ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಮೂಡಿಗೆರೆ ಘಟಕದ ವತಿಯಿಂದ ಹಿರಿಯ ನಾಗರೀಕ ದಿನಾಚರಣೆ ಆಚರಿಸಲಾಯಿತು.
ಮೂಡಿಗೆರೆ ಕಾಫಿ ಕೋರ್ಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಗೋಪಾಲಗೌಡ ಅವರು ಹಿರಿಯ ನಾಗರೀಕರಿಗೆ ಇರುವ ಕಾನೂನು ರಕ್ಷಣೆ, ಅವರ ಶ್ರೇಯೋಭಿವೃದ್ದಿಗೆ ಸರ್ಕಾರದ ಭದ್ರತೆ ಮತ್ತು ತಮ್ಮ ಪೋಷಕರನ್ನು ಮಕ್ಕಳು ಪೋಷಣೆ ಮಾಡಬೇಕಾದ ಜವಾಬ್ದಾರಿ ಮತ್ತು ತೋರಬೇಕಾದ ಗೌರವದ ಬಗ್ಗೆ ಮಾತನಾಡಿದರು.
ಕಾರ್ಯಕಮದಲ್ಲಿ ಹಿರಿಯ ನಾಗರೀಕರು ಹಾಗೂ ಸೀನಿಯರ್ ಛೇಂಬರ್ ಸಂಸ್ಥಾಪಕ ಅಧ್ಯಕ್ಷ ಎನ್.ಎಲ್. ಪುಣ್ಯಮೂರ್ತಿ, ಹಿರಿಯ ವೈದ್ಯರು ಮತ್ತು ಸೀನಿಯರ್ ಛೇಂಬರ್ ನಿಕಟಪೂರ್ವ ಅಧ್ಯಕ್ಷ ಡಾ. ರಾಮಚರಣ ಅಡ್ಯಂತಾಯ, ಮೂಡಿಗೆರೆ ಲಯನ್ಸ್ ಅಧ್ಯಕ್ಷ ಸತ್ಯನಾರಾಯಣ, ಹಿರಿಯ ವಕೀಲ ಗೋಪಾಲಗೌಡ, ಪ್ರಗತಿಪರ ಕೃಷಿಕ ಗೌತುವಳ್ಳಿ ಲಕ್ಷ್ಮಣಗೌಡ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಸನ್ನ ಗೌಡಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಚಾಂಚಿ ರವಿಕುಮಾರ್ , ಬಿ.ಎನ್. ಮನಮೋಹನ್ , ಹೆಚ್.ಆರ್. ಪ್ರದೀಪ್ ಕುಮಾರ್ ಮುಂತಾದವರು ಇದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀನಿಯರ್ ಛೇಂಬರ್ ಅಧ್ಯಕ್ಷ ಅಮಿನ್ ಅಹಮದ್ ವಹಿಸಿದ್ದರು.


