September 24, 2026
;
suddi-1 (A)

 

 

ಮೂಡಿಗೆರೆ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಅಭೀವೃದ್ದಿ ಪತದಲ್ಲಿ ಮುನ್ನಡೆಯುತ್ತಾ ಬಂದಿದ್ದು. ಸಾರ್ವಜನಿಕರು ಮತ್ತು ರೈತರಿಗೆ ಅನುಕೂಲವಾಗಲೆಂದು ಈ ಸಾಲಿನಲ್ಲಿ ರೈತಭವನದ ಕಾರ್ಯಕ್ರಮಗಳಿಗೆ 2500-3000 ಸಾವಿರ ಜನರಿಗೆ ಅಡಿಗೆ ವ್ಯವಸ್ಥೆಗೆ ಪಾತ್ರಗಳನ್ನು ಖರಿದಿಸಲಾಗಿದೆ ಇದರ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಲುತ್ತಿರುವುದು ಹೆಮ್ಮೆಯ ವಿಷಯವಾಗಿದೆ. 2026-27 ನೇ ಸಾಲಿನಲ್ಲಿ ಸಂಘವು 30,12,839=00 ನಿವ್ವಳ ಲಾಭ ಗಳಿಸಿದೆ ಎಂದು ಮೂಡಿಗೆರೆ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಾಕಾರ ಸಂಘದ ಅಧ್ಯಕ್ಷ ಎಂ.ಎಲ್.ಕಲ್ಲೇಶ್ ತಿಳಿಸಿದರು

ಹೆಚ್.ಎಸ್.ಚಂದ್ರೇಗೌಡ ಬಡಾವಣೆಯಲ್ಲಿರುವ ಸಂಘದ ರೈತಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ 2025-26 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ರೈತಭವನದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅನುಕೂಲವಾಗಲೆಂದು ಪಾರ್ಕೀಂಗ್ ವ್ಯವಸ್ಥೆ ಕಲ್ಪಿಸಲಾಗಿದೆ, ಮತ್ತು ಪಟ್ಟಣದ ಮುಖ್ಯ ರಸ್ತೆಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಸಂಘದ ಕಚೇರಿ ಕಟ್ಟಡವನ್ಮ್ನ ಕೆಡವಲಾಗಿದ್ದು ನೂತನ ಕಟ್ಟಡ ನಿರ್ಮಾಣಕ್ಕೆ ಸಜ್ಜಾಗುತ್ತಿದೆ ಎಂದರು.

ಮಾಕೋನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎನ್.ಅಶ್ವತ್ ನೂತನ ಕಟ್ಟಡ ನಿರ್ಮಿಸುವಾಗ ವಾಹನ ನಿಲುಗಡೆಗೆ ಸೂಕ್ತ ಪಾರ್ಕಿಗ್ ವ್ಯವಸ್ಥೆ ಮಾಡಿ ಕಟ್ಟಡ ನಿರ್ಮಿಸುವಂತೆ ಸಲಹೇ ನೀಡಿದರು. ಮತ್ತು ರೈತಭವನದಲ್ಲಿರುವ ಕುರ್ಚಿಗಳು ಬಹಳ ಹಳೆಯದಾಗಿದ್ದು ಕೆಲವೊಂದು ಒಡೆದುಹೋಗಿರುವ ಬಗ್ಗೆ ತಿಳಿಸಿ ಹೊಸ ಕುರ್ಚಿಗಳ ಅಳವಡಿಕೆಯ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದರು. ಮತ್ತು ಸಭೆಗೆ ಆಗಮಿಸಿದ್ದ ಸದಸ್ಯರುಗಳು ರೈತ ಭವನದ ಕೆಲವು ಲೋಪಗಳನ್ನು ಸರಿ ಪಡಿಸಿಕೊಳ್ಳುವಂತೆ ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಲೋಪಗಳನ್ಮ್ನ ಸರಿ ಪಡಿಸುವ ಭರವಸೆಯನ್ಮ್ನ ಅಧ್ಯಕ್ಷರು ಹಾಗೂ ಆಡಳಿತ ಮಂಡಲಿ ನಿರ್ದೆಶಕರುಗಳು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ, ನಿವೃತ್ತಿ ಹೊಂದಿದ ನೌಕರರಿಗೆ ಹಾಗೂ ಸಂಘದ ಸದಸ್ಯರುಗಳಿಗೆ ಸನ್ಮಾನಿಸಿ ಅಭಿನಂದಿಸಿದರು.

