September 30, 2026
;
okkaliga

 

 

ದಿನಾಂಕ:27:09:2026ನೇ ಭಾನುವಾರ ಅಖಿಲ ಭಾರತ ಒಕ್ಕಲಿಗರ ಮಹಾ ಸಭಾ ಮತ್ತು ಒಕ್ಕಲಿಗರ ಪರಿಷತ್ ಹಾಗೂ ಕೃಷ್ಣಪ್ಪ ರಂಗಮ್ಮ ಸಮಾಜ ಸೇವಾ ಪ್ರತಿಷ್ಠಾನ ಸಹಯೋಗದಲ್ಲಿ ಬೆಂಗಳೂರಿನ ಟಿ. ದಾಸರಹಳ್ಳಿಯ ಶ್ರೀ ಸಾಯಿ ಕಲ್ಯಾಣ ಮಂಟಪದಲ್ಲಿ ರಾಜ್ಯಮಟ್ಟದ ಒಕ್ಕಲಿಗ ಹಾಗೂ ಅದರ 116 ಉಪಜಾತಿಗಳ ಸ್ನೇಹ ಮಿಲನ ಅಭಿನಂದನಾ ಸಮಾರಂಭ ನೆರವೇರಿತು.

ಸಮಾರಂಭದಲ್ಲಿ ಮೂಡಿಗೆರೆ ತಾಲ್ಲೂಕು ಅಬಚೂರಿನ ದಿವಂಗತ ಹೆಚ್. ಬಿ. ಬೈರಪ್ಪ ಮತ್ತು ಸಿದ್ದಮ್ಮ ದಂಪತಿಗಳ ಮಗನಾದ ದಿವಂಗತ ಹೆಚ್. ಬಿ. ಲಕ್ಷ್ಮೀಪತಿ ಹಾಗೂ ಚಿಕ್ಕಮ್ಮ ದಂಪತಿಗಳ ಮಗ ವಿಶ್ವಮಡಿಒಕ್ಕಲಿಗ ಮಹಾ ಸಂಘದ ಮೂಡಿಗೆರೆ ತಾಲ್ಲೂಕು ಅಧ್ಯಕ್ಷರಾದ ಹೆಚ್. ಎಲ್. ಮಯೂರ್ ರವರಿಗೆ “ಒಕ್ಕಲಿಗ ರತ್ನ ಪ್ರಶಸ್ತಿ 2026” ನೀಡಿ ಗೌರವಿಸಲಾಯಿತು.

ಹಾಗೂ 2025-26 ನೇ ಸಾಲಿನಲ್ಲಿ 10ನೇ ತರಗತಿಯಲ್ಲಿ 90%ಗಿಂತ ಹೆಚ್ಚು ಅಂಕಪಡೆದ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿಯ ಗಬ್ ಗಲ್ ಗ್ರಾಮದ ಉಮೇಶ್ ಮತ್ತು ಸುಮಾ ದಂಪತಿಗಳ ಪುತ್ರ ದಿಗಂತ್,, ಗೋಣಿಬೀಡು ಹೋಬಳಿಯ ಕಿರಗುಂದ ಗ್ರಾಮದ ಕೆ. ಎ. ಶಿವಕುಮಾರ್ ಮತ್ತು ಯು. ಹೆಚ್. ರಜಿನಿ ದಂಪತಿಗಳ ಪುತ್ರಿ ತನಿಷ್ಕ,,  ಜಿ. ಹೊಸಹಳ್ಳಿಯ ಹೆಚ್. ಕೆ. ಸಣ್ಣಪ್ಪಗೌಡ ಮತ್ತು ಕೆ. ಪಿ.ಬಿಂದುಮತಿ ದಂಪತಿಗಳ ಪುತ್ರಿ ಹೆಚ್. ಎಸ್. ಅಧಿತಿ ಹಾಗೂ 12ನೇ ತರಗತಿಯಲ್ಲಿ 90%ಗಿಂತ ಹೆಚ್ಚು ಅಂಕ ಪಡೆದ ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಹೋಬಳಿಯ ಕಣಚೂರು ಗ್ರಾಮದ ಕೆ. ಎ. ಅರುಣ್ ಮತ್ತು ರಶ್ಮಿ ದಂಪತಿಗಳ ಪುತ್ರ ಕೆ.ಎ. ಉಲ್ಲಾಸ್, ಕಸಬಾ ಹೋಬಳಿ ಕೃಷ್ಣಾಪುರ ಗ್ರಾಮದ ಹೆಚ್. ಕೆ. ವಿಶ್ವನಾಥ್ ಮತ್ತು ಗೀತಾ ದಂಪತಿಗಳ ಪುತ್ರಿ. ವಿ.ಮೌಲ್ಯ, ಅಬಚೂರು ಗ್ರಾಮದ ಹೆಚ್. ಎಲ್. ಮುರಳಿಮೋಹನ್ ಮತ್ತು ಎಂ. ಕೆ. ರಜನಿ ದಂಪತಿಗಳ ಪುತ್ರಿ ಎ. ಎಂ. ಅದಿತಿ, ಹಾಲೂರು ಗ್ರಾಮದ ಹೆಚ್. ಎಂ. ದೀಪಕ್ ಮತ್ತು ದೀಪಿಕಾ ದಂಪತಿಗಳ ಪುತ್ರಿ ದಿಶಾದೀಪಕ್, ಗೋಣಿಬೀಡು ಹೋಬಳಿ ಜಿ. ಹೊಸಹಳ್ಳಿ ಗ್ರಾಮದ ಹೆಚ್. ಎ. ರವಿ ಮತ್ತು ಸುಗುಣ ದಂಪತಿಗಳ ಪುತ್ರಿ ಹೆಚ್. ಆರ್. ತನಿಷ್ಕ,ಕಣಚೂರು ಗ್ರಾಮದ ಕೆ. ಎಂ. ಪ್ರದೀಪ್ ಮತ್ತು ಕೆ. ಎಂ. ಚೈತ್ರ ದಂಪತಿಗಳ ಪುತ್ರ ಕೆ. ಪಿ.ಸಮರ್ಥ್ ಆರ್ಯನ್, ಈ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯಾರಿಗೆ ಪ್ರತಿಭಾ ಪುರಸ್ಕಾರ ಗೌರವ ಪ್ರಧಾನ ಮಾಡಲಾಯಿತು.

 

 

Leave a Reply

Your email address will not be published. Required fields are marked *