ನಕಲಿ ನಾಟಿ ತುಪ್ಪ ತಯಾರಿಸಿ ಹಳ್ಳಿಗಳಿಗೆ ತೆರಳಿ ಮಾರಾಟ ಮಾಡುತ್ತಿದ್ದ ಜಾಲವನ್ನು ಆಹಾರ ಇಲಾಖೆಯ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆಯ ಅಧಿಕಾರಿ ನಾಗರತ್ನ ನೇತೃತ್ವದ ತಂಡ ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಪಾಳುಬಿದ್ದ ಮನೆಯೊಂದರ ಮೇಲೆ ದಾಳಿ ನಡೆಸಿದೆ.
ಈ ವೇಳೆ ಡಾಲ್ಟಾ, ವನಸ್ಪತಿ ಹಾಗೂ ವಿವಿಧ ರಾಸಾಯನಿಕ ಗಳನ್ನು ಬಳಸಿ ನಾಟಿ ತುಪ್ಪ ತಯಾರಿಸುತ್ತಿದ್ದ ತಂಡ ಪತ್ತೆಯಾಗಿದೆ. ನಾಟಿ ತುಪ್ಪದಂತೆ ಕಾಣಲು ಹಾಗೂ ಹಳದಿ ಬಣ್ಣ ಬರಲು ರಾಸಾಯನಿಕ ಗಳನ್ಮ್ನ ಬಳಸಲಾಗುತ್ತಿತ್ತು ಎನ್ನಲಾಗಿದೆ.
ಬಳಿಕ ತಯಾರಿಸಿದ ತುಪ್ಪವನ್ನು ಬೈಕ್‍ಗಳಲ್ಲಿ ಹಳ್ಳಿಗಳಿಗೆ ಕೊಂಡೊಯ್ದು ನಾಟಿ ತುಪ್ಪವೆಂದು ಹೇಳಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ದಾಳಿ ವೇಳೆ ಬಳ್ಳಾರಿ ಜಿಲ್ಲೆಯಲ್ಲಿ ನೋಂದಣಿಯಾಗಿರುವ ಮೂರು ಬೈಕ್‍ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಪ್ರಕರಣವು ಚಿಕ್ಕಮಗಳೂರು ನಗರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆಹಾರ ಇಲಾಖೆಯ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


