ಆಲ್ದೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ, ಆಯೋಜಿಸಲಾಗಿತ್ತು.
ತಾಲೂಕು ಸಂಯೋಜಕರಾದ ಕುಮಾರಸ್ವಾಮಿ ಪ್ರಾಸ್ತಾವಿಕ ವಿಷಯ ಮಂಡನೆಯಲ್ಲಿ ಅಜೆಂಡಾವನ್ನು ವ್ಯತ್ಯಾಸ ಮಾಡಿದ್ದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದಿನ ಗ್ರಾಮ ಸಭೆ ರದ್ದಾಗಲು ಸರಿಯಾದ ಸಮಯ ಕಾರಣ ನೀಡಬೇಕೆಂದು ಮತ್ತು ಅಂದು ಸಭೆಗೆ ಕರ ಪತ್ರ ಇನ್ನಿತರ ಖರ್ಚಿನ ಹಣ ವ್ಯಯವನ್ನು ಜನರ ತೆರಿಗೆ ಹಣದಲ್ಲಿ ಮಾಡುವಂತಿಲ್ಲ ಎಂದು ಗ್ರಾಮಸ್ಥರು ಆಗ್ರಹಿಸಿದ ಹಿನ್ನೆಲೆ ಸಭೆಗೆ ಪ್ರತಿಕ್ರಿಯೆ ನೀಡಿದ ಆಡಳಿತ ಅಧಿಕಾರಿ ಟಿ ಆರ್ ರುದ್ರಪ್ಪ ಈ ಕುರಿತು ಪಿಡಿಒ ರವರಿಗೆ ಮೇಲಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ ಮತ್ತು ಕರ ಪತ್ರದ ಖರ್ಚನ್ನು ಪಿಡಿಓ ರವರು ವೈಯಕ್ತಿಕವಾಗಿ ಭರಿಸಲಿದ್ದಾರೆ ಎಂದು ತಿಳಿಸಿದರು.
ಬಳಿಕ ಸ್ಥಳೀಯರಾದ ಸಿಡಿ ಶಿವಕುಮಾರ್, ಮನು, ಮಾಜಿ ಪಂಚಾಯತಿ ಸದಸ್ಯ ಭರತ್, ಲೆಕ್ಕಪರಿಶೋಧನೆಯ ಕಡತಗಳಲ್ಲಿ ಸಾಕಷ್ಟು ಲೋಪದೋಷಗಳಿವೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಂಯೋಜಿಕ ಕುಮಾರಸ್ವಾಮಿ, 87 35 ಬ್ಯಾಂಕ್ ಎನ್ಎಂಆರ್ ನಲ್ಲಿ ಕೂಲಿ ಕಾರ್ಮಿಕರ ಸಹಿ ಹಾಕಿಸಿಲ್ಲ, ಪ್ರಾರಂಭ ಪತ್ರ ಇಲ್ಲ ಅಧ್ಯಕ್ಷರು ಮತ್ತು ಪಿಡಿಒ ಸಹಿ ಹಾಕಿಲ್ಲ ಕಾಮಗಾರಿ ಕುರಿತ ಛಾಯಾಚಿತ್ರಗಳನ್ನು ಲಗತ್ತಿಸಿಲ್ಲ ಎಂದು ಕಡತಗಳ ನ್ಯೂನ್ಯತೆಗಳನ್ನು ಸಭೆಯಲ್ಲಿ ತಿಳಿಸಿದರು.
ಕಠಾರದಹಳ್ಳಿ ಶಿವಕುಮಾರ್, ಕೃಪಾಕ್ಷ ಕೋಟ್ಯಾನ್, ಮನು, ಜೀವನ್, ತೀರ್ಥ ಕುಮಾರ್, ಮುಸ್ತಫ, ಕಾಮಗಾರಿಗಳ ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವಂತೆ ಒತ್ತಾಯಿಸಿದರು.
ತುಡುಕೂರು ಗ್ರಾಮಸ್ಥರುಗಳಾದ ಚಂದ್ರಶೇಖರ್, ಸಾಗರ್, ರಮೇಶ್, ಯೋಗೇಶ್, ಕಾಲಿ ಕೊಡಗಳನ್ನು ತಂದು ಸಭೆಯ ಮೇಜಿನ ಮೇಲೆ ಇರಿಸಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ ಎಂದು ಅಧಿಕಾರಿಗಳ ಮುಂದೆ ಅಳಲನ್ನು ತೋಡಿಕೊಂಡರು. ಪಿಡಿಒ ಶಂಶುನ್ ನಹರ್ ಪರ್ಯಾಯವಾಗಿ ನೀರಿನ ಟ್ಯಾಂಕರ್ ವ್ಯವಸ್ಥೆಯನ್ನು ಮಾಡುವ ಭರವಸೆಯನ್ನು ಸಭೆಯಲ್ಲಿ ನೀಡಿದರು.
ಗ್ರಾಮಸ್ಥರುಗಳಿಗೆ ಸಭೆಯಲ್ಲಿ ಪ್ರತಿಕ್ರಿಯೆ ನೀಡಿದ ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿ ಮತ್ತು ನೋಡಲ್ ಆಫೀಸರ್ ಲಕ್ಷ್ಮಿ, ಸಭೆಯಲ್ಲಿ ಗ್ರಾಮಸ್ಥರಿಂದ ಬಂದಿರುವ ಮನವಿ ಚರ್ಚೆ ವಿಷಯಗಳ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಪಂಚಾಯಿತಿ ಮಾಜಿ ಸದಸ್ಯರುಗಳಾದ ಡಿ ಬಿ ಅಶೋಕ್, ಎಡಿ ಕೌಶಿಕ್, ಹೆಚ್ ನವರಾಜು,ಬೇಬಿ ಲಕ್ಷ್ಮಿ, ಸವಿತಾ, ಮುಖಂಡರಾದ ಗಾಳಿ ಗಂಡಿ ಸುಂದರ್, ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು, ಪಂಚಾಯಿತಿ ಸಿಬ್ಬಂದಿಗಳಾದ ಪ್ರವೀಣ್, ವಾಣಿ, ಮಂಜುನಾಥ್,
ಎಲ್ಲ ವಾರ್ಡಿನ ಗ್ರಾಮಸ್ಥರುಗಳು ಭಾಗವಹಿಸಿದ್ದರು.


