September 24, 2026
;
1004052739

 

 

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಗೋಣಿಬೀಡು ಮೂಡಿಗೆರೆ ತಾಲ್ಲೂಕು ಇದರ   2025-26ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾ ಸಭೆಯು ದಿನಾಂಕ:-18-09-2026ರಂದು ನಡೆಯಿತು.

ಸಭೆಯಲ್ಲಿ ಸಂಘದ ಅಧ್ಯಕ್ಷ  ಶ್ರೀ ಎನ್.ಜೆ.ಜಯರಾಮ್‌ ರವರು ಮಾತನಾಡಿ 118.49 ಕೋಟಿ ವ್ಯವಹಾರ ನಡೆಸಿ ಸಂಘವು 80.61 ಲಕ್ಷರೂಗಳ ನಿವ್ವಳ ಲಾಭಗಳಿಸಿರುತ್ತದೆ. ಸಂಘದ ಷೇರು 1.81 ಕೋಟಿ, ಆಪದ್ಧನ-2.04 ಕೋಟಿ,ಒಟ್ಟು –ನಿಧಿಗಳು 8.71 ಕೋಟಿ ಎಂದು ಮಾಹಿತಿ ನೀಡಿದರು. ಹಾಗೆಯೇ ಸಂಘದಲ್ಲಿ 2250 ಸದಸ್ಯರಿದ್ದು ಸಂಘ ಈ ಬಾರಿಯೂ “ಎ” ದರ್ಜೆಯಲ್ಲಿ ಮುಂದುವರೆದಿದೆ ಎಂದು ಅವರು ಹೇಳಿದರು. ಹಾಗೂ ಜಿಲ್ಲೆಯ ಒಟ್ಟು 129 ಸಹಕಾರ ಸಂಘಗಳ ಪೈಕಿ ಅತೀ ಹೆಚ್ಚು ಲಾಭಗಳಿಸಿದ ಸಹಕಾರ ಸಂಘ ನಮ್ಮದಾಗಿದೆ ಎಂದರು.

ಸಂಘವು ಸ್ವಂತ ಬಂಡವಾಳದಿಂದ ಈ ಸಾಲಿನಲ್ಲಿ ಕೃಷಿಸಾಲ, ವ್ಯಾಪಾರ ಸಾಲ, ಆಭರಣ ಸಾಲ,ದಾಸ್ತಾನು ಸಾಲ,ವಾಹನ ಸಾಲ,ವೇತನ ಆಧಾರಸಾಲ, ಪಿಗ್ಗಿ ಸಾಲ, ರಸಗೊಬ್ಬರ ಸಾಲ,ಕೆ.ಸಿ.ಸಿ ಬೆಳೆ ಸಾಲ,ಮಧ್ಯಮಾವಧಿ ಸಾಲ ಸೇರಿ ಒಟ್ಟು 16.91 ಕೋಟಿ ಸಾಲ ವಿತರಣೆ ಮಾಡಲಾಗಿದೆ.ಹಾಗೂ 2025-26ನೇ ಸಾಲಿನಲ್ಲಿ ಸಂಘದ ಸದಸ್ಯರ ಮಕ್ಕಳ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ 85%ಗಿಂತ ಅಧಿಕ ಅಂಕ ಪಡೆದಂತಹ 17 ವಿಧ್ಯಾರ್ಥಿಗಳಿಗೆ ನಗದು ಸಹಿತ ಪ್ರತಿಬಾ ಪುರಸ್ಕಾರ ಮಾಡಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ   ವಿ.ಕೆ.ಶಿವೇಗೌಡ ವಾಲೇಕರಟ್ಟಿ, ನಿರ್ದೇಶಕರುಗಳಾದ ಆದರ್ಶಕುಮಾರ್, ಕೆ.ಆರ್.ಸುಧೀರ್, ಎನ್.ಜಿ.ರಮೇಶ್, ಗೌರಮ್ಮ, ಎಮ್ ಅನೀಸ್, ಡಿ.ಬಿ ಧೀಪಕ್, ಎನ್ ಬಿ ಲಲಿತ, ಕೆ.ಎಸ್ ರೇಖಾ ಮೋಹನ್, ಕೆ.ಆರ್ ಮಹೇಶ್, ಡಿ ಸಿ ಸಿ ಬ್ಯಾಂಕ್ ಮೇಲ್ವಿಚಾರಕರಾದ ನಿತಿನ್ ಪಟೇಲ್ ವೃತ್ತಿಪರ ನಿರ್ದೇಶಕರುಗಳಾದ ಹೆಚ್.ಡಿ.ಸುಧಾಕರ್, ಎಮ್.ಬಿ.ನವೀನ್‌ ಕುಮಾರ್ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಶಿವಪ್ರಸಾದ್ ಯು.ಕೆ ಮತ್ತು ಸಿಬ್ಬಂಧಿ ವರ್ಗ ಹಾಗೂ ಸಂಘದ ಸದಸ್ಯರುಗಳು ಸಭೆಯಲ್ಲಿ ಹಾಜರಿದ್ದರು.

 

 

Leave a Reply

Your email address will not be published. Required fields are marked *