ವ್ಯವಸ್ಥಾಪಕ ನಿರ್ದೇಶಕ ಹೆಚ್.ಹೆಚ್.ವಿವೇಕ್ ವಾರ್ಷಿಕ ವರದಿ ಓದಿದರು. 2025-26 ನೇ ಸಾಲಿನ ನಿವ್ವಳ ಲಾಭ ವಿನಿಯೋಗದ ಬಗ್ಗೆ ಆಡಳಿತ ಮಂಡಳಿಯವರು ಸರ್ವ ಸದಸ್ಯರ ಅನುಮೋದನೆಗೆ ಶಿಪಾರಸ್ಮ್ಸ ಮಾಡಿದ್ದು, ಆಪದ್ಧನ ಶೇ 25 ರಂತೆ 30,12,839=00, ಸಹಕಾರ ಶಿಕ್ಷನ ನಿಧಿ , ಸಂಘದ ನೌಕರರಿಗೆ ಬೋನಸ್, ಸರ್ಕಾರಕ್ಕೆ ಷೇರು ಡಿಡೆಂಡ್, ಸದಸ್ಯರುಗಳಿಗೆ ಷೇರು ಡಿವಿಡೆಂಡ್, ಕಟ್ಟಡ ನಿಧಿ, ಸರ್ಕಾರ ಪಾಲು ಬಂಡವಾಳ ವಿಮೋಚನಾ ನಿಧಿ, ಬೆಲೆ ಏರಿಳಿತ ನಿಧಿ, ವೇತನ ಸಮೀಕರಣ ನಿಧಿ (ಕಲ್ಯಾಣನಿಧಿ), ಸಂಘಗಳ ಮುಖಾಂತರ ಸದಸ್ಯರುಗಳಿಗೆ ಕೃಷಿ ಉತ್ಪನ್ನಗಳ ಮರಾಟ ಮಾಡಿದ ಬಗ್ಗೆ ರಿಬ್ಭೆಟ್, ಸಂಘದ ಸದಸ್ಯರ ನಿಧಿಗೆ, ಧರ್ಮದ ನಿಧಿ, ಚುನಾವಣಾ ನಿಧಿ, ಪ್ರತಿಭಾ ಪುರಸ್ಕಾರ ನಿಧಿ, ಉಳಿಕೆ ಆಪದ್ಧನಕ್ಕೆ ಒಟ್ಟು 30,12,839=00 ರೂ ಗಳು ಲಾಭದಲ್ಲಿ ಇದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ಸಹಕಾರಿ ದುರಿಣ ಹಿರಿಯರಾದ ಓ.ಎಸ್.ಗೋಪಾಗೌಡರು ಉದ್ಘಾಟಿಸಿದರು,  ನಿರ್ದೇಶಕ ಎಂ.ಕೆ.ಚಂದ್ರೇಶ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ಕೆ.ಬಿ.ಗಣೇಶ್, ನಿರ್ದೇಶಕರುಗಳಾದ ಟಿ.ಎಂ.ಗಜೇಂದ್ರ, ರಂಜನ್ ಅಜಿತ್ ಕುಮಾರ್,  ಎಂ.ಎಸ್.ಪ್ರಸನ್ನ, ಜಿ.ಎಂ.ಪ್ರಸನ್ನ ಕುಮಾರ್, ಪಿ.ಜಿ.ಅನುಕುಮಾರ್, ಶ್ರೀಮತಿ ಬಿ.ಎಲ್.ವಿದ್ಯಾ, ಶ್ರೀಮತಿ ಪುಟ್ಟಮ್ಮ ಎಸ್.ಸಿ., ಟಿ.ಎ.ಶೇಖರ್ ಬಂಗೇರ, ರಮೇಶ್ , ಈಶ್ವರ್ ಗೌಡ, ಹೆಚ್.ಜಿ.ಉತ್ತಮ ಕುಮಾರ್,ಹೆಚ್.ಎಸ್.ಮಂಜುನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಿ.ಕೆ. ದಿವಾಕರ್, ಹಿರಿಯ ಸಹಕಾರಿಗಳಾದ ಎನ್.ಜೆ.ಜಯರಾಂ, ಬಿ.ಎನ್.ಜಯಂತ್, ಡಿ.ಬಿ.ಜಯಪ್ರಕಾಶ್ ಮುಂತಾದವರು ಭಾಗವಹಿಸಿದ್ದರು.

 

 

Leave a Reply

Your email address will not be published. Required fields are marked *