ನು ಮತ್ತು ಸುಸ್ಥಿತಿ ಇಂಧನವನ್ನು ಉತ್ತೇಜಿಸುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳಿಗೆ ಹೋಲಿಸಿದರೆ ಜೈವಿಕ ಇಂಧನಗಳು ಪರಿಸರಕ್ಕೆ ಪೂರಕವಾಗಿವೆ. ಅಲ್ಲದೇ ಹವಮಾನ ಬದಲಾವಣೆಯನ್ನು ಕಡಿಮೆ ಮಾಡುವ ಸುಸ್ಥಿರ ಇಂಧನವಾಗಿದೆ ಎಂದು ತಿಳಿಸಿದರು.
ಪರಿಸರದಲ್ಲಿ ಗಾಳಿ ಮತ್ತು ನೀರಿನ ಮಾಲಿನ್ಯ ತಡೆಗಟ್ಟುವಲ್ಲಿ ಜೈವಿಕ ಇಂಧನ ಮಹತ್ವ ಬಹಳಷ್ಟಿದೆ. ಹಸಿ ರುಮನೆ ಅನಿಲದ ಹೊರಸೂಸುವಿಕೆಯನ್ನು ಸಹ ಕಡಿಮೆಗೊಳಿಸುತ್ತದೆ. ತ್ಯಾಜ್ಯ ಮೂಲಗಳಿಂದ ಜೈವಿಕ ಇಂ ಧನ ತಯಾರಿಕೆಗೆ ವಿಪುಲ ಅವಕಾಶಗಳಿದ್ದು ಆ ನಿಟ್ಟಿನಲ್ಲಿ ಯುವಸಮೂಹ ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ಮಾಡಿದರು.
ಕಾಲೇಜು ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಗ್ರಂಥಾಲಯಗಳಲ್ಲಿ ಪುಸ್ತಕ, ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಆಧುನಿಕ ಕಾಲಮಾನದಲ್ಲಿ ಎಐ, ಗೂಗಲ್ ಎಷ್ಟೇ ತಂತ್ರಜ್ಞಾನ ಬೆಳೆದರೂ, ಪುಸ್ತಕದಲ್ಲಿ ದೊರೆಯುವ ಮಾಹಿತಿ, ಪರಿಹಾರ ಹಾಗೂ ಅನುಭವ ಬೇರೆಲ್ಲೂ ಲಭಿಸಲು ಸಾಧ್ಯವಿಲ್ಲ ಎಂದರು.
ಎಐಟಿ ಕಾಲೇಜು ಪ್ರಾಂಶುಪಾಲ ಡಾ.ಗೌತಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಲಕ್ಷಾಂ ತರ ವರ್ಷಗಳ ಹಿಂದೆ ಸಸ್ಯಗಳು, ಪ್ರಾಣಿಗಳ ಅವಶೇಷಗಳು ಭೂಮಿಯೊಳಗೆ ಒತ್ತಡ ಮತ್ತು ಉಷ್ಟತೆಯಿಂ ದ ಪರಿವರ್ತನೆಗೊಂಡು ರೂಪುಗೊಂಡ ಪಳೆಯುವಿಕೆ ಇಂಧನ ಇಂದು ಅತಿಯಾದ ಬಳಕೆಯಿಂದ ಕ್ರಮೇ ಣ ಕ್ಷೀಣಿಸುತ್ತಿದ್ದು ಮುಂದೊಂದು ದಿನ ನಶಿಸುವ ಸಾಧ್ಯತೆಯಿದೆ ಎಂದರು.
ಭವಿಷ್ಯದಲ್ಲಿ ಪಳೆಯುಳಿಕೆ ಇಂಧನವನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಯವರಿಗೂ ಲಭ್ಯವಾಗುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ದಿಸೆಯಲ್ಲಿ ಜೈವಿಕ ಇಂಧನವನ್ನು ಅಭಿವೃದ್ದಿಪಡಿಸಿ, ಪಳೆಯು ಳಿಕೆ ಇಂಧನಕ್ಕೆ ಪರ್ಯಾಯವಾಗಿ ಜೈವಿಕ ಇಂಧನವನ್ನು ವೈಜ್ಞಾನಿಕವಾಗಿ ಮಿಶ್ರಣ ಮಾಡಿ ಬಳಸುವ ಅಗತ್ಯ ವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ಬಿ.ಎಂ.ಕಿರಣ್, ಮೆಕ್ಯಾನಿಕಲ್ ವಿಭಾಗದ ಪ್ರಭಾರಿ ಮುಖ್ಯಸ್ಥ ಡಾ. ಅಭಿಜಿತ್ವೈದ್ಯ, ರೋಟಿಕ್ ವಿಭಾಗದ ಪ್ರಭಾರಿ ಮುಖ್ಯಸ್ಥ ಡಾ. ಎಸ್.ಎಸ್.ಮನು ಹಾಗೂ ವಿವಿಧ ಮುಖ್ಯಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